ನಿಪ್ಪಾಣಿ ಹಾಲಸಿದ್ದನಾಥ ಶುಗರ್ಸ್ನಿಂದ ರೈತರ ಕಬ್ಬಿಗೆ ಯೋಗ್ಯ ಬೆಲೆ: ಸಂಸದ ಜೊಲ್ಲೆ
ಚಿಕ್ಕೋಡಿ 26: ಗಡಿ ಭಾಗದಲ್ಲಿ ಇರುವ ನಿಪ್ಪಾಣಿ ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆಯು ಯೋಗ್ಯ ದರ ನೀಡುವ ಮೂಲಕ ರೈತರ ಬೆನ್ನಿಗೆ ನಿಂತುಕೊಂಡಿದೆ. ಸರ್ಕಾರದ ಎಫ್ಆರ್ಪಿ ಮಾದರಿಯಲ್ಲಿಯೇ ರೈತರಿಗೆ ಬಿಲ್ ಸಿಗುತ್ತದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ನಿಪ್ಪಾಣಿಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ 34 ನೇ ವಾಷರ್ಿಕ ಸರ್ವ ಸಾಧಾರಣ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅನ್ನದಾತರ ಬೆಳೆಗೆ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಉತ್ತಮ ರೀತಿಯಲ್ಲಿ ಪ್ರತಿಫಲ ನೀಡುತ್ತಿದೆ. ಸಕಾಲದಲ್ಲಿ ರೈತರು ಬೆಳೆದ ಕಬ್ಬನ್ನು ಅರಿಯುವುದು, ಉಪ ಉತ್ಪನ್ನಗಳ ಲಾಭಾಂಶ, ಕಬ್ಬಿನ ದರ ನಿಗದಿ, ಪಾವತಿಯು ಸೇರಿದಂತೆ ಎಲ್ಲವನ್ನು ಉತ್ತಮವಾಗಿ ನಿರ್ವಹಿಸುತ್ತಿದೆ ಎಂದರು.
ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಮಾತನಾಡಿ, ಸಹಕಾರಿ ಕ್ಷೇತ್ರದ ಅಧೀನದಲ್ಲಿ ನಡೆಯುತ್ತಿರುವ ಕಾರ್ಖಾನೆಯ ಆಡಳಿತ ಮಂಡಳಿಯ ಕಾರ್ಯ ಮೆಚ್ಚುವಂತದ್ದು. ನಮ್ಮ ಸರ್ಕಾರ ವೂ ರೈತರ ಪರವಾಗಿದ್ದು, ಅನ್ನದಾತರ ಅಭ್ಯುದಯಕ್ಕಾಗಿ ನಮ್ಮ ಶ್ರಮ ಅವಿರತವಾಗಿರುತ್ತದೆ. ಕಾರ್ಖಾನೆಗೆ ಅಗತ್ಯ ನೆರವನ್ನು ನೀಡಲು ನಮ್ಮ ಸಹಕಾರ ಸದಾ ಇರುತ್ತದೆ ಎಂದರು.
ಅಧ್ಯಕ್ಷತೆಯನ್ನು ಕಾರ್ಖಾನೆಯ ಅಧ್ಯಕ್ಷ ಚಂದ್ರಕಾಂತ ಕೋಟಿವಾಲೆ ವಹಿಸಿ ಮಾತನಾಡಿದರು.
ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಜ್ಯೋತಿಪ್ರಸಾದ ಜೊಲ್ಲೆ, ಸಕ್ಕರೆ ಕಾಖರ್ಾನೆಯ ಉಪಾಧ್ಯಕ್ಷರಾದ, ಎಂ. ಪಿ. ಪಾಟೀಲ, ನಿರ್ದೇಶಕ ಮಂಡಳಿಯ ಸದಸ್ಯರು, ವ್ಯವಸ್ಥಾಪಕ ನಿರ್ದೇಶಕರು, ಸಿಬ್ಬಂದಿಗಳು ಹಾಗೂ ಸದಸ್ಯರು ಹಾಜರಿದ್ದರು