ಕಾಲುವೆಯಲ್ಲಿ ಜಾರಿಬಿದ್ದು ಸಾವು: ಶಾಸಕ ನಾಗೇಂದ್ರ ಭೇಟಿ ಸಾಂತ್ವನ

ಕಾಲುವೆಯಲ್ಲಿ ಜಾರಿಬಿದ್ದು ಸಾವು: ಶಾಸಕ ನಾಗೇಂದ್ರ ಭೇಟಿ ಸಾಂತ್ವನ

ಬಳ್ಳಾರಿ10: ಎಚ್ಎಲ್ಸಿ ಕಾಲುವೆಯಲ್ಲಿ ಇತ್ತೀಚೆಗೆ ಕಾಲುಜಾರಿಬಿದ್ದು ಸೆಂಟ್ ಮೇರಿ ಕಾಲೋನಿಯ ನಿವಾಸಿ ಹ್ಯಾರಿ ಅವರ ಇಬ್ಬರು ಚಿಕ್ಕಹೆಣ್ಮಕ್ಕಳ ಸಾವನ್ನಪ್ಪಿದ ಹಿನ್ನೆಲೆ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಅವರು ಶುಕ್ರವಾರ ಹ್ಯಾರಿ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಕುಟುಂಬದವರಿಗೆ ಸಾಂತ್ವಾನ ಹೇಳಿದರು.

   ಶಾಸಕರ ಅನುದಾನದ ಅಡಿ 5ಲಕ್ಷ ರೂ.ಗಳ ಪರಿಹಾರ ಒದಗಿಸಲಾಗುವುದು. ಈ ಮಕ್ಕಳ ತಂದೆ-ತಾಯಿ ಕೂಲಿಕಾಮರ್ಿಕರಾಗಿರುವ ಕಾರಣ ಮತ್ತು ಅವರಿಗೆ ಮನೆ ಇಲ್ಲದಿರುವುದನ್ನು ಅರಿತು ಅವರು ಒಂದು ಮನೆ ನಿಮರ್ಿಸಿಕೊಡಲು ಉಪಸ್ಥಿತರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

    ಇದೇ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ ಪ್ರಸಾದ, ಜೆರಿ,ಚಕ್ರಿ,ಸೋಮು, ಆಯಾಸ್ ಖಾನ್, ಅಲ್ಲಾಭಕ್ಷ,ಪಿ.ಶೇಖರ ಸೇರಿದಂತೆ ಅನೇಕರು ಇದ್ದರು.


ಸುದ್ದಿ ಓದಿ