ದಾಸಶ್ರೇಷ್ಠ ಪ್ರಸನ್ನ ವೆಂಕಟದಾಸರ ಚಲನಚಿತ್ರ ವೀಕ್ಷಣೆ
ಬಳ್ಳಾರಿ11: ಕರ್ನಾಟಕ ದಾಸ ಸಾಹಿತ್ಯಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ ಶ್ರೇಷ್ಠ ದಾಸವರೇಣ್ಯ ಪ್ರಸನ್ನ ವೆಂಕಟ ದಾಸರ ಕುರಿತು ಚಲನ ಚಿತ್ರ ಇಂದು ಬೆಳ್ಳಿತೆರೆಗೆ ಬಂದಿರುವುದು ಸಂತಸ ಮೂಡಿಸಿದೆ.ವಚನ ಸಾಹಿತ್ಯ ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಮಹನೀಯರ ಚಿತ್ರಗಳು ಹೆಚ್ಚು ಹೆಚ್ಚು ತೆರೆಮೇಲೆ ಬರಲಿ ಎಂದು ಜ್ಯೋತಿಷಿ ಹಾಗೂ ಶ್ರೀಗೌತಮ ಸೂರ್ಯ ಸಿದ್ಧಾಂತ ಪಂಚಾಂಗ ಕರ್ತೃ ಗುರುರಾಜ ಕುಲಕರ್ಣಿ ಅವರು ಅಭಿಪ್ರಾಯ ಪಟ್ಟರು. ನಗರದ ಉಮಾ ಚಿತ್ರಮಂದಿರದಲ್ಲಿ ಪ್ರಸನ್ನ ವೆಂಕಟದಾಸರ ಚಲನ ಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.ಪ್ರಸ್ತುತ ದಿನಗಳಲ್ಲಿ ಇಂತಹ ಚಿತ್ರಗಳು ಹೆಚ್ಚು ಹೆಚ್ಚು ಬಿಡುಗಡೆಯಾಗಬೇಕು, ಅವರ ಸಂದೇಶಗಳು ಆದರ್ಶ ಪ್ರಾಯವಾಗಿದ್ದು ಇಂದಿನ ಯುವ ಪೀಳಿಗೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು. ಬಳ್ಳಾರಿಯ ಹಲವಾರು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮಹಿಳಾ ಭಜನಾ ಮಂಡಳಿ ಸದಸ್ಯರು ಬ್ರಾಹ್ಮಣ ಸಮಾಜದ ಮುಖಂಡರಾದ ಕೆ.ಕೃಷ್ಣಮೂರ್ತಿ ರಾವ್, ಬಿ.ಅನಂತ್ ಆಚಾರ್ಯ, ಎಂ.ಭೀಮರಾವ್ ಕುಲಕರ್ಣಿ, ರಾಘವೇಂದ್ರ ಜನಕ, ಅನಿಲ್ ಕುಮಾರ್ ಎಂ.ನರಸಿಂಹ, ಅನಿಕೇತನ, ಪೂರ್ಣ ಚಂದ್ರ, ಜಿ.ಎಂ.ಸುಗುಣ, ವಿಜಯಲಕ್ಷ್ಮಿ ಕುಲಕರ್ಣಿ, ಶಶಿಕಲಾ ರೌಡೂರ, ಪರಿಮಳ, ಮೇಘ,ಕವಿತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.