ಸಂಸ್ಕೃತಿ ಪ್ರಾಥಮಿಕ ಶಾಲೆಯಲ್ಲಿ ಅಮರ ಅಪ್ಪುಗೆ ನೃತ್ಯ ನಮನ ಕಾರ್ಯಕ್ರಮ
ಶಿಗ್ಗಾವಿ 12: ಅಮರ ಅಪ್ಪುಗೆ ನೃತ್ಯ ನಮನ ಕಾರ್ಯಕ್ರಮವನ್ನು ಮಲ್ಲಪ್ಪಾ ಪುಟ್ಟಪ್ಪಾ ಮೊರಬದ ಶಿಕ್ಷಣ ಸಂಸ್ಥೆಯ ಸಂಸ್ಕೃತಿ ಪ್ರಾಥಮಿಕ ಶಾಲೆ ಶಿಗ್ಗಾವಿಯಲ್ಲಿ ಜ.13 ಶನಿವಾರ ಸಾಯಂಕಾಲ 5ಗಂಟೆಗೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ದೇವರಾಜ ಸುಣಗಾರ ತಿಳಿಸಿದ್ದಾರೆ.
ಪಟ್ಟಣದ ಸಂಸ್ಕೃತಿ ಪ್ರಾಥಮಿಕ ಶಾಲೆಯಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಮಕ್ಕಳು ಕೌಟುಂಬಿಕವಾಗಿ ಮತ್ತು ಓಧ್ಯೋಗಿಕವಾಗಿ ಬೆಳೆಯುತ್ತಿದ್ದು, ಸಾಮಾಜಿಕ ಜವಾದ್ಭಾರಿಗಳಿಂದ ದೂರ ಉಳಿಯುತ್ತಿದ್ದಾರೆ. ಮಕ್ಕಳಲ್ಲಿ ಸಾಮಾಜಿಕ ಕಳಕಳಿ ಮತ್ತು ಹೊಣೆಗಾರಿಕೆಯ ಅರಿವು ಮೂಡಿಸಲು, ಇಂದಿನ ಸಮಾಜಕ್ಕೆ ಮಾದರಿಯಾದ ಪುನಿತರಾಜಕುಮಾರ ಅವರ ಸಾಮಾಜಿಕ ಕಳಕಳಿಯ ಚಿಂತನೆಗಳನ್ನು ಮಕ್ಕಳಲ್ಲಿ ಮೂಡಿಸುವುದಕ್ಕೆ, ನಮ್ಮ ಶಾಲೆಯ ವಾರ್ಷಿಕೋತ್ಸವದಲ್ಲಿ ಪುನಿತರಾಜಕುಮಾರ ಅವರಿಗೆ ಮಕ್ಕಳಿಂದ ಅವರ ಹಾಡುಗಳಿಗೆ ನೃತ್ಯಮಾಡಿಸುವ ಮೂಲಕ ಸಾಮಾಜಿಕ ಹೊಣೆಗಾರಿಕೆಯ ಅರಿವು ಮೂಡಿಸಲಾಗುತ್ತಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಭಾರತ ಸೇವಾ ಸಂಸ್ಥೆಯಅಧ್ಯಕ್ಷ ಶ್ರೀಕಾಂತ ಬ. ದುಂಡಿಗೌಡ್ರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ, ತಾಲೂಕಾ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ, ಶಿಗ್ಗಾವಿ ಠಾಣೆಯ ಪಿಎಸ್ಐ ಉಮಾಚಂದ್ರ ಕಾಂತ ಪಾಟೀಲ ಸೇರಿದಂತೆ ಪಟ್ಟಣದ ಪುನಿತರಾಜಕುಮಾರ ಅಭಿಮಾನಿ ಬಳಗ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.