ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಸೈಕ್ಲಿಂಗ್ ಸ್ಪರ್ಧೆ: ಮುಗಳಿ
ಲೋಕದರ್ಶನ ವರದಿ
ಸವದತ್ತಿ 23: ಹೈಸ್ಕೂಲ್ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಸೈಕ್ಲಿಂಗ್ ಸ್ಪರ್ಧೆಗಳನ್ನು ರಾಜ್ಯದ ಪ್ರತಿಯೊಂದು ಶಾಲೆಗಳಲ್ಲಿ ಆಯೋಜಿಸುವದು ಅತ್ಯವಶ್ಯವಾಗಿದ್ದು, ಆ ನಿಟ್ಟಿನಲ್ಲಿ ಕೆ.ಎಮ್.ಎಫ್ವತಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಸೈಕ್ಲಿಂಗ್ ಸ್ಪರ್ಧೆಗಳನ್ನು ಪ್ರಾರಂಭಿಸಲಾಗಿದೆ ಎಂದು ಕೆ.ಎಮ್.ಎಫ್ ನಿರ್ದೇಶಕ ಎಸ್.ಎಸ್.ಮುಗಳಿ ಹೇಳಿದರು.
ಪಟ್ಟಣದ ಕುಮಾರೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಸೈಕ್ಲಿಂಗ್ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಪ್ರತಿಭಾನ್ವೇಶಣೆಯ ನಂದಿನಿ ಸೈಕ್ಲಿಂಗ್ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಬೆಳಗಾವಿ ಜಿಲ್ಲೆಯಲ್ಲಿ ಕೆ.ಎಮ್.ಎಫ್ದಿಂದ ಆಯೋಜಿಸಿರುವ ಸೈಕ್ಲಿಂಗ್ ಸ್ಪರ್ಧೆಯ ರಾಜ್ಯದ ವಿವಿಧ ಜಿಲ್ಲೆಗಳಿಗೆ ಮಾದರಿಯಾಗಿದ್ದು, ಮುಂಬರುವಂತ ದಿನಗಳಲ್ಲಿ ರಾಜ್ಯದಾದ್ಯಂತ ಈ ಸ್ಪರ್ಧೆಗಳನ್ನು ಆಯೋಜಿಸುವ ಗುರಿ ಹೊಂದಲಾಗಿದೆ ಎಂದರು.
ಬಹುಮಾನ ವಿತರಿಸಿ ಪಿಎಸ್ಐ ಪ್ರವೀಣ ಗಂಗೊಳ್ಳಿ ಮಾತನಾಡಿ, ವಿದ್ಯಾಥರ್ಿಗಳಲ್ಲಿ ದೈಹಿಕ ಸಾಮಥ್ರ್ಯವನ್ನು ವೃದ್ದಿಸುವದರ ಜೊತೆಗೆ ಉತ್ತಮ ಆರೋಗ್ಯವನ್ನು ಸೈಕ್ಲಿಂಗ್ನಿಂದ ಪಡೆಯಲು ಸಾಧ್ಯವಾಗಿದ್ದು, ಮಕ್ಕಳಲ್ಲಿ ಸೈಕ್ಲಿಂಗ್ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಶಿಕ್ಷಕರು ಮತ್ತು ಪಾಲಕರು ಪ್ರೋತ್ಸಾಹ ನೀಡಬೇಕೆಂದರು.
ಜಿಲ್ಲಾ ಸೈಕ್ಲಿಂಗ್ ಸಂಸ್ಥೆಯ ಆರ್.ಎಚ್.ಪೂಜೇರ ಮಾತನಾಡಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಸೈಕ್ಲಿಂಗ್ ಸ್ಪರ್ಧೆಗೆ ಶಿಕ್ಷಣ ಇಲಾಖೆಯ ಜೊತೆಗೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಹಕಾರ ನೀಡಿ ಈ ಕ್ರೀಡೆಗೆ ಮೆರಗು ತಂದಿದ್ದಾರೆ ಎಂದರು. ಬೆಳಗಾವಿ ಜಿಲ್ಲೆಯಲ್ಲಿ ಸವದತ್ತಿಯಲ್ಲಿ 10ನೇ ಸೈಕ್ಲಿಂಗ್ ಸ್ಪರ್ಧೆಯನ್ನು ಇಲ್ಲಿ ಆಯೋಜಿಸಲಾಗಿದೆ ಎಂದರು.
ಸೈಕ್ಲಿಂಗ್ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಪ್ರಜ್ವಲ ಅರ್ಜುನ ಮುನವಳ್ಳಿ ಪ್ರಥಮ, ಮಂಜುನಾಥ ಜ್ಞಾನೇಶ್ವರ ಗೋಂಧಳಿ ದ್ವಿತೀಯ, ಜೀಶಾನ ಬಾಬಾಜಾನ ವಂಟಮುರಿ ತೃತೀಯ ಸ್ಥಾನ ಪಡೆದುಕೊಂಡರು.
ಸೈಕ್ಲಿಂಗ್ ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ತೇಜಶ್ವಿನಿ ಹಿರೇಮಠ ಪ್ರಥಮ, ವನೀತಾ ವೀರಕರ ದ್ವಿತೀಯ, ಸನಾ ಪಾಟೀಲ ತೃತೀಯ ಸ್ಥಾನ ಪಡೆದುಕೊಂಡರು.
ಸದಾಶಿವ ಕೌಜಲಗಿ, ಎಎಸ್ಐ ಎಮ್.ಬಿ.ಬಿರಾದಾರ, ಉಪಕೇಂದ್ರ ಅಧಿಕಾರಿ ಜಿ.ಎಫ್.ಪತ್ತಾರ, ಎಮ್.ಬಿ.ಕೊಪ್ಪದ, ಪುಂಡಲೀಕ ಬಾಳೋಜಿ, ಅನಂದ ಲಮಾನಿ, ಅಣ್ಣಪ್ಪ ಪವಾರ, ಎನ್.ಬಿ.ಚಂದರಗಿ, ಉಮೇಶ ನಾಯಕ ಹಾಗೂ ಪಟ್ಟಣದ ವಿವಿಧ ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರು ಮತ್ತು ವಿದ್ಯಾಥರ್ಿ ವಿದ್ಯಾಥರ್ಿನಿಯರು ಉಪಸ್ಥಿತರಿದ್ದರು.
ವಿಸ್ತೀರ್ಣಧಿಕಾರಿ ಮುಸ್ತಾಕಲಿ ನದಾಫ ನಿರೂಪಿಸಿ ವಂದಿಸಿದರು