ಆಲಾಪ ಸಂಗೀತ ಕಲಾ ಟ್ರಸ್ಟ್‌ನಲ್ಲಿ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ
Cultural program by various groups at Alapa Sangeet Kala Trust
ಬಳ್ಳಾರಿ 10: ಇವರು ಆಯೋಜಿಸಿದ್ದ, 2025-26ನೇ ಸಾಲಿನ ವಾರ್ಷಿಕ ಚಟುವಟಿಕೆಯಲ್ಲಿ ಆಲಾಪ್ ನಾಟಕೋತ್ಸವ, ನಿನ್ನೆ ಮಂಗಳವಾರ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ನಡುವಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಶಿಕ್ಷಕರಿಗೆ ಸನ್ಮಾನ ಹಾಗೂ ನಾಟಕ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿತ್ತು. ವೇದಿಕೆ ಕಾರ್ಯಕ್ರಮದಲ್ಲಿ ಹಾಜರಿದ್ದ, ಶಾಲೆಯ ಶಿಕ್ಷಕರು ಮತ್ತು ಆಡಳಿತ ವರ್ಗದವರಾದ ಸಂತೋಷ್, ಸುಪುತ್ರ.ಜಿ, ಶಶಿಧರ್.ಹೆಚ್, ತಿಪ್ಪಣ್ಣ.ಜೆ, ಪಿ.ಸಿ.ಬಸವರಾಜ್, ನಂದಿನಿ.ಪಿ, ಹೊನ್ನೂರ್ಪ.ಎಸ್, ಮತ್ತಿತರರು ಹಾಜರಿದ್ದರು. ವಿಜ್ಞಾನ ಶಿಕ್ಷಕರಾದ ಶಶಿಧರ್ ಅವರು ಶಾಲೆಯಲ್ಲಿ ನಾಟಕಗಳನ್ನು ಪ್ರದರ್ಶನ ಮಾಡುವುದರಿಂದ ಜೀವನ ಸತ್ಯಾಂಶ ತಿಳಿಯುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದರಿಂದ ಜನರ ಚಿಂತನೆಗಳನ್ನು ದೂರ ಮಾಡುತ್ತದೆ ಎಂದು ನುಡಿದರು.
ತದನಂತರ ಶಾಲೆಯ ಮಕ್ಕಳಿಂದ ನೃತ್ಯ ಪ್ರದರ್ಶನ ಹಾಗೂ ರಂಗ ನಿರ್ದೇಶಕರಾದ ಸೀರಿಗೇರಿ ಮಂಜುನಾಥ ಇವರ ತಂಡದಿಂದ ಸಂಸಾರದಲ್ಲಿ ಸ.ನಿ.ದ.ಪ ಎನ್ನುವ ನಾಟಕ ಅದ್ಬುತವಾಗಿ ಪ್ರದರ್ಶನಗೊಂಡಿತು. ನಾಟಕವನ್ನು ನೋಡಿದ ಶಾಲಾ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಹಾಗೂ ನಡುವಿ ಗ್ರಾಮದ ಮುಖಂಡರು ಜನಗಳು, ಕೊನೆಯಲ್ಲಿ ನಾಟಕದ ಕುರಿತಾಗಿ ಹಾಗೂ ಒಟ್ಟಾರೆ ಕಾರ್ಯಕ್ರಮದ ಕುರತಾಗಿ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು. ನಾಟಕವು ಪ್ರೇಕ್ಷಕರನ್ನು ಹಾಸ್ಯದ ನಗೆಗಡಲಲ್ಲಿ ತೇಲಿಸಿತು. ಆಲಾಪ್ ಸಂಗೀತ ಕಲಾ ಟ್ರಸ್ಟ್ ನ ಅಧ್ಯಕ್ಷರಾದ ರಮಣಪ್ಪ ಭಜಂತ್ರಿ ಇವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 