ಮಾನವೀಯ ಗುಣಗಳನ್ನು ಬೆಳಸಿಕೊಳ್ಳಿ:ಬಸವ ಪ್ರಭು
ತಾಳಿಕೋಟಿ:ಮನುಷ್ಯ ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಸದಾ ಸಮಾಜಮುಖಿ ಕಾರ್ಯಗಳನ್ನು ಮಾಡಲು ಪ್ರಯತ್ನಿಸಬೇಕು ಇಂತಹ ಒಳ್ಳೆಯ ಕಾರ್ಯಗಳನ್ನು ಮಾಡುವ ವ್ಯಕ್ತಿಗಳನ್ನೇ ದೇವರು ಮೆಚ್ಚುತ್ತಾನೆ ಗವಾಯಿ ದೀಪಕ ಸಿಂಗ್ ಹಜೇರಿ ಅವರಲ್ಲಿರುವ ಈ ಮಾನವೀಯ ಗುಣಗಳೇ ಅವರು ಸಂಗೀತ ಕ್ಷೇತ್ರದಲ್ಲಿ ಸೇವೆಯನ್ನು ಮಾಡಲು ಪ್ರೇರಣೆ ನೀಡಿವೆ ಎಂದು ಖ್ಯಾತ ಪ್ರವಚನಕಾರ ಬಸವ ಪ್ರಭು ದೇವರು ಹೇಳಿದರು.
ಪಟ್ಟಣದ ಬಸವ ಸಮಿತಿ ಸಭಾಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಜಪೂತ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಸುಗಮ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಜಪೂತ ಸಮಾಜದ ಕ್ಷೇಮಾಭಿವೃದ್ಧಿ ಸಂಘವು ಪಟ್ಟಣದಲ್ಲಿ ಹಲವಾರು ಸಮಾಜ ಸೇವಾ ಕಾರ್ಯಗಳನ್ನು ಮಾಡುವುದರ ಜೊತೆಗೆ ವಿಶೇಷವಾಗಿ ಸಂಗೀತವನ್ನು ಪ್ರೋತ್ಸಾಹಿಸಿ ಬೆಳೆಸಲು ಸಾಕಷ್ಟು ಪ್ರಯತ್ನಿಸುತ್ತಿದೆ ಗವಾಯಿ ದೀಪಕ್ ಸಿಂಗ್ ಹಜೇರಿ ಅವರು ತಮ್ಮನ್ನು ಸಂಪೂರ್ಣವಾಗಿ ಈ ಕಾರ್ಯಕ್ಕೆ ಅರ್ಪಿಸಿಕೊಂಡು ಸೇವೆಯನ್ನು ಮಾಡುತ್ತಿರುವುದು ಶ್ಲಾಘನೀಯವಾದ ಕಾರ್ಯವಾಗಿದೆ ಎಂದರು. ಹಿರಿಯ ಪತ್ರಕರ್ತ ಜಿ. ಟಿ. ಘೋರ್ಪಡೆ ಮಾತನಾಡಿ ಈ ಸಂಘವು ಪಟ್ಟಣದಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ ರಜಪೂತ ಸಮಾಜದ ಬಾಂಧವರು ಇಂದು ಎಲ್ಲಾ ರಂಗದಲ್ಲಿಯೂ ತಮ್ಮದೇ ಆದ ಅಮೂಲ್ಯ ಕೊಡುಗೆಯನ್ನು ನೀಡುತ್ತಿದ್ದಾರೆ ಗವಾಯಿ ದೀಪಕ್ ಸಿಂಗ್ ಹಜೇರಿ ಅವರ ಸಂಗೀತ ಸೇವೆಯು ಅನನ್ಯವಾಗಿದೆ ಎಂದರು. ರಜಪೂತ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ವಿಠಲ್ ಸಿಂಗ ಹಜೇರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶಿಕ್ಷಕ ಬಾಪು ಗೌಡ ವಂದಲಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ರಾಜು ಹಜೇರಿ. ಶಿಕ್ಷಕ ರಮೇಶ ಯರಕ್ಯಳ .ದೊಂಡಿ ಸಿಂಗ್ ಹಜೇರಿ. ಗೋವಿಂದ ಸಿಂಗ ಹಜೇರಿ. ಹಾಮರ್ೊನಿಯಂ ವಾದಕ ದೇವರಾಜ್ ಯರಕ್ಯಾಳ ಇದ್ದರು. ಗವಾಯಿ ದೀಪಕ ಸಿಂಗ್ ಹಜೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು ರಾಜು ಹಜೇರಿ ನಿರೂಪಿಸಿದರು