ಬೆಳೆ ಸಾಲಮನ್ನಾ: ಸಾಲ ಪಡೆದ ರೈತರು ಹೆಸರು ನೋದಾಯಿಸಿ: ಡಿಸಿ ರಾಮ್ಪ್ರಸಾತ್
ಬಳ್ಳಾರಿ 13: ಬಳ್ಳಾರಿ ಜಿಲ್ಲೆಯ ರೈತರ ಗಮನಕ್ಕೆ ತರುವುದೇನೆಂದರೆ, ಕನರ್ಾಟಕ ಸಕರ್ಾರವು ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡುವ ಸಲುವಾಗಿ ಒಂದು ತಂತ್ರಾಂಶವನ್ನು ತಂದಿದ್ದು, ಅದಕ್ಕಾಗಿ ಬಳ್ಳಾರಿ ಜಿಲ್ಲೆಯಲ್ಲಿ ಜಾರಿ ಮಾಡಲು ಕೆಲ ನಿದರ್ೇಶನಗಳನ್ನು ನೀಡಿರುತ್ತದೆ. ಅದಕ್ಕಾಗಿ ಬಳ್ಳಾರಿ ಜಿಲ್ಲೆಯ ಎಲ್ಲಾ ರೈತ ಬಾಂಧವರು ಬೆಳೆ ಸಾಲ ಪಡೆದ ಪ್ರತಿಯೊಬ್ಬ ರೈತರು ತಾವು ಸಾಲ ಪಡೆದ ವಾಣಿಜ್ಯ ಬ್ಯಾಂಕುಗಳಿಗೆ ಬಂದು ದಿನಾಂಕ. ಡಿ.13ರಿಂದ ಜ.15ರವರೆಗೆ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಬೆಳೆ ಸಾಲಮನ್ನಾ ಯೋಜನೆ ಅಡಿ 2017 ಡಿ.31ರವರೆಗೆ ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲ ಪಡೆದ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಜಿಲ್ಲೆಯಲ್ಲಿ 253 ಬ್ಯಾಂಕ್ ಶಾಖೆಗಳಲ್ಲಿ ಇದಕ್ಕಾಗಿಯೇ ವಿಶೇಷ ಕೌಂಟರ್ ಗಳು ತೆಗೆಯಲಾಗಿದ್ದು, ಒಂದು ತಿಂಗಳ ಸಮಯವಕಾಶ ನೀಡಲಾಗಿದೆ. ಪ್ರತಿಯೊಬ್ಬ ಬೆಳೆ ಸಾಲ ಪಡೆದ ರೈತರು ಕಡ್ಡಾಯವಾಗಿ ತಮ್ಮ ಆಧಾರ ಕಾರ್ಡ, ರೇಷನ್ ಕಾರ್ಡ ನಕಲು ಪ್ರತಿಗಳನ್ನು ಮತ್ತು ತಾವು ಸಾಲ ಪಡೆದ ಸವರ್ೆ ನಂಬರ ಮಾಹಿತಿ ತಪ್ಪದೇ ಸಲ್ಲಿಸಬೇಕು (ಪಹಣಿ ಪತ್ರಿಕೆ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ) ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಜಿಲ್ಲೆಯ ಸಹಕಾರಿ ಸಂಘಗಳಲ್ಲಿ 70500ರೈತರು ಸಾಲ ಪಡೆದುಕೊಂಡಿದ್ದು, ಅವರ ಮಾಹಿತಿ ಈಗಾಗಲೇ ಪಡೆದುಕೊಳ್ಳಲಾಗಿದೆ. ಅದೇ ರೀತಿ ವಾಣಿಜ್ಯ ಬ್ಯಾಂಕುಗಳಲ್ಲಿ 80 ಸಾವಿರ ರೈತರು ಸಾಲ ಪಡೆದುಕೊಂಡಿದ್ದು, ಅವರ ವಿವರ ಸಂಗ್ರಹಿಸುವ ಉದ್ದೇಶದಿಂದ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದರು.
ಈ ಯೋಜನೆಯಡಿ ರೈತರು ತಮ್ಮ ಹೆಸರುಗಳನ್ನು ನೋಂದಾಯಿಸಲು ಸಾಕಷ್ಟು ಸಮಯಾವಕಾಶ ನೀಡಿದ್ದು, ಸದರಿ ಯೋಜನೆಗೆ ಹೆಸರು ನೊಂದಾಯಿಸಲು ದಿನಾಂಕ. 13/12/2018 ರಿಂದ 15/01/2019ರವರೆಗೆ ನಿಗದಿಪಡಿಸಲಾಗಿದೆ. ಆದ ಕಾರಣ ಬ್ಯಾಂಕುಗಳ ಕಾರ್ಯವೇಳೆಯ ಸಮಯದ ಯಾವುದೇ ದಿನದಲ್ಲಿ ಬಂದು ರೈತರು ಸಾಲ ಪಡೆದ ಬ್ಯಾಂಕ್ ಶಾಖೆಗಳಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬಹುದು.ಒಂದು ಬ್ಯಾಂಕು ಶಾಖೆಯಲ್ಲಿ ಪ್ರತಿ ದಿನ ಕನಿಷ್ಠ 40 ರೈತರ ಹೆಸರುಗಳನ್ನು ನೊಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ತದನಂತರ ರೈತರಿಗೆ ದಿನಾಂಕಗಳಂದು ರೈತರು ಬ್ಯಾಂಕ್ ಶಾಖೆಗೆ ತೆರಳಿ ರೈತರ ಸ್ವಯಂ ದೃಡೀಕರಣ ಪತ್ರದೊಂದಿಗೆ ಆಧಾರ್ ಕಾಡರ್್, ಪಡಿತರ ಚೀಟಿಗಳ ನಕಲು ಮತ್ತು ಭೂಮಿ ಸವರ್ೆ ನಂಬರ್ ವಿವರಗಳನ್ನು ಒದಗಿಸಬೇಕು ಎಂದರು.
ಬೆಳೆಸಾಲ ಮನ್ನಾ ಯೋಜನೆಯ ಲಾಭ ಪಡೆಯಲು 01/04/2009 ರಂದು ಮತ್ತು ನಂತರದ ದಿನಗಳಲ್ಲಿ ಮಂಜೂರಾದ ಬೆಳೆಸಾಲಗಳು ಮತ್ತು 31/12/2017ರವರೆಗೆ ಬಾಕಿ ಇರುವ ಬೆಳೆಸಾಲಗಳು, (ಅಂದರೆ ಸುಸ್ತಿಸಾಲ, ಪುನರಾಸ್ತಿ ಸಾಲ, ಎನ್.ಪಿ.ಎ (ಓಠಟಿ ಠಿಜಡಿಜಿಠಡಿಟಟಿರ ಂಜಣ) ಸಾಲಗಳು ಅರ್ಹವಾಗಿರುತ್ತವೆ.ಕೇವಲ ವೈಯಕ್ತಿಕ ಬೆಳೆಸಾಲ ಪಡೆದ ರೈತರು ಮಾತ್ರ ಅರ್ಹರಿರುತ್ತಾರೆ.ಒಂದು ಕುಟುಂಬವು (ಅಂದರೆ ಗಂಡ+ಹೆಂಡತಿ+ಅವಲಂಬಿತ ಮಕ್ಕಳು) ಗರಿಷ್ಠ 2ಲಕ್ಷದದವರೆಗೆ ಮಾತ್ರ ಬೆಳೆ ಸಾಲ ಮನ್ನಾ ಪಡೆಯಲು ಅರ್ಹರಿರುತ್ತಾರೆ. (ಇದಕ್ಕಾಗಿ ದಿನಾಂಕ. 05/07/2018 ಕ್ಕಿಂತ ಮುಂಚಿತವಾಗಿ ಪಡೆದ ರೇಷನ್ ಕಾರ್ಡನ್ನು ಕಡ್ಡಾಯವಾಗಿ ಸಲ್ಲಿಸುವುದು ಅವುಗಳನ್ನು ಮಾತ್ರ ಪರಿಗಣಿಸಲಾಗುವುದು) ಎಂದರು.
ಯಾವ ರೈತರು ವಾಷರ್ಿಕ ಆದಾಯ ತೆರಿಗೆ ಪಾವತಿದಾರರೋ ಮತ್ತು ರಾಜ್ಯ, ಕೇಂದ್ರ ಸಕರ್ಾರಿ, ಅರೆ ಸಕರ್ಾರಿ, ಸಕರ್ಾರದಿಂದ ಅನುದಾನಕ್ಕೊಳಪಡುವ ಸಂಸ್ಥೆಗಳಲ್ಲಿ, ಸಾರ್ವಜನಿಕ ಸ್ವಾಮ್ಯದಲ್ಲಿ (ಕಖಗ ಕಣಛಟಛಿ ಖಜಛಿಣಠಡಿ ಗಟಿಜಜಡಿಣಚಿಞಟಿರ) ಕಾರ್ಯನಿರ್ವಹಿಸುತ್ತಿರುವ ನೌಕರರು ಈ ಬೆಳೆಸಾಲ ಮನ್ನಾ ಯೋಜನೆಯಡಿ ಅರ್ಹರಿರುವುದಿಲ್ಲ.),ಕೇಂದ್ರ ಮತ್ತು ರಾಜ್ಯ ಸಕರ್ಾರದಿಂದ ಪ್ರತಿ ಮಾಹೆ 15,000/-(ಹದಿನೈದು ಸಾವಿರ ಮಾತ್ರ)ಕ್ಕಿಂತ ಹೆಚ್ಚು ಪಿಂಚಣಿ ಪಡೆಯುವ ನಿವೃತ್ತ ನೌಕರರು ಈ ಯೋಜನೆಯಡಿ ಅರ್ಹರಿರುವುದಿಲ್ಲ. (ಈ ಮಿತಿಯು ಮಾಜಿ ಸೈನಿಕರಿಗೆ ಅನ್ವಯಿಸುವುದಿಲ್ಲ.) ಎಂದರು.
ಸಹಕಾರಿ ಬ್ಯಾಂಕ್ಗಳಲ್ಲಿನ ಬೆಳೆ ಸಾಲ ಮನ್ನಾ ಫಲಾನುಭವಿಗಳು ವಾಣಿಜ್ಯ ಬ್ಯಾಂಕ್ ಬೆಳೆಸಾಲ ಮನ್ನಾ ಯೋಜನೆಯಡಿ ಅರ್ಹರಿರುವುದಿಲ್ಲ.ಅರ್ಹರಿರುವ ಎಲ್ಲಾ ರೈತರಿಗೆ ಸಾಲ ಮನ್ನಾ ಫಲಾನುಭವಿಗಳು ತಮ್ಮ ಬ್ಯಾಂಕ್ ಶಾಖೆಗಳಲ್ಲಿ ನೊಂದಾಯಿಸಿಕೊಳ್ಳಲು ಸಾಕಷ್ಟು ಸಮಯಾವಕಾಶವನ್ನು ನೀಡಲಾಗಿದ್ದು, ರೈತರು ಯಾವುದೇ ಗೊಂದಲಗಳಿಗೆ ಒಳಗಾಗದೇ ಶಾಂತ ರೀತಿಯಿಂದ ಸರತಿ ಸಾಲಿನಲ್ಲಿ ನಿಂತು ತಮ್ಮ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಹಕರಿಸಿ ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದರು.
ಪ್ರತಿ ಬ್ಯಾಂಕ್ ಶಾಖೆಯಲ್ಲಿ ಒಬ್ಬ ಗ್ರಾಮ ಲೆಕ್ಕಾಧಿಕಾರಿ ಹಾಗೂ ಪೋಲೀಸ್ ಬಂದೋಬಸ್ತ್ ಕೂಡ ನೀಡಲಾಗಿದೆ ಎಂದು ವಿವರಿಸಿದ ಡಿಸಿ ರಾಮ್ಪ್ರಸಾತ್ ಅವರು ರೈತರಿಗೆ ಯಾವುದಾದರೂ ಗೊಂದಲ/ಸಂದೇಹಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯ ಸಹಾಯವಾಣಿ ಸಂಖ್ಯೆ: 08392-277019 ಗೆ ಸಂಪಕರ್ಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದರು.
*ಸಮಸ್ಯೆ ಇದ್ರೆ ತಹಸೀಲ್ದಾರ್ ನೇತೃತ್ವದ ತಾಲೂಕುಮಟ್ಟದ ಸಮಿತಿಯಲ್ಲಿ ಇತ್ಯರ್ಥ: ಆಧಾರ್ ಕಾಡರ್್ ,ರೇಷನ್ ಕಾಡರ್್, ಸವರ್ೆ ಸಂಖ್ಯೆಗಳನ್ನು ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲ ಪಡೆದ ರೈತರು ನೋಂದಣಿ ಮಾಡಲು ಹೋದ ಸಂದರ್ಭದಲ್ಲಿ ನೋಂದಣಿಯಾಗದಿದ್ದಲ್ಲಿ ಬ್ಯಾಂಕುಗಳಲ್ಲಿ ಒಂದು ಹಿಂಬರಹ ನೀಡಲಾಗುತ್ತದೆ. ಅದನ್ನು ತೆಗೆದುಕೊಂಡು ಹೋಗಿ ತಹಸೀಲ್ದಾರ್ ನೇತೃತ್ವದ ತಾಲೂಕುಮಟ್ಟದ ಸಮಿತಿಗೆ ಸಲ್ಲಿಸಬಹುದು. ಅವರು ಅದನ್ನು ಪರಿಶೀಲಿಸಿ ಇತ್ಯರ್ಥಪಡಿಸಲಿದ್ದಾರೆ ಎಂದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಹಲೀಮಾ ಇದ್ದರು.