ಶಿಗ್ಗಾವ್

ಜಾನಪದ ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿಗೆ ಸ್ಥಳೀಯರ ಸಹಕಾರ ಅಗತ್ಯ: ವರುಣಗೌಡ ಪಾಟೀಲ

ಜಾನಪದ ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿಗೆ ಸ್ಥಳೀಯರ ಸಹಕಾರ ಅಗತ್ಯ: ವರುಣಗೌಡ ಪಾಟೀಲ

ಲೋಕದರ್ಶನ ವರದಿ

ಶಿಗ್ಗಾವಿ 03: ನಮ್ಮ ನಾಡಿನ ಕಲೆ ಸಾಹಿತ್ಯ ಸಂಸ್ರ್ಕತಿಯ ಅಧ್ಯಯನಕ್ಕೆ ಇರುವ ಏಕೈಕ ವಿಶ್ವವಿದ್ಯಾಲಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಅದು ಜಗತ್ತಿನ ಮೊದಲ ವಿಶ್ವವಿದ್ಯಾಲಯ ಎಂಬುದು ಹೆಮ್ಮೆಯ ವಿಷಯ ಎಂದು  ರೈತ ಸೇನಾ ಕರ್ನಾಟಕ ಜಿಲ್ಲಾಧ್ಯಕ್ಷ ವರುಣಗೌಡ ಪಾಟೀಲ ಹೇಳಿದರು.

ತಾಲೂಕಿನ ಶ್ಯಾಡಂಬಿ ಗ್ರಾಮದ ತಮ್ಮ ತೋಟದ ಮನೆಯಲ್ಲಿ ಮಾತನಾಡಿದ ಅವರು ಜಾಗತೀಕರಣದ ಈ ಸಂದರ್ಭದಲ್ಲಿ ನಾವು ನಮ್ಮ ಪರಂಪರೆಯನ್ನು ಸಂಸ್ರ್ಕತಿಯನ್ನು ಮರೆಯುತ್ತಿದ್ದೇವೆ ಇಂದಿನ ಮಕ್ಕಳಿಗೆ ಈ ಪರಂಪರೆಯನ್ನು ತಿಳಿಸಿ ಜಾನಪದವನ್ನು ಕೊಂಡೊಯ್ಯಲು ಜಾನಪದ ವಿವಿ ಅಗತ್ಯವಾಗಿಬೇಕು.

ಜಾನಪದ ವಿಶ್ವವಿದ್ಯಾಲಯ ಪ್ರಾರಂಭವಾಗಿ ಸುಮಾರು 13 ವರ್ಷಗಳು ಕಳೆದರೂ ವಿಶ್ವವಿದ್ಯಾಲಯದಲ್ಲಿ ಖಾಯಂ ಸಿಬ್ಬಂದಿ ನೇಮಕವಾಗದೆಇದ್ದರಿಂದ ವಿಶ್ವವಿದ್ಯಾಲಯದ ಅಭಿವೃದ್ದಿಗೆ ಸಾಧ್ಯವಾಗುತ್ತಿಲ್ಲ ಎಂದು ಅಲ್ಲಿನ ಅಧಿಕಾರಗಳು ಕೆಲಸಗಾರರು ಹೇಳುತ್ತಿದ್ದರು. ಆದರೆ ಹಿಂದಿನ ಸರ್ಕಾರ ನೇಮಕಾತಿಗೆ ಆದೇಶ ನೀಡಿ ಪ್ರಕ್ರೀಯೆ ಪ್ರಾರಂಭವಾಗಿ ಇಂದು ಅನೇಕ ಅರ್ಹ ಅಭ್ಯರ್ಥಿಗಳು ನೇಮಕವಾಗಿ ಕರ್ತವ್ಯಕ್ಕೂ ಹಾಜರಾಗಿದ್ದಾರೆ ಆದರೆ ಕೆಲವು ಅರ್ಹತೆಇಲ್ಲದವರು ವಿಶ್ವವಿದ್ಯಾಲಯಕ್ಕೆ ಸಂಬಂಧ ಇಲ್ಲದೆ ಇರುವವರು ನೇಮಕಾತಿಯಲ್ಲಿ ಅಕ್ರಮ ನಡೆದಿದೆ ನೇಮಕಾತಿ ರದ್ದುಪಡಿಸಬೇಕೆಂದು ಸರ್ಕಾರಕ್ಕೆ  ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಒತ್ತಡ ಹೇರುತ್ತಿರುವುದು ಸರಿಯಾದ ಕ್ರಮವಲ್ಲ.

 ನೀವು ಸ್ಥಳೀಯರಾಗಿ ಜಾನಪದ ವಿಶ್ವವಿದ್ಯಾಲಯಕ್ಕೆ ಒಳ್ಳೆಯ ಕೆಲಸ ಮಾಡಿ ಅದನ್ನು ಬಿಟ್ಟು ಬರಿ ವಿಶ್ವವಿದ್ಯಾಲಯ ಕುಂಟಿತಗೊಳ್ಳುವ ಕೆಲಸ ಮಾಡಬೇಡಿಎಂದು ಕಿವಿ ಮಾತು ಹೇಳಿದರು. ನಮ್ಮ ಹಿರಿಯರ ಶ್ರಮ ಹಾಗೂ ಹೋರಾಟದಿಂದ ನಮ್ಮ ತಾಲೂಕಿನಲ್ಲಿ ಈ ವಿಶ್ವವಿದ್ಯಾಲಯ ಸ್ಥಾಪನೆ ಆಗಿದ್ದು ನಮ್ಮೆಲ್ಲರ ಪುಣ್ಯ.

ನಮ್ಮ ನಾಡಿನ ಹೆಮ್ಮೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಅದನ್ನು ನಮ್ಮ ಅಗತ್ಯಕ್ಕೆ ನಮ್ಮ ಅನೂಕೂಲತೆಗೆ ಬಳಸಿಕೊಳ್ಳದೆ ಸಮಾಜಕ್ಕೆ ಜಾನಪದ ವಿಶ್ವವಿದ್ಯಾಲಯ ಒಳ್ಳೆಯ ಕೊಡುಗೆ ನೀಡುವ ನಿಟ್ಟಿನಲ್ಲಿ ಅದರ ಬೆಳವಣಿಗೆ ಹಾಗೂ ಅಭಿವ್ರದ್ದಿಗೆ ಸಹಕಾರ ನೀಡಬೇಕಿದೆ ಹಾಗಾಗಿ ಸ್ಥಳೀಯರಾದ ನಾವುಗಳು ವಿಶ್ವವಿದ್ಯಾಲಯ ಬೆಳವಣಿಗೆ ಮತ್ತುಅಭಿವ್ರದ್ದಿಗೆ ಸಹಕರಿಸಿದಾಗ ಈ ತಾಲೂಕಿನ ಜಿಲ್ಲೆಯ ಹೆಸರುಜಗತ್ತಿಗೆ ಪಸರಿಸಲು ಸಾಧ್ಯ ಹಾಗೆಯೇ ನೂತನ ಸರ್ಕಾರವು ಕೂಡಾ ಜಾನಪದ ವಿಶ್ವವಿದ್ಯಾಲಯದ ಅಭಿವ್ರದ್ದಿಗೆ ಅಗತ್ಯ ಅನುದಾನ ನೀಡಬೇಕುಎಂದು ಸಕರ್ಾರಕ್ಕೆ ಮನವಿ ಮಾಡಿಕೊಂಡರು 

ಸುದ್ದಿ ಓದಿ