ಬೈಲಹೊಂಗಲ

ದೇಶದ ಅಭಿವೃದ್ಧಿಗೆ ಸಂವಿಧಾನ ರಚನೆ ಪೂರಕ: ಪಾಟೀಲ

ದೇಶದ ಅಭಿವೃದ್ಧಿಗೆ ಸಂವಿಧಾನ ರಚನೆ ಪೂರಕ:  ಪಾಟೀಲ
ಪಟ್ಟಣದ ಬಾಪೂಜಿ ಮಹಾವಿದ್ಯಾಲಯದಲ್ಲಿ ಸಂವಿಧಾನ ದಿನಾಚಾರಣೆ ಕಾರ್ಯಕ್ರಮ ಆಚರಣೆ ಮಾಡಲಾಯಿತು

ಬೈಲಹೊಂಗಲ27: ದೇಶದ ಅಭಿವೃದ್ಧಿಗೆ ಪೂರಕವಾದ ಸಂವಿಧಾನ ರಚನೆ ಮಾಡಿಕೊಟ್ಟ ಅಂಬೇಡ್ಕರ್ ಅವರನ್ನು ಸದಾ ಸ್ಮರಣೆ ಮಾಡಿಕೊಳ್ಳುವುದು, ಜತೆಗೆ ಸಂವಿಧಾನದ ಆಶಯಗಳನ್ನು ಉಳಿಸಿ ಬೆಳೆಸುವತ್ತ ಮುಂದಾಗುವುದು ಪ್ರತಿ ಪ್ರಜೆಯ ಕರ್ತವ್ಯ ಉಪನ್ಯಾಸಕ   ಎಸ್ ಜಿ ಪಾಟೀಲ ಹೇಳಿದರು.

      ಅವರು ಶನಿವಾರ ಪಟ್ಟಣದ ಬಾಪೂಜಿ ಮಹಾವಿದ್ಯಾಲಯದಲ್ಲಿ ಸಂವಿಧಾನ ದಿನ ಆಚರಣೆ ಕಾಯ್ರಕ್ರಮದಲ್ಲಿ ಮಾತನಾಡಿ,  ಭಾರತದ ಸಂವಿಧಾನವು ವಿಶ್ವದ ಎಲ್ಲಾ ಸಂವಿಧಾನಗಳಿಗಿಂತ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ. ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೂಲಭೂತ ಕರ್ತವ್ಯಗಳ ಅರಿವು ಮೂಡಿಸುವ ಗುರಿಯನ್ನು ಈ ದಿನವು ಹೊಂದಿದೆ ಎಂದರು.

   ಪ್ರಾಚಾರ್ಯ ಎಂ.ಬಿ.ಯಕ್ಕುಂಡಿ ಅಧ್ಯಕ್ಷತೆ ವಹಿಸಿದ್ದರು. 

    ಆಡಳಿತಾಧಿಕಾರಿ ಎಸ್ ಡಿ ಹೊಸಮನಿ, ಉಪನ್ಯಾಸಕರಾದ ಎಂ.ಆರ್.ಪಾಟೀಲ, ಎ.ಎಸ್.ಸಂಗೊಳ್ಳಿ, ಗೀತಾ ಕಾಜಗಾರ, ಗಾಯಿತ್ರಿ ಬಡಿಗೇರ, ಆರದಾ ದೊಡಮನಿ, ವಿ.ವಿ.ಬಳಿಗಾರ ವಿ.ಜೆ.ನಿಕ್ಕಮ್ಮನವರ, ಎನ್.ಎನ್.ಕೋಲಕಾರ, ಅಂಜನಾ ಪಾಟೀಲ, ಅಕ್ಷತಾ ಭರಮಣ್ಣವರ ಹಾಗೂ ವಿದ್ಯಾರ್ಥಿಗಳಿದ್ದರು. 

   ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಹಸನ ಗೊರವನಕೊಳ್ಳ ಪ್ರತಿಜ್ಞಾವಿಧಿ ಬೋಧಿಸಿದರು.



ಸುದ್ದಿ ಓದಿ