ಸಂವಿಧಾನ ಶಿಲ್ಪಿ ಭಾರತ ದೇಶದ ಮನೆ ಮನಗಳ ಬೆಳಕು: ಹನುಮಂತಪ್ಪ ಗಾಜೇರ್
ರಾಣೆಬೆನ್ನೂರು 15: ಆರ್ಥಿಕ, ಸಾಮಾಜಿಕ, ತುಳಿತಕ್ಕಕೊಳ ಗಾಗಿರುವ, ದಲಿತರ ಸಮಾನತೆಗಾಗಿ ನಿರಂತರ ಶ್ರಮಿಸುವುದರ ಮೂಲಕ, ಭಾರತದ ಮನೆ ಮನಗಳಲ್ಲಿ ಅಮಾನತೆಯ ಬೆಳಕು ಹಚ್ಚಿದ ಮಹಾನ ನಾಯಕ ಡಾ: ಬಿ ಆರ್ ಅಂಬೇಡ್ಕರ್ ಅವರಾಗಿದ್ದಾರೆ ಎಂದು ಆದಿ ಜಾಂಬವ ಯುವಕ ಸಂಘದ ಅಧ್ಯಕ್ಷ, ಹನುಮಂತಪ್ಪ ಗಾಜೇರ ಹೇಳಿದರು.
ಅವರು ಸಮೀಪದ ರಟ್ಟಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸುಣಕಲ್ ಬಿದರಿ, ಜೈ ಭೀಮ್ ಯುವಕ ಸಂಘ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್, ಅವರ 66ನೇ ಪರಿ ನಿರ್ವಹಣಾ ದಿನಾಚರಣೆ ನಿಮಿತ್ತ ನಡೆದ ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತ ದೇಶದ ಸಂವಿಧಾನದ ಹೀರಿಮೆ ಮತ್ತು ಗರಿಮೆಯನ್ನು ವಿಶ್ವದ ಎಲ್ಲ ರಾಷ್ಟ್ರಗಳು ಒಪ್ಪಿಕೊಂಡು, ಅಪ್ಪಿಕೊಂಡಿವೆ ಇಂತಹ ಪ್ರಬುದ್ಧವಾದ ಸಂವಿಧಾನ ಬೇರೆ ಯಾವ ದೇಶಗಳಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂದ ಅವರು, ಕೇವಲ ದಿನಾಚರಣೆ ಆಚರಿಸಿದ ಮಾತ್ರಕ್ಕೆ ಅವರನ್ನು ಗೌರವ ಸೂಚಿಸಿದಂತಲ್ಲ, ಅವರು ನೀಡಿರುವ ಪ್ರಭುದ್ಧವಾದ ಸಂದೇಶವನ್ನು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡು.ಸಾಗಿದಾಗ ಮಾತ್ರ ಸಮಾನತೆಯಿಂದ ಬದುಕಿ ಬಾಳಲು ಸಾಧ್ಯವಾಗುವುದು ಎಂದರು. ಕಾರ್ಯಕ್ರಮದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಕಲಾ ತಂಡದ ರೇವಣಪ್ಪ ಮಾಳಗಿ, ಸಾವಿತ್ರ ಬಾಪುಲೆ ಕಲಾ ತಂಡದ ವೀಣಾ ಘಂಟೇರ ಸಂಗಡಿಗರ ಸುಗಮ ಸಂಗೀತ ಕಾರ್ಯಕ್ರಮವು ಸಾರ್ವಜನಿಕರ ಗಮನ ಸೆಳೆದವು. ಖೋ, ಖೋ ತಂಡದಿಂದ ರಾಷ್ಟ್ರಮಟ್ಟದಲ್ಲಿ ಸಾಧನೆ ಮೆರೇದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಜೈ ಭೀಮ್ ಅಧ್ಯಕ್ಷ ರಾಮಪ್ಪ ಕುಸಗೂರ, ಕಲಾವಿದರಾದ, ಬಸವರಾಜ.ಸಾವಕ್ಕನವರ,ಕರಬಸಪ್ಪ ಬೇವಿನಹಳ್ಳಿ,ವಿರೂಪಾಕ್ಷ ಕಿವುಡಣ್ಣನವರ,ಬಸವರಾಜ ಸಾವಕ್ಕನವರ,ಶ್ರೀಧರ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಅತ್ಯಂತ ಸರಳವಾಗಿ ನಡೆದ ಪರಿ ನಿರ್ವಹಣಾ ದಿನಾಚರಣೆಯಲ್ಲಿ, ಗ್ರಾಮದ ನಾಗರಿಕರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.