ಕಾಂಗ್ರಸ್ ಅಧಿಕಾರಕ್ಕೆ ಬರುವದು ಖಚಿತ: ನದಾಫ್
ಯಲಬುರ್ಗಾ : ಮುಂಬರುವ 2023 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬರುವುದು ಸೂರ್ಯಚಂದ್ರ ಇರುವುದು ಎಷ್ಟು ಸತ್ಯವೋ ಅಷ್ಟು ಸತ್ಯ ಎಂದು ತಾಲೂಕಾ ಹಿರಿಯ ಕಾಂಗ್ರೇಸ್ ಮುಖಂಡ ಎಂ.ಎಫ್. ನದಾಫ್ ಹೇಳಿದ್ದಾರೆ.
ಇಂದು ರಾಜ್ಯದಲ್ಲಿ ಅಸ್ವಿತ್ವದಲ್ಲಿರುವ ಬಿಜೆಪಿ ಸರ್ಕಾರ ಎಲ್ಲಾ ರಂಗಗಳಲ್ಲಿಯೂ ಸಂಪೂರ್ಣವಾಗಿ ವಿಫಲವಾಗಿದ್ದು, ರಾಜ್ಯದ ಜನತೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಎಲ್ಲಾ ಇಲಾಖೆಗಳಲ್ಲಿಯೂ ಪ್ರಾಮಾಣಿಕವಾಗಿ ಜನತೆಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಹೀಗಾಗಿ ಬ್ರಷ್ಟಾಚಾರ, ಸ್ವಜನ ಪಕ್ಷಪಾತ ಮೀತಿ ಮೀರಿದೆ.ಈ ಸರ್ಕಾರ ಜನ ವಿರೋಧಿ ಸರ್ಕಾರವಾಗಿದೆ. ಒಂದು ಕಾಲದಲ್ಲಿ ಶಾಂತಿ, ಸೌಹಾರ್ಧತೆಗೆ ಹೆಸರಾಗಿದ್ದ ಕರ್ನಾಟಕ ದಲ್ಲಿ ಈ ಬಿಜೆಪಿ ಸರ್ಕಾರ ತನ್ನ ಮತ ಬ್ಯಾಂಕ್ ಭದ್ದತೆಗಾಗಿಕೋಮು ಗಲಭೆ ಸೃಷ್ಟಿಸಲಾಗುತ್ತಿದೆ. ಸ್ವತಃ ಸರ್ಕಾರದ ಸಚೀವ ಮಾಧುಸ್ವಾಮಿರವರು ಸರ್ಕಾರದ ಆಡಳಿತದ ಕುರಿತು ಮಾತನಾಡಿರುವುದು ನಿಜಕ್ಕೂ ವಿಪರ್ಯಾಸ ಹೀಗಾಗಿ ರಾಜ್ಯದ ಜನತೆ ಮತ್ತೊಮ್ಮೆ ಕರ್ನಾಟಕದಲ್ಲಿ ಸುಭದ್ರ ಆಡಳಿತ ನೀಡುವ ಶಕ್ತಿ ಇರುವುದು ಕಾಂಗ್ರೇಸ್ ಪಕ್ಷಕ್ಕೆ ಎಂಬ ಸತ್ಯವನ್ನು ಅರಿತಿದ್ದು, ಮುಂದಿನ ದಿನಮಾನಗಳಲ್ಲಿ ಕಾಂಗ್ರಸ್ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದು ಯಲಬುರ್ಗಾ ತಾಲೂಕಿನ ಹಿರಿಯಕಾಂಗ್ರೇಸ್ ಮುಖಂಡ ಎಂ.ಎಫ್. ನದಾಫ್ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ