ಶಿಗ್ಗಾವ್

ಕೊಟ್ಟ ಮಾತು ಉಳಿಸಿಕೊಂಡಿದೆ ಕಾಂಗ್ರೆಸ್ ಸರ್ಕಾರ : ಸಲೀಂ ಅಹ್ಮದ

ಕೊಟ್ಟ ಮಾತು ಉಳಿಸಿಕೊಂಡಿದೆ ಕಾಂಗ್ರೆಸ್ ಸರ್ಕಾರ : ಸಲೀಂ ಅಹ್ಮದ

ಕೊಟ್ಟ ಮಾತು ಉಳಿಸಿಕೊಂಡಿದೆ ಕಾಂಗ್ರೆಸ್ ಸರ್ಕಾರ : ಸಲೀಂ ಅಹ್ಮದ 

ಶಿಗ್ಗಾವಿ 10: ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿದೆ. ನುಡಿದಂತೆ ನಡೆದುಕೊಳ್ಳುತ್ತಿದೆ. ವಾರ್ಷಿಕ ಬರೋಬ್ಬರಿ 58 ಸಾವಿರ ಕೋಟಿ ರೂ. ವ್ಯಯಿಸಿ ಜನಸಾಮಾನ್ಯರಿಗೆ ಆರ್ಥಿಕ ನೆರವು ನೀಡುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು  ಮುಖ್ಯ ಸಚೇತಕ ಸಲೀಂ ಅಹ್ಮದ ಹೇಳಿದರು. 

    ತಾಲೂಕಿನ ಹಿರೇಮಲ್ಲೂರ ಗ್ರಾಮದಲ್ಲಿ ಮತಯಾಚನೆ ಕೈಗೊಂಡು ಮಾತನಾಡಿದ ಅವರು ಬರೀ ವದಂತಿಗಳನ್ನು ಹಬ್ಬಿಸುವುದು, ಅಪಪ್ರಚಾರ ಮಾಡುವುದು ಬಿಜೆಪಿಯ ದೊಡ್ಡ ಬಂಡವಾಳ. ಪ್ರತಿ ಚುನಾವಣೆಯ ಸಂದರ್ಭದಲ್ಲಿಯೂ ಸಹ ಬಿಜೆಪಿ ಇದೇ ಕೆಲಸ ಮಾಡುತ್ತಿದೆ. ಮಾಡಿದ ಅಭಿವೃದ್ಧಿ ಮತ್ತು ಸಾಧನೆಗಳನ್ನು ಮುಂದಿಟ್ಟುಕೊಂಡು ಎಂದಿಗೂ ಸಹ ಮತಯಾಚನೆ ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಶಿಗ್ಗಾಂವಿ-ಸವಣೂರು ಕ್ಷೇತ್ರದಲ್ಲಿ ಸಾರ್ವಜನಿಕ ಜ್ವಲಂತ  ಸಮಸ್ಯೆಗಳು ಇಂದಿಗೂ ಸಹ ಜೀವಂತವಾಗಿವೆ. ಜನರ ಸಂಕಷ್ಟಗಳಿಗೆ ಸೂಕ್ತ ಸ್ಪಂದನೆ ಇಲ್ಲದಂತಾಗಿದೆ. ಇಂತಹ ಸಮಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ ಖಾನ ಪಠಾಣ ಅವರಿಗೆ ಅವಕಾಶ ನೀಡಿದರೆ ಜನಕಲ್ಯಾಣಕ್ಕೆ ಸ್ಪಂದಿಸಲಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ಕ್ಷೇತ್ರಕ್ಕೆ ನೂರು ಕೋಟಿ ಅನುದಾನ ಸಹ ಬಿಡುಗಡೆ ಮಾಡಿದೆ. ಜನರ ಮಧ್ಯೆ ಇದ್ದು ಸಮಸ್ಯೆಗಳನ್ನು ಪರಿಹರಿಸಲು ಕಾಂಗ್ರೆಸ್ ಪಕ್ಷವನ್ನು ಆಶೀರ್ವದಿಸಿ ಎಂದು ಮನವಿ ಮಾಡಿದರು. 

   ವಕ್ತಾರ ಮಂಜುನಾಥ ಮಣ್ಣಣ್ಣವರ ಸೇರಿದಂತೆ  ಹಲವು ಮುಖಂಡರು, ಕಾರ್ಯಕರ್ತರು  ಇದ್ದರು. 


ಸುದ್ದಿ ಓದಿ