ಜಮಖಂಡಿ

ಕಾಂಗ್ರೆಸ್ ಶಾಸಕರು ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸಿಲ್ಲ: ಕುಲಕರ್ಣಿ

ಕಾಂಗ್ರೆಸ್ ಶಾಸಕರು ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸಿಲ್ಲ: ಕುಲಕರ್ಣಿ
ಜಮಖಂಡಿ ರಮಾ ನಿವಾಸದಲ್ಲಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು

ಲೋಕದರ್ಶನ ವರದಿ,

ಜಮಖಂಡಿ 29: ಜಮಖಂಡಿ ಮತಕ್ಷೇತ್ರದ ಕಾಂಗ್ರೆಸ್ ಶಾಸಕರು ಕಳೆದ ನಾಲ್ಕು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸಿಲ್ಲ, ಈಗ ಬಿಜೆಪಿಯ ಬೂತ ಮಟ್ಟದಲ್ಲಿ ಕಾರ್ಯಕರ್ತರು ನಡೆಸುತ್ತಿರುವ ವಿಜಯ ಸಂಕಲ್ಪ ಹಾಗೂ ಮುಂಬರುವ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಇಂದು ಕ್ಷೇತ್ರದ ಕೆಲವು ಹಳ್ಳಿಗಳಿಗೆ ಪಾದಯಾತ್ರೆ ನಡೆಸುವುದು ಯಾವ ಪುರುಷಾರ್ಥಕ್ಕಾಗಿ ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ವ್ಯಂಗ್ಯವಾಡಿದರು.

ನಗರದ ರಮಾ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ಕ್ಷೇತ್ರದಲ್ಲಿ ಅನೇಕ ಕಾಮಗಾರಿಗಳು ಬಾಕಿ ಉಳಿದುಕೊಂಡಿವೆ. ಸರ್ಕಾರದ ಮೇಲೆ ಒತ್ತೆಡ ಹೇರಿ ಕಾಮಗಾರಿ ಪೂರ್ಣಗೊಳಿಸಲು ಆಗಲಿಲ್ಲ. ಜಮಖಂಡಿ ನಗರ ವಾಸಿಗಳಿಗೆ ಹೆಚ್ಚಿನ ಅನುಕೂಲವಾಗಲೆಂದು ರಾಜ್ಯ ಸಕರ್ಾರ 24*7 ಶುದ್ದ ಕುಡಿವ ನೀರು ಪೂರೈಕೆ ಯೋಜನೆಗೆ 18 ಕೋರೂಗಳಷ್ಟು ಅನುದಾನ ನೀಡದರೂ ಅದನ್ನು ಅನುಷ್ಠಾನಗೊಳಿಸಲು ಆಗಲಿಲ್ಲ. ಕ್ಷೇತ್ರದ ರೈತರಿಗೆ ನೀರಾವರಿಗೆ ವಿದ್ಯುತ್ ಅವಶ್ಯವಿದ್ದು,  ಕ್ಷೇತ್ರದಲ್ಲಿ 220 ಕೆವ್ಹಿ ವಿದ್ಯುತ್ ಪ್ರಸರಣ ಕೇಂದ್ರ ಸ್ಥಾಪನೆಗೆ ಎಂದೂ ಚಿಂತಿಸಿಲ್ಲ. ಆಗ ತಾವೂ ಶಾಸಕರಿದ್ದ ವೇಳೆ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ 200 ಕೆವ್ಹಿ ವಿದ್ಯುತ್ ಪ್ರಸರಣ ಕೇಂದ್ರ ಸ್ಥಾಪನೆಗೆ ಸ್ಥಳ ನಿಗದಿಗೊಳಿಸದ್ದು, ಅದನ್ನು ಪೂರ್ಣಗೊಳಿಸಲು ಇಂದಿನ ಶಾಸಕರಿಗೆ ಆಗಲಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್ ಶಾಸಕರಿಗೆ ಅನುಭದ ಕೊರತೆಯಿಂದಾಗಿ ಸರ್ಕಾರದ ಯೋಜನೆಗಳನ್ನು ತರುವಲ್ಲಿ ಸಂಪೂರ್ಣ ವಿಫಲಗೊಂಡಿದ್ದು, ಅವರ ಲಕ್ಷ್ಯ ಕೇವಲ ಅವರ ಸಕ್ಕರೆ ಕಾಖರ್ಾನೆ ಅಭಿವೃದ್ದಿ ಹಾಗೂ ಅವರದೇ ಶಾಲೆ ಸುಧಾರಣೆಯಲ್ಲಿ ಮುಳುಗಿರುತ್ತಾರೆಂದು ನೇರವಾಗಿ ಆರೋಪಿಸಿದರು.

ತಾಲೂಕಿನ ಮರೇಗುದ್ದಿ-ಗಲಗಲಿ ಏತ ನೀರಾವರಿ ಯೋಜನೆಗೆ ಸರ್ಕಾರ ಅನುದಾನ ನೀಡಲಿದ್ದು, ಅದನ್ನು ಅನುಷ್ಠಾನಗೊಳಿಸಲು ಶಾಸಕರಿಂದಲೇ ವಿಳಂಬವಾಗುತ್ತದೆಂದರು. ಜಮಖಂಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಎದ್ದಿದ್ದು, ಇದರಿಂದ ಭಯಭೀತರಾದ ಶಾಸಕರು ಹಳ್ಳಿಗಳಿಗೆ ಪಾದಯಾತ್ರೆ ನಡೆಸುತ್ತಿದ್ದು, ಜನ ಎಲ್ಲವನ್ನು ಚಿಂತಿಸುತ್ತಿರುತ್ತಾರೆ. ಈ ಹಿಂದೆ ಅವರ ತಂದೆ ದಿ.ಸಿದ್ದು ನ್ಯಾಮಗೌಡ ಅವರ ನಿಧನದ ಅನುಕಂಪದಿಂದ ಅಲೆಯಲ್ಲಿ ಆಯ್ಕೆಗೊಂಡಿದ್ದು, ಇವರು ಶೂನ್ಯ ಸಾಧನೆ ಬಗ್ಗೆ ಕ್ಷೇತ್ರದ ಜನ ನಂಬಿದ್ದಾರೆ. 

ಮೋಸದ ಶಾಸಕ-

ವಿಜಯಪೂರದ ಮಾಜಿ ಸಚಿವ ಎಂ.ಬಿ.ಪಾಟೀಲ ಅವರು ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯನ್ನು ಹಾಳುಗೆಡಿಸಿದ್ದು, ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ನೀರಾವರಿ ಸೌಲಭ್ಯ ಮಾಡಿಕೊಂಡು, ಜಮಖಂಡಿ ಮತ್ತು ಅಥಣಿ ತಾಲೂಕಿನ ರೈತರಿಗೆ ಭಾರೀ ಮೋಸ ಮಾಡಿದ್ದರಿಂದ ತಾಲೂಕಿನಲ್ಲಿ ಕೆಲವು ಕೆರೆಗಳು ಬತ್ತಿ ಹೋಗಿವೆ. ಅಂದಿನ ಬಿಜೆಪಿ ಸರ್ಕಾರ ಈ ಯೋಜನೆಗೆ ಸಾಕಷ್ಟು ಅನುದಾನ ನೀಡಿದ್ದು, ಅದನ್ನು ರ್ದುಬಳಕೆ ಮಾಡಿಕೊಳ್ಳಲಾಗಿದೆಂದು ಆರೋಪಿಸಿದ ಕುಲಕಣರ್ಿ, ಜಮಖಂಡಿ ದೊಡ್ಡ ಶಹರವಿದ್ದರೂ ಇಲ್ಲೊಂದು ಸರ್ಕಾರಿ ಪದವಿ ಕಾಲೇಜು ಮಂಜೂರು ಮಾಡಿಸಿಕೊಂಡು ಬರಲು ಶಾಸಕರು ಹಿಂದೇಟು ಹಾಕುತ್ತಿದ್ದು, ಅನೇಕ ಬಡ ವಿದ್ಯಾಥರ್ಿಗಳು ಉನ್ನತ ಶಿಕ್ಷಣದಿಂದ ವಂಷಿಚರಾಗಿದ್ದಾರೆ. ಗಣರಾಜ್ಯೋತ್ಸವ ದಿನದ ಭಾಷಣವನ್ನು ಚುನಾವಣೆ ಭಾಷಣದಂತೆ ಮಾತನಾಡಿದ್ದು, ಹಾಸ್ಯಾಸ್ಪದ ಸಂಗತಿ ಎಂದು ಹೇಳಿದರು.

ರೈತ ಧುರೀಣ ಬಸವರಾಜ ಸಿಂಧೂರ, ಚಂದ್ರಕಾಂತ ಉಪಾಧ್ಯೆ ಮಾತನಾಡಿದರು. ಡಾ. ವಿಜುಯಲಕ್ಷ್ಮೀ ತುಂಗಳ, ಪ್ರಕಾಶ ಕಾಳೆ, ಮಲ್ಲಪ್ಪ ದಾನಗೊಂಡ, ಮಹಾದೇವ ನ್ಯಾಮಗೌಡ, ಪ್ರದೀಪ ನಂದೆಪ್ಪನ್ನವರ, ಶಿವಯ್ಯಾ ಸುದ್ದಿಗೋಷ್ಠಿಯಲ್ಲಿದ್ದರು. 


ಸುದ್ದಿ ಓದಿ