ಅಭಿನಂದನಾ ಸನ್ಮಾನ ಸಮಾರಂಭ
ಲೋಕದರ್ಶನ ವರದಿ
ರಾಣಿಬೆನ್ನೂರು 24: ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಯಾವುದೇ ಚುನಾವಣೆಗಳಾಗಿರಲಿ ಅವು ವಿಶೇಷ ಮತ್ತು ವೈಶಿಷ್ಟತೆಗಳಿಂದ ಕೊಡಿರುತ್ತವೆ. ಸೇವಾಮನೋಭಾವ ಹೊಂದುವವರಿಗೆ ಚುನಾವಣೆಗಳು ಸಲ್ಲದು ಆದರೆ ಚುನಾವಣೆಗಳು ಅನಿವಾರ್ಯವಾಗಿವೆ ಅಂತಹ ವಿಶೇಷವಾಗಿ ನಡೆದ ಚುನಾವಣೆಯಲ್ಲಿ ರಾಜ್ಯದ ಸದಸ್ಯರು ತಮ್ಮ ಮೇಲೆ ಅತ್ಯಂತ ಪ್ರೀತಿ ವಿಶ್ವಾಸ ಮತ್ತು ಅಪಾರವಾದ ನಂಬಿಕೆ ಭರವಸೆ ಇಟ್ಟು ಸೇವೆಗೆ ಅವಕಾಶ ಕಲ್ಪಿಸಿದ್ದಾರೆ. ಎಂದು ಕನರ್ಾಟಕ ರಾಜ್ಯ ವಕೀಲರ ಪರಿಷತ್ತಿನ ನೂತನ ಸದಸ್ಯ, ರಾಜ್ಯ ನೋಟರಿ ಸಂಘದ ಅದ್ಯಕ್ಷ ಎಸ್. ಆಸಿಫ್ ಅಲಿ ಹೇಳಿದರು. ಅವರು ಇಲ್ಲಿನ ವಕೀಲರ ಸಂಘದ ಭವನದಲ್ಲಿ ಜಿಲ್ಲಾ ನೋಟರಿ ಸಂಘವು ಆಯೋಜಿಸಿದ್ದ ಅಭಿನಂದನಾ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಮಾಜದಲ್ಲಿ ಸಮಾನತೆ ಮತ್ತು ಸಂಘಟನೆಗಳು ಅಭಿವೃದ್ದಿ ಕಾಣಬೇಕಾದರೆ ವೈಚಾರಿಕ ಚಿಂತನೆ, ದೂರ ದೃಷ್ಟಿ ಮತ್ತು ಜನಪರ ಸೇವಾಕಾರ್ಯಗಳು ನಡೆಯುವುದು ಬಹು ಮುಖ್ಯ ಸತತ ಪರಿಶ್ರಮ ಮತ್ತು ಪ್ರಾಮಾಣಿಕತೆಯು ಅಷ್ಟೇ ಮುಖ್ಯವಾಗಿರಬೇಕು. ಎಂದ ಆಸಿಫ್ ಅಲಿ ಅವರು ಪ್ರಸ್ತುತ ಸಂಘದ ಸದಸ್ಯರಿಗೆ ತೊಂದರೆಯಲ್ಲಿದ್ದವರಿಗೆ ಸಹಾಯ ಹಸ್ತ ನೀಡುವ ಕೆಲಸ ನಡೆಯಬೇಕಾಗಿದೆ ಎಂದರು.
ವಕೀಲರ ವೃತ್ತಿ ಅತ್ಯಂತ ಜವಾಬ್ದಾರಿಯಾಗಿದೆ. ವೃತ್ತಿ ಪಾವಿತ್ರತೆಯನ್ನು ಅಳವಡಿಸಿಕೊಂಡರೇ ಸಮಾಜದಲ್ಲಿ ಸದಾಕಾಲ ಶಾಂತಿ, ನೆಮ್ಮದಿ ಮತ್ತು ಸಮಾಜದ ಪ್ರೀತಿ, ವಿಶ್ವಾಸ ಮತ್ತು ಗೌರವ ಇದೇ ಎಂದರು. ಸದಸ್ಯರ ಬಹು ನಿರೀಕ್ಷೆಯಂತೆ ಅನುದಾನದಲ್ಲಿ ಬದಲಾವಣೆ, ಸೌತ್ನಲ್ಲಿ ಸುಪ್ರೀಂಬೆಂಚ್, ಮತ್ತು ಗೃಹ ಮಂಡಳಿಯಲ್ಲಿ ಶೇಕಡಾವಾರು ಮೀಸಲಾತಿ ಜಾರಿಗೆ ತರಲು ಪ್ರಯತ್ನಿಸುವುದಾಗಿ ಹೇಳಿದ ಅವರು ಒಗ್ಗಟ್ಟಾಗಿ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಹಾವೇರಿ, ಶಿಗ್ಗಾವಿ, ಹಾನಗಲ್, ಸವಣೂರ, ಬ್ಯಾಡಗಿ, ಹಿರೇಕೇರೂರ, ದಾವಣಗೇರೆ, ಹರಿಹರ, ಮತ್ತಿತರೆಡೆಯಿಂದ ಬಂದ ಸಂಘಟನೆಯ ಮುಖಂಡರು ಸನ್ಮಾನಿಸಿ ಗೌರವಿಸಿದರು. ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಚಿನ್ನಪ್ಪನವರ ಅದ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದಶರ್ಿ ಈಶ್ವರ ಚಂದ್ರ ಕುಳೇನೂರ ಅವರು ಸಮಾಜ ಮುಖಿ ಕೆಲಸ ನಡೆದರೆ ಸಮಾಜ ಗುರುತಿಸುತ್ತದೆ ಅಂತಹ ಕೆಲಸ ಆಸಿಫ್ ಅಲಿ ಅವರಿಂದ ನಡೆಯುತ್ತಲಿದೆ. ಸದಸ್ಯರ ಎಲ್ಲ ಸಮಸ್ಯಗಳು ಅರಿತುಕೊಂಡಿದ್ದಾರೆ. ಅವರಿಂದ ಭವಿಷ್ಯದಲ್ಲಿ ವಕೀಲರ ಪರಿಷತ್ತಿನಲ್ಲಿ ಹೊಸ ಹೊಸ ಕೇಲಸಗಳು ನಡೆಯುವ ವಿಶ್ವಾಸ ಎಲ್ಲರೂ ನಿರೀಕ್ಷಿಸುತ್ತಿರುವುದಾಗಿ ಹೇಳಿದರು.
ವೇದಿಕೆಯಲ್ಲಿ ಜಿಲ್ಲಾ ಸಂಘದ ಅದ್ಯಕ್ಷ ಎಂ.ಹೆಚ್. ನದಾಫ್, ಕಾರ್ಯದಶರ್ಿ ಜಿ.ಕೆ. ಕಮ್ಮಾರ, ರಾಜ್ಯ ಉಪಾದ್ಯಕ್ಷ ಎಂ.ಸಿ. ನಡುವಿನಮಠ, ವಕೀಲರ ಸಂಘದ ಉಪಾದ್ಯಕ್ಷ ಎಂ.ಎಸ್.ರೂಡ್ಡನವರ, ಕುಮಾರ ಎಳೇಹೂಳಿ, ಕೆ.ಡಿ. ಮಡಿವಾಳರ, ಆರ್.ವಿ.ಬೆಳಕೇರಿಮಠ, ಪಿ.ಬಿ.ಸಿಂಗಿ, ಎಸ್.ಎಸ್. ಕೇರಿಯವರ, ಮೂದಲಾದವರು ಮಾತನಾಡಿದರು. ಸಮಾರಂಭದಲ್ಲಿ ಹಿರಿಯ ನ್ಯಾಯವಾದಿಗಳಾ ಆರ್.ಬಿ. ಸೂರಟೂರ್, ಎ.ಪಿ. ನಾಡಗೇರ, ಸಲೀಂ ಜವಳಿ, ಕಾ.ಮ. ಅಧೀಕ್ಷಕ ಎಂ.ಎ. ಕಮದೂಡ, ಕೆ.ಸಿ. ರಜಪುತ್, ಹೆಚ್.ಎಸ್. ಕೋಣನವರ, ಡಿ.ಎಸ್. ಸಣ್ಣ ಪೊಜಾರ್ ಎನ್.ಎಸ್. ದೂಡ್ಡಮನಿ, ಪಿ.ಎಸ್. ಹಿತ್ತಲಮನಿ, ಮತ್ತಿತರರು ಉಪಸ್ಥಿತರಿದ್ದರು.