ಗ್ರಾಪಂ ನೌಕರನನ್ನು ಕೆಲಸದಿಂದ ಹೊರ ಹಾಕಿದ್ದಕ್ಕೆ ಖಂಡಿಸಿ ಮನವಿ
ಲೋಕದರ್ಶನ ವರದಿ
ಶಿಗ್ಗಾವಿ 27: ಆಡಳಿತಾತ್ಮಕ ಸೂಕ್ತ ಕಾರಣ ನೀಡದೇ ಗ್ರಾಮ ಪಂಚಾಯತಿ ನೌಕರನನ್ನು ಕೆಲಸದಿಂದ ಹೊರ ಹಾಕಿದ್ದಕ್ಕೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘ (ಸಿಐಟಿಯು) ತಾಲೂಕು ಸಮೀತಿ ಅಧ್ಯಕ್ಷ ಮಲ್ಲಪ್ಪ ಮುಂಚಿನಕೊಪ್ಪ ಗ್ರಾಪಂ ಆಡಳಿತ ಸಮೀತಿ ನಡೆ ಖಂಡಿಸಿ ಈ ಕುರಿತು ಗ್ರಾಪಂ ಪಿಡಿಓ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಅವರಿಗೆ ಮನವಿ ಅರ್ಪಿಸಿದೆ.
ತಾಲೂಕಿನ ಕ್ಯಾಲಕೊಂಡ ಗ್ರಾಮ ಪಂಚಾಯತಿ ಅಧ್ಯಕ್ಷ ಬಂಗಾರಪ್ಪ ಗೋಣೆಪ್ಪನವರ ಹಾಗೂ ಹಲವು ಸದಸ್ಯರು ಸೇರಿದಂತೆ ಕಾರ್ಯಾಲಯದಲ್ಲಿ ಡಾಟಾ ಎಂಟ್ರಿ., ಕಂ ಕ್ಲರ್ಕ ಕೆಲಸ ನಿರ್ವಹಿಸುತ್ತಿರುವ ಈರಣ್ಣ ಬ ಬಂಕಾಪೂರ ಎನ್ನುವ ನೌಕರರನ್ನು ಆಡಳಿತಾತ್ಮಕ ಕಾರಣವಿಲ್ಲದೇ ಕೆಲಸದಿಂದ ಹೊರ ಹಾಕಿರುತ್ತಾರೆ. ಕರ್ತವ್ಯಕ್ಕೆ ಕರ್ತವ್ಯಕ್ಕೆ ಹಾಜರಾಗಲೂ ಬಿಡುತ್ತಿಲ್ಲ. ಜೊತೆಗೆ ಗ್ರಾಮ ಪಂಚಾಯತಿ ಸಮೀತಿಯಿಂದ ಠರಾವು ಸ್ವೀಕರಿಸಿ ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ನೋಟೀಸ್ ನೀಡಿರುತ್ತಾರೆ. ಇದರಿಂದಾಗಿ ನೌಕರನಿಗೆ ಸಾಕಷ್ಟು ಮಾನಶಿಕ ಕಿರುಕುಳವಾಗಿದ್ದು ಈ ಕುರಿತು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಪಿ ವಿಶ್ವನಾಥ ಅವರಿಗೂ ಮನವಿ ಪತ್ರ ನೀಡಿ ಗಮನಕ್ಕೆ ತಂದಿದ್ದು ಸದರಿ ನೌಕರರ ಜೀವಕ್ಕೆ ಹಾನಿಯಾದಲ್ಲಿ ತಾವು ಬಾದ್ಯಸ್ಥರಾಗುತ್ತಿರಿ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೇ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘ (ಸಿಐಟಿಯು) ತಾಲೂಕು ಸಮೀತಿ ಅಧ್ಯಕ್ಷ ಮಲ್ಲಪ್ಪ ಮುಂಚಿನಕೊಪ್ಪ ನೇತ್ರತ್ವದಲ್ಲಿ ಗ್ರಾಮ ಪಂಚಾಯತಿ ಆಡಳಿತ ಸಮೀತಿ ಸದಸ್ಯರು ಅಧ್ಯಕ್ಷರ ವಿರುದ್ಧ ಹುಲಗೂರು ಪೊಲೀಸ್ ಠಾಣೆಗೂ ತೆರಳಿ ಪಿಎಸ್.ಐ ಪರಶುರಾಮ ಕಟ್ಟಿಮನಿಯವರಿಗೆ ತೆರಳಿ ದೂರು ಸಲ್ಲಿಸಿದ್ದಾರೆ