ಶಿಗ್ಗಾವ್

ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಯಬೇಕು

ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಯಬೇಕು

ಲೋಕದರ್ಶನ ವರದಿ

ಶಿಗ್ಗಾವಿ 13: ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಯಬೇಕು ಪದವಿ ಶಿಕ್ಷಣದಲ್ಲಿ  ಅಮೂಲಾಗ್ರ ಬದಲಾವಣೆ ಆಗಿದ್ದು ಸಾಂಪ್ರದಾಯಿಕ ಶಿಕ್ಷಣದಿಂದ ಇಂದು ವಿದ್ಯಾರ್ಥಿಗಳು ಹೊರ ಬಂದು ಐಎಎಸ್, ಕೆಎಎಸ್ ಯುಪಿಎಸ್ಸಿ ಪರೀಕ್ಷೆಗಳನ್ನ ಎದುರಿಸುವ  ದೆಸೆಯಲ್ಲಿ ಪ್ರಯತ್ನಿಸಿದರೆ ಮಾತ್ರ ಭವಿಷ್ಯದಲ್ಲಿ ನಮ್ಮ ವಿದ್ಯಾಥರ್ಿಗಳು ಉತ್ತಮ ಬದುಕನ್ನು ಸಾಗಿಸಬಲ್ಲರು ಎಂದು ಹಾವೇರಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಅಭಿಪ್ರಾಯ ಪಟ್ಟರು.

ಪಟ್ಟಣದ ರಂಭಾಪುರಿ ಕಾಲೇಜಿನಲ್ಲಿ 2022-23 ನೇ ಸಾಲಿನ ಕಾಲೇಜು ಒಕ್ಕೂಟ, ಪಠ್ಯೆತ್ತರ ಚಟುವಟಿಕೆಗಳು ಮತ್ತು ಎನ್ಎಸ್ಎಸ್ ಘಟಕದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಜವಾಬ್ದಾರಿ ಮುಖ್ಯವಾದದ್ದು ಮಾನವೀಯ ಮೌಲ್ಯಗಳನ್ನ ಬಾಲ್ಯದಲ್ಲಿಯೇ ತಿಳಿಸಿಕೊಡಬೇಕು, ಉತ್ತಮ ಸಮಾಜದ ನಿರ್ಮಾಣ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಅತ್ಯುತ್ತಮ ಸಂಸ್ಕಾರ ಅಗತ್ಯ ಎಂದರು.

ಕಾಲೇಜಿನ ಆಡಳಿತಾಧಿಕಾರಿ ಎಸ್ ಬಿ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಮಹಾವಿದ್ಯಾಲಯವು ಕಳೆದ 37 ವರ್ಷಗಳಲ್ಲಿ ಅತ್ಯುತ್ತಮ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದೆ ಎಂದು ಹೇಳಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುವುದು ಎಂದು ತಿಳಿಸಿದರು.

    ಪ್ರೊ. ಡಾ. ಡಿ ಎ ಗೊಬ್ಬರಗೊಂಪಿ ಯವರು ಮಾತನಾಡಿ ನಮ್ಮ ಸುತ್ತಲ ಸಮಾಜದಲ್ಲಿ ಇತಿಹಾಸದ ಪಳೆಯುಳಿಕೆಗಳು 10 ಹಲವು ಇದ್ದು ಅವುಗಳನ್ನು ಸಂರಕ್ಷಿಸುವ ಪೋಷಿಸುವ ಜವಾಬ್ದಾರಿ ನಮ್ಮದಾಗಿದೆ, ಅಲ್ಲದೆ ಯುವ ಜನತೆಯ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಮಾತನಾಡಿದರು.

      ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನ ಕ್ರೀಡಾ ಸಿರಿ ಹಾಗೂ ಪ್ರತಿಭಾ ಸಿರಿ ಪ್ರಶಸ್ತಿ ನೀಡಿ ಗೌರವಿಸಿದರು. ರಾಜ್ಯೋತ್ಸವ ಪ್ರಸ್ತಿ ಪುರಸ್ಕೃತ ಡಾ. ಶ್ರೀಶೈಲ್ ಹುದ್ದಾರ, ಆಡಳಿತ ಮಂಡಳಿಯ ನಿರ್ದೇಶಕ ಕೊಟ್ರೇಶಪ್ಪ, ಪ್ರೊ.ಪಿ.ಸಿ ಹಿರೇಮಠ, ಆರ್ ಎಸ್ ಹೂಗಾರ್ತಿ, ಡಾ. ದಾದುಗೌಡರು ಡಾ. ಎಚ್ ಕೆ ವಿನಯ್, ಪ್ರಾಚಾರ್ಯ ಡಾ. ಬಿ ವೈ ತೊಂಡಿಹಾಳ, ಮತ್ತು ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.

ಸುದ್ದಿ ಓದಿ