ಶಿಗ್ಗಾವ್

ಶರಣಬಸವ ಮಹಾಸ್ವಾಮಿಗಳ ಸಂಸ್ಮರಣೋತ್ಸವ

ಶರಣಬಸವ ಮಹಾಸ್ವಾಮಿಗಳ ಸಂಸ್ಮರಣೋತ್ಸವ

ಲೋಕದರ್ಶನ ವರದಿ

ಶಿಗ್ಗಾವಿ 20: ಇದೇ ನ. 23ರಂದು ಬಾಗಲಕೋಟೆಯ ನವನಗರದ ಭೋವಿ ಗುರುಪೀಠದ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನದಲ್ಲಿ ಶರಣಬಸವ ಮಹಾಸ್ವಾಮಿಗಳ ಸಂಸ್ಮರಣೋತ್ಸವ, ಗದ್ದುಗೆ ಶಿಲಾಮಂಟಪ ಶಿಲಾನ್ಯಾಸ, ಹಾಗೂ ಗುರು ಕುಟೀರ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅದರ ಅಂಗವಾಗಿ ಇಂದು ಪಟ್ಟಣದ ಭೋವಿ ಕಾಲೋನಿಗೆ ಆಗಮಿಸಿದ ಡಿಜಿಟಲ್ ಪ್ರಚಾರ ರಥವನ್ನು ಭೋವಿ ಸಮಾಜದ ಮುಖಂಡರು ಅದ್ದೂರಿಯಿಂದ ಸ್ವಾಗತಿಸಿದರು.

ಭೋವಿ ಸಮಾಜದ ತಾಲೂಕ ಅಧ್ಯಕ್ಷ ಅರ್ಜುನ ಹಂಚಿನಮನಿ, ಮುಖಂಡರಾದ ಧರ್ಮಣ್ಣ ವಡ್ಡರ, ಹನುಮಂತಪ್ಪ ಬಂಡಿವಡ್ಡರ, ರಾಮು ಪೂಜಾರ, ದುರಗಪ್ಪ ವಡ್ಡರ, ಹನಮಂತಪ್ಪ ಬಾರಂಗಿ, ನಾಗರಾಜ ವಡ್ಡರ, ಫಕ್ಕಿರೇಶ ಶಿಗ್ಗಾಂವ, ನಿಂಗಪ್ಪ ಶಿವಳ್ಳಿ, ನಾಗರಾಜ ವಡ್ಡರ, ಭೀಮಸೇನ ವಡ್ಡರ, ಬಸಪ್ಪ ವಡ್ಡರ ಸೇರಿದಂತೆ ಸಮಾಜದ ಮುಖಂಡರು ಯುವಕರು ಮಹಿಳೆಯರು ಭಾಗವಹಿಸಿದ್ದರು 

ಸುದ್ದಿ ಓದಿ