ರಾಣೆಬೆನ್ನೂರ

ಸ್ವಯಂ ಸೇವಾ ಸಂಘ ಸಂಸ್ಥೆಗಳ ಬೆಳವಣಿಗೆಗೆ ಒಗ್ಗಟ್ಟು ಅಗತ್ಯ: ಎಚ್ಎಫ್ ಅಕ್ಕಿ

ಸ್ವಯಂ ಸೇವಾ ಸಂಘ ಸಂಸ್ಥೆಗಳ ಬೆಳವಣಿಗೆಗೆ ಒಗ್ಗಟ್ಟು ಅಗತ್ಯ: ಎಚ್ಎಫ್ ಅಕ್ಕಿ

 ರಾಣೇಬೆನ್ನೂರು 09:  ಯಾವುದೇ ಸ್ವಯಂ ಸೇವಾ ಸಂಘ ಸಂಸ್ಥೆಗಳು ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯನ್ನು ಸಾಧಿಸಬೇಕಾದರೆ ಸಂಘಟನೆಗಳು ತಮ್ಮ ಒಗ್ಗಟ್ಟನ್ನು ಪ್ರದಶರ್ಿಸಬೇಕಾದ ಇಂದಿನ ಅಗತ್ಯವಿದೆ ಎಂದು ಫೇವಾರ್ಡಿ  ಹೆಚ್ ಜಿಲ್ಲಾಧ್ಯಕ್ಷ ಎಚ್ಎಫ್ ಅಕ್ಕಿ ಹೇಳಿದರು.      

  ಅವರು ಸೋಮವಾರ ಇಲ್ಲಿನ  ನೀಡ್ಸ್ ಸೇವಾ ಸಂಸ್ಥೆ ಭವನದಲ್ಲಿ, ಜಿಲ್ಲೆಯ ಸಂಘ ಸಂಸ್ಥೆಗಳ ಮುಖ್ಯಸ್ಥರಿಗೆ ಆಯೋಜಿಸಿದ್ದ, ಜಿಲ್ಲಾ ಮಟ್ಟದ  ತರಬೇತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಸಂಘಗಳು ಸಮಾಜ ಸೇವೆಯೇ ಪ್ರಧಾನ ಗುರಿಯಾಗಿರಿಸಿಕೊಂಡು, ಅನೇಕ ಸಮಸ್ಯೆಗಳ ಮಧ್ಯೆ ಕಾರ್ಯನಿರ್ವಹಿಸುತ್ತಾ ಭವಿಷ್ಯದ ಭದ್ರತೆಗಾಗಿ ನಿರಂತರ ಪ್ರಯತ್ನಿಸುತ್ತಲಿವೆ ಎಂದ ಅವರು ಇಂದಿನ ಸಂದರ್ಭದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಉಳಿದು ಬೆಳೆಯಬೇಕಾದರೆ, ಸಿಎಸ್ಆರ್ ಕಡೆಗೆ ಮುಖ ಮಾಡಬೇಕಾದ ಅಗತ್ಯವಿದೆ ಎಂದರು.        

  ಸೌರಶಕ್ತಿ ಚಾಲಿತ  ಉಪಕರಣಗಳ ಜೀವನೋಪಾಯ,  ಸ್ವಯಂ ಸೇವಾ ಸಂಸ್ಥೆಗಳ ಬಲವರ್ಧನೆ  ಕಾರ್ಯಗಾರ ಉದ್ಘಾಟಿಸಿದ  ಹಾವೇರಿಯ ಸೇಲ್ಕೊ ಶಾಖಾ ವ್ಯವಸ್ಥಾಪಕ ರಘು ಜವಳಗಿ ಅವರು, ಇತಿಹಾಸದಲ್ಲಿ ಗ್ರಾಮೀಣ ಪ್ರದೇಶದ ಜನರ  ನಿತ್ಯದ ಜನಜೀವನ  ನೈಸರ್ಗಕವಾಗಿ ಸಾಗಿತ್ತು. ಆದರೆ ಆಧುನಿಕ ಬದುಕು ಎಲ್ಲ ರೀತಿಯ ತಂತ್ರಜ್ಞಾನ ಲಭ್ಯವಾಗಿದ್ದರು, ಪರಿಸರಕ್ಕೆ ಪೂರಕವಾಗಿರದೆ ಕೃತಕವಾಗಿದೆ. ಭಾರತೀಯ ವಿಕಾಸ ಟ್ರಸ್ಟ್ ಸುಸ್ಥಿರ ಇಂಧನದ ಪರಿಣಾಮಕಾರಿ ಬಳಕೆಯ ಮೂಲಕ ಇಂದು ಸ್ವ ಉದ್ಯಮಗಳಿಗೆ ಜೀವನೋಪಾಯ ಮಾಡಲು ಸಶಕ್ತಿಕರಣವಾಗಿದೆ, ಸಂಘ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅಳವಡಿಸಿಕೊಂಡು ಆರ್ಥಿಕ ಅಭಿವೃದ್ಧಿಗೆ ಮುಂದಾಗಬೇಕು ಎಂದು ಕರೆ ನೀಡಿದರು.

 ಫೆವಾರ್ಡ್  ಕಾರ್ಯದರ್ಶಿ ಎಸ್.ಹೆಚ್.ಮಜೀದ್ ಅವರು, ಇಂದು  ಸ್ವಯಂ ಸೇವಾ ಸಂಸ್ಥೆಗಳು ಬಲ ವರ್ಧನೆಗೊಳ್ಳಬೇಕಾದರೆ ಬಹು ಮುಖ್ಯವಾಗಿ ಒಗ್ಗಟ್ಟನ್ನು ಕಾಯ್ದುಕೊಳ್ಳಬೇಕಾಗಿದೆ. ಇದರಿಂದ ಮಾತ್ರ ಬಲವರ್ಧನೆಗೊಳ್ಳಲು ಸಾಧ್ಯವಿದೆ ಒಗ್ಗಟ್ಟು ಇಲ್ಲದೆ ಹೋದರೆ, ಇಲ್ಲಿವರೆಗೂ ಮಾಡಿಕೊಂಡು ಬಂದ ಸೇವೆಗಳು ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ ಅದಕ್ಕಾಗಿ ಫೇವಾರ್ಡ, ಸಾಕಷ್ಟು ಪ್ರಯತ್ನಿಸುತ್ತಲಿದೆ ಅದಕ್ಕೆ ಸಂಘ ಸಂಸ್ಥೆಗಳು ಮುಂದೆ ಬಂದು ಬಲಿಸ್ಟಗೊಳ್ಳಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು".ಇಡಾರಿ " ಮುಖ್ಯಸ್ಥೆ ಪರಿಮಳ ಜೈನ್, ವಿಕಾಡರ್್ ಅಧ್ಯಕ್ಷ ಏಕಾಂತ ಮುದಿಗೌಡ್ರ," ಜನನಿ " ಸಂಸ್ಥೆ ಬಿ.ಜಿ. ಸಾಲಿ," ಅಮ್ಮ" ನಿಂಗಪ್ಪ ಆರೇರ್," ಅಭಿರುಚಿ " ಕೆ. ಎಸ್. ನಾಗರಾಜ್, " ಗಾಂಧಿ "ಹೆಚ್. ಜಿ.ಮಾವಿನತೋಪ, ಗುರುರಾಜ್  ಮತ್ತಿತರರು ಬೆಳವಣಿಗೆ ಕುರಿತು ಮಾತನಾಡಿದರು. ನಡೆದ ಕಾರ್ಯಗಾರದಲ್ಲಿ ಜಿಲ್ಲೆಯ ಅನೇಕ ಸ್ವಯಂ ಸೇವಾ ಸಂಘ ಸಂಸ್ಥೆಗಳ ಮುಖಂಡರು, ಮಹಿಳೆಯರು ಪಾಲ್ಗೊಂಡಿದ್ದರು 

ಸುದ್ದಿ ಓದಿ