ರಾಣೆಬೆನ್ನೂರ

ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಆರ್. ಟಿ.ಕುಂದಾಪುರ್ಗೆ ಅಭಿನಂದನಾ ಸನ್ಮಾನ

ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಆರ್. ಟಿ.ಕುಂದಾಪುರ್ಗೆ ಅಭಿನಂದನಾ ಸನ್ಮಾನ

ರಾಣೆಬೆನ್ನೂರು 13:  ಇಲ್ಲಿನ ಕುಂದಾಪುರ ಸಭಾಭವನದಲ್ಲಿ ನೂತನ ಕರಾವಳಿ ಬಳಗದ ಉದ್ಘಾಟನಾ ಸಮಾರಂಭವು ಸೋಮವಾರ ನಡೆಯಿತು. ಸಮಾರಂಭದಲ್ಲಿ ನೂತನ ಅಧ್ಯಕ್ಷ, ಸಹಕಾರಿ ಸಂಘದ ಕ್ಷೇತ್ರ ಸಾಧಕ ರತ್ನಾಕರ್ ತಿ.ಕುಂದಾಪುರ ಅವರನ್ನು ವಿಧಾನ ಪರಿಷತ್ ಸದಸ್ಯ ಆರ್ ಶಂಕರ್, ಧರ್ಮಪತ್ನಿ ಧನಲಕ್ಷ್ಮಿ ಶಂಕರ್  ಅವರು ಹಾರ್ದಿಕವಾಗಿ ಅಭಿನಂದಿಸಿ, ಫಲ -ಪುಷ್ಪ ಶಾಲು, ಸ್ಮರಣಿಕೆ ಇತ್ತು ಸನ್ಮಾನಿಸಿ, ಗೌರವಿಸಿದರು.  ನಾಡಿನ ಗಣ್ಯರಾದ ಪ್ರೊ :ಬಿ. ಬಿ. ನಂದ್ಯಾಲ,ಹುಬ್ಬಳ್ಳಿಯ ಹರಿ ಓಂ  ಸುಧಾಕರ ಶೆಟ್ಟಿ, ಹಾವೇರಿಯ ಪ್ರಕಾಶ ಶೆಟ್ಟಿ, ಮಹೇಶ್ ಅಡಿವಪ್ಪನವರ್, ಶ್ರೀಪಾದ್ ಸಾಹುಕಾರ್, ಕೃಷ್ಣಮೂರ್ತಿ  ಸುಣಗಾರ, ವಿಶ್ವನಾಥ ಹೂಳೆಬಾಗಿಲ, ಅರುಣ್ ಕುಮಾರ್ ಶೆಟ್ಟಿ, ಶ್ರೀಕಾಂತ್ ನಾಯಕ್ ಸೇರಿದಂತೆ ಮತ್ತಿತರ ಗಣ್ಯರು, ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಸುದ್ದಿ ಓದಿ