ರಾಣೆಬೆನ್ನೂರ

ರೇನ್ ಬೋ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ರೇನ್ ಬೋ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ರಾಣೆಬೆನ್ನೂರು 20:  ಸಮಾಜದಲ್ಲಿ ಬೆಳೆಯುವ ಮಕ್ಕಳು, ತಮ್ಮ ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಸತ್ಪ್ರಜೆಯಾಗಿ ಬೆಳೆಯಲು ಅವಕಾಶವನ್ನು ಕಲ್ಪಿಸಬೇಕು ಎಂದು ರತ್ನಮ್ಮ ಎ.ಬಿ. ಹೇಳಿದರು. ಅವರು ತಾಲೂಕಿನ ಕಮದೋಡು ಬಳಿಯ ರೇನ್ಬೋ ಪಬ್ಲಿಕ್ ಶಾಲೆಯಲ್ಲಿ ನಡೆದ, ಪಂಡಿತ್ ಜವಾಹರಲಾಲ್ ನೆಹರು ಅವರ, 133ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಸಮಾಜದಲ್ಲಿ ಇಂದು ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ಸಿಗುತ್ತಿರುವುದು, ಕುಟುಂಬದ ಮತ್ತು ದೇಶದ ಅಭಿವೃದ್ಧಿ ಸಂಕೇತವಾಗಿದೆ ಉತ್ತಮವಾದ ಶಿಕ್ಷಣ ದೊರಕಿದಾಗ ಮಾತ್ರ ವ್ಯಕ್ತಿತ್ವವನ್ನು ನಿರೂಪಿಸಿಕೊಳ್ಳಲು ಸಾಧ್ಯವಾಗುವುದು ಎಂದರು. ಸಂಸ್ಥಾಪಕ ಅಧ್ಯಕ್ಷ ಡಾ. ಸಿ.ಟಿ. ಸುರೇಶ್ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರದ ಖಾತೆ ವೈದ್ಯ ಡಾ. ನಾರಾಯಣ ಪವಾರ್, ವಸಂತ ಹುಲ್ಲತ್ತಿ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಗಣ್ಯರು  ಪಾಲ್ಗೊಂಡಿದ್ದರು ಸುಪ್ರಿಯಾ ಸಂಗಡಿಗರು ಪ್ರಾರ್ಥಿಸಿದರು. ಕವನ ಸ್ವಾಗತಿಸಿದರು. ವೈಷ್ಣವಿ ಪ್ರಾಸ್ತಾವಿಕ ಕವಾಗಿ ಮಾತನಾಡಿದರು. ಕಿಶೋರ್ ನಿರೂಪಿಸಿ, ನೋಯಲ್ ವಂದಿಸಿದರು. ನಂತರ ನಡೆದ ವಿದ್ಯಾಥರ್ಿಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪಾಲಕರ  ಗಮನ ಸೆಳೆದವು 

ಸುದ್ದಿ ಓದಿ