ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಸಂಭ್ರಮೋತ್ಸವ
ತಾಳಿಕೋಟಿ: ಬಿಜೆಪಿ ಪಕ್ಷದ ನೂತನ ರಾಜ್ಯ ಅಧ್ಯಕ್ಷರಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರ ಇವರನ್ನು ಆಯ್ಕೆ ಮಾಡಿದ ವರಿಷ್ಠರ ನಿರ್ಧಾರವನ್ನು ಸ್ವಾಗತಿಸಿ ನಗರ ಬಿಜೆಪಿ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿ ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.
ಶನಿವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸೇರಿದ ಬಿಜೆಪಿ ನೂರಾರು ಕಾರ್ಯಕರ್ತರು ಭಾರತ್ ಮಾತಾ ಕಿ ಜೈ ಘೋಷಣೆಯೊಂದಿಗೆ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹಾಗೂ ಮಾಜಿ ಶಾಸಕ ನಡಹಳ್ಳಿ ಅವರ ಪರವೂ ಘೋಷಣೆಗಳನ್ನು ಹಾಕಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.
ಮಾತನಾಡಿದ ಮುಖಂಡ ಶಿವಶಂಕರ ಹಿರೇಮಠ ಅವರು ಮಾಜಿ ಸಿಎಂ ಯಡಿಯೂರಪ್ಪನವರು ಈ ರಾಜ್ಯ ಕಂಡ ಧೀಮಂತ ನಾಯಕ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ಅತ್ಯಂತ ಕ್ರಿಯಾಶೀಲ ಯುವನಾಯಕ ಹಾಗೂ ಸಂಘಟನಾ ಚತುರರಾಗಿದ್ದಾರೆ ಇವರನ್ನು ಪಕ್ಷದ ನೂತನ ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಪಕ್ಷದ ವರಿಷ್ಠರ ಈ ತೀರ್ಮಾನವನ್ನು ನಾವು ಸ್ವಾಗತಿಸಿ ಅವರನ್ನು ಅಭಿನಂದಿಸುತ್ತೇವೆ ಎಂದ ಅವರು ವಿಜೇಂದ್ರ ಅವರ ಅಧ್ಯಕ್ಷತೆಯಲ್ಲಿ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಎಲ್ಲ 28 ಸ್ಥಾನಗಳನ್ನು ಗೆಲ್ಲಲಿದೆ ಇದರ ಮೂಲಕ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಆಗಲು ಸಹಕರಿಸಲಾಗುವುದು ಯುವ ನಾಯಕ ವಿಜೇಂದ್ರರಿಗೆ ಈ ಸ್ಥಾನ ಕೊಟ್ಟಿರುವುದರಿಂದ ಪಕ್ಷದ ಯುವ ಕಾರ್ಯಕರ್ತರಲ್ಲಿ ಹುಮ್ಮಸ್ಸು ತಂದಿದೆ ವಿಜೇಂದ್ರ ಅವರ ಅತ್ಯಾಪ್ತ ಸ್ನೇಹಿತರಾದ ಎ. ಎಸ್. ಪಾಟೀಲ ನಡಹಳ್ಳಿ ಅವರು ಈ ಮೊದಲು ಅವರೊಂದಿಗೆ ಹಲವಾರು ಜಿಲ್ಲೆಗಳ ಪ್ರವಾಸವನ್ನು ಮಾಡಿ ಪಕ್ಷವನ್ನು ಸಂಘಟಿಸುವ ಕೆಲಸ ಮಾಡಿದ್ದಾರೆ ಈಗ ಮತ್ತೆ ಅವರಿಬ್ಬರೂ ಕೂಡಿ ಇಡೀ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಿ ಮುಂದಿನ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಿ ಪಕ್ಷಕ್ಕೆ ಗೆಲುವು ತಂದು ಕೊಡಲಿದ್ದಾರೆ ಎಂದರು. ಈ ಸಮಯದಲ್ಲಿ ಮುಖಂಡರಾದ ರಾಘವೇಂದ್ರ ವಿಜಾಪುರ. ಶಿವಮ್ಮ ಬಿರಾದರ. ಹರಿ ಸಿಂಗ್ ಕೊಕಟನೂರ. ಅಶ್ವಿನ್ ಕುಮಾರ್ ಬೇದರಕರ. ವೀರೇಶ ಸಾಸನೂರ. ಕಿರಣ್ ಬಡಿಗೇರ. ನವೀನ ಡಿಸಲೆ. ವಾಗೀಶ್ ಕೊಡಿಗನೂರ. ಕುಮಾರ್ ಬಡಿಗೇರ. ಮಲ್ಲು ಕೊಡೆಕಲ್. ಷಣ್ಮುಖಯ್ಯ ವಿಭೂತಿ .ಪ್ರಭು ಬಿರಾದಾರ. ದತ್ತಾ ಡಿವಿಡಿ. ಶರಣಪ್ಪ ಕೊಳ್ಳಿ ಮುಂತಾದವರು ಇದ್ದರು