ಮಾಂಜರಿ ಗ್ರಾಮದಲ್ಲಿ ಟಿಪ್ಪು ಸುಲ್ತಾನ್ ಅವರ ಜಯಂತಿ ಆಚರಣೆ
ಮಾಂಜರಿ21: ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಮುಸ್ಲಿಂ ಬಾಂಧವರು ಒಂದುಗೂಡಿ ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ಇವರ 273ನೇ ಜಯಂತಿ ಉತ್ಸವ ಇಂದು ಅದ್ದೂರಿಯಾಗಿ ಆಚರಿಸಿದರು.
ಬೆಳಗ್ಗೆ ಗ್ರಾಮದ ಬಜಾರ್ ಪೇಟದಲ್ಲಿರುವ ಟಿಪ್ಪು ಸುಲ್ತಾನ್ ಚೌಕ ಹತ್ತಿರ ಟಿಪ್ಪು ಸುಲ್ತಾನ್ ಇವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಪಟಾಕಿ ಸಿಡಿಸಿ ಜಯಂತಿ ಆಚರಿಸಲಾಯಿತು.
ಮಾಂಜರಿ ಮುಸ್ಲಿಂ ಸಮಾಜದ ಸಂಘಟನೆ ಅಧ್ಯಕ್ಷ ಜಾವೇದ್ ಮಾಕಂದಾರ್ ಇವರ ಅಧ್ಯಕ್ಷತೆಯಲ್ಲಿ ಜಯಂತಿ ಉತ್ಸವ ಆಚರಿಸಲಾಯಿತು. ಗ್ರಾಮದ ದಲಿತ ಮುಖಂಡ ಸಿದ್ಧಾರ್ಥ ಗಾಯಗೊಳ್ ಟಿಪ್ಪು ಸುಲ್ತಾನ್ ಇವರ ಬಗ್ಗೆ ಎಲ್ಲ ಯುವಕರಿಗೆ ಮಾಹಿತಿ ನೀಡುವಾಗ, ಟಿಪ್ಪು ಸುಲ್ತಾನ್ ಇವರು ಕರ್ನಾಟಕದ ಹುಲಿ ಎಂದು ಹೆಸರಾಂತ ರಾಗಿದ್ದರು. ಬ್ರಿಟಿಷರ ವಿರುದ್ಧ ಅವರು ಹೋರಾಡಿದ್ದು, ಅವರಿಗೆ ಬ್ರಿಟಿಷರು ಹೆದರುತ್ತಿದ್ದರು. ಇಂತಹ ಟಿಪ್ಪು ಸುಲ್ತಾನಗಳು ನಾಡಿನಲ್ಲಿ ಮತ್ತಿಷ್ಟು ಯುವಕರಲ್ಲಿ ಬೆರೆತು ಧೈರ್ಯ ತೋರಿಸಿದರೆ ಯಾರು ಶತ್ರುಗಳು ನಮ್ಮ ಭಾರತ ಹೆತ್ತ ಕನ್ನು ಹಾಕುವ ಶಕ್ತಿ ಅವರಿಗೆ ಇರುವುದಿಲ್ಲ. ಟಿಪ್ಪು ಇವರು ದೇಶಭಕ್ತಿ ಪ್ರತಿಯೊಬ್ಬ ಯುವಕರಲ್ಲಿ ಬೆರೆಯಬೇಕು ಎಂದು ಹೇಳಿದರು.
ಮುಸ್ಲಿಂ ಸಮಾಜ ಸಂಘಟನೇ ಜಾವೇದ್ ಮಕಾಂದಾರ್ ಮಾತನಾಡಿ, ಹಜರತ್ ಟಿಪ್ಪು ಸುಲ್ತಾನ್ ಇವರು ದೇಶಕ್ಕಾಗಿ ಅವರು ಹೋರಾಡುತ್ತಿರುವಾಗ ಬ್ರಿಟಿಷರು ಅವರಿಗೆ ಭಯಪಡುತ್ತಿದ್ದರು ಅವರಲ್ಲಿರುವ ಶೌರ್ಯ ದೇಶಭಕ್ತಿ ಅಪಾರವಿತ್ತು. ಇಂದಿನ ಯುವಕರು ತಮ್ಮ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು
ಈ ವೇಳೆ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಸಂಜಯ್ ನರವಾಡೆ ಶಶಿಕಾಂತ್ ಪಾಟೋಳೆ ಸಂಜಯ್ ನಾಂದ್ರೆ ಜಾಕಿರ್ ತರಾಳ್ ಶಕೀಲ್ ಮುಲ್ಲಾ ಉತಮ್ ವಡವಡೆ ಮತ್ತು ಮುಸ್ಲಿಂ ಹಾಗೂ ಎಲ್ಲ ಬಾಂಧವರು ಹಾಜರಿದ್ದರು.