ಅಂಬುಲೆನ್ಸ್ ಸಿಬ್ಬಂದಿಗೆ ಬಿಸಿಜಿ ಲಸಿಕೆ.. ಕಾರಣವಿದು..!
ನವದೆಹಲಿ, ನ 10: ಕೊರೊನಾ ಸಾಂಕ್ರಾಮಿಕ ವಿರುದ್ಧ ಹೋರಾಟದಲ್ಲಿ ಬಿ ಸಿ ಜಿ ಲಸಿಕೆ ಪರಿಣಾಮಕಾರಿ ಎಂಬುದು ವಿವಿಧ ಸಂಶೋಧನೆಗಳಲ್ಲಿ ಕಂಡು ಬಂದಿದೆ. ಈ ಲಸಿಕೆ ಹಾಕಿಸಿಕೊಂಡ ಶೇ 99 ರಷ್ಟು ಜನರು ಕೊರೊನಾ ಸೋಂಕಿಗೆ ಒಳಗಾಗದೆ ಸುರಕ್ಷಿತವಾಗಿದ್ದಾರೆ ಎಂಬುದು ತಿಳಿದುಬಂದಿದೆ.ಈ ಕಾರಣದಿಂದ ಈ ಲಸಿಕೆಯನ್ನು ಮೊದಲು ಆಂಬ್ಯುಲೆನ್ಸ್ ಸಿಬ್ಬಂದಿಗೆ ನೀಡಲು ಕೇಂದ್ರ ಸರ್ಕಾರ ಆಶಿಸಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಮುಖ್ಯ ವೈದ್ಯಾಧಿಕಾರಿಗಳಿಗೆ ಆದೇಶಗಳನ್ನು ಹೊರಡಿಸಿದೆ. ನೋಯ್ಡಾದ ಕೋವಿಡ್ ಆಸ್ಪತ್ರೆಯ ನಿರ್ವಾಹಕರು ಬಿಸಿಜಿ ಲಸಿಕೆ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದ್ದಾರೆ. ಅವರು 80 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಬಿಸಿಜಿ ಲಸಿಕೆಗಳನ್ನು ನೀಡಿದ್ದರು. ಅವರಲ್ಲಿ ಯಾರೂ ಸಹ ಕೊರೊನಾ ಸೋಂಕಿಗೆ ಒಳಗಾಗಲಿಲ್ಲ. ಇನ್ನೂ ಬಿಸಿಜಿ ಲಸಿಕೆ ನೀಡದ 150 ಸಿಬ್ಬಂದಿಯ ಹಲವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಸಂಶೋಧನೆಯ ವಿವರಗಳನ್ನು ಇಂಡಿಯನ್ ಜನರಲ್ ಅಪ್ಲೈಡ್ ರಿಸರ್ಚ್‌ನಲ್ಲಿ ಪ್ರಕಟಿಸಲಾಗಿದೆ. ಈ ಹಿನ್ನೆಲೆಯಲ್ಲಿಯೇ ಆಂಬುಲೆನ್ಸ್ ಸಿಬ್ಬಂದಿಗೆ ಈ ಲಸಿಕೆ ನೀಡುವಂತೆ ರಾಷ್ಟ್ರೀಯ ಆರೋಗ್ಯ ಮಿಷನ್ ವೈದ್ಯಾಧಿಕಾರಿಗಳಿಗೆ ಸೂಚನೆಗಳನ್ನು ನೀಡಿದೆ.