ಜಮಖಂಡಿ

ಬಾಲಕರ, ಬಾಲಕಿಯರ ವಸತಿ ನಿಲಯ ಆನ್ಲೈನ್ ಅರ್ಜಿ ಆಹ್ವಾನ

ಬಾಲಕರ, ಬಾಲಕಿಯರ ವಸತಿ ನಿಲಯ ಆನ್ಲೈನ್ ಅರ್ಜಿ ಆಹ್ವಾನ

ಲೋಕದರ್ಶನ ವರದಿ,

ಜಮಖಂಡಿ  20:ಪ್ರಸಕ್ತ ಸಾಲಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಾಗೂ ಇತರೆ ಜಾತಿಯ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮೆಟ್ರಿಕ್ ನಂತರದ ಬಾಲಕರ, ಬಾಲಕಿಯರ ವಸತಿ ನಿಲಯಗಳಲ್ಲಿ ಖಾಲಿ ಇರುವ ಸ್ಥಳಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಜು. 30 ಕೊನೆಯ ದಿನವಾಗಿದ್ದು. ಇಲಾಖೆಯ ವೆಬ್ಸೈಟ್ ನಂಬರ್ www.sw.kar.nic.inಗೆ ಭೇಟಿ ನೀಡಿ 2023-24ನೇ ಸಾಲಿನ ವಸತಿ ನಿಲಯಕ್ಕೆ ಪ್ರವೇಶಾತಿ ಲಿಂಕ್ನ್ನು ಕ್ಲಿಕ್ ಮಾಡಿ ವಿದ್ಯಾರ್ಥಿಯ SSP Scholarship ಸಂಖ್ಯೆ ಹಾಗೂ Password ನಮೂದಿಸಿ ವಿದ್ಯಾರ್ಥಿಗಳು ಲಾಗಿನ್ ಬಳಸಿಕೊಂಡು ಅಜರ್ಿ ಸಲ್ಲಿಸಬೇಕು. 

ಅವಶ್ಯಕವಿರುವ ದಾಖಲಾತಿಗಳಾದ ವಿದ್ಯಾರ್ಥಿ  ಹಾಗೂ ಪಾಲಕರ ಆಧಾರ್ ಕಾರ್ಡ್  ಸಂಖ್ಯೆ, ವಿದ್ಯಾರ್ಥಿ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಕಾಲೇಜಿನಲ್ಲಿ ನೀಡಲಾಗುವ ನೋಂದಣಿ ಸಂಖ್ಯೆ, (Admission Registration Number)  ವಿದ್ಯಾರ್ಥಿಯ ಹೆಸರಿನಲ್ಲಿರುವ  RD  ಸಂಖ್ಯೆ ಹೊಂದಿದ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ., ವಿದ್ಯಾರ್ಥಿಯ ವಾಸಸ್ಥಳದ ಅಂತರ್ ಪ್ರಮಾಣ ಪತ್ರ. (ಕಿಲೋಮಿಟರ್ ಸರ್ಟಿಫಿಕೆಟ್), ವಿದ್ಯಾರ್ಥಿಯ ಕಳೆದ ಸಾಲಿನ ಅಂಕಪಟ್ಟಿ ವಿದ್ಯಾರ್ಥಿ ಹಾಗೂ ಪಾಲಕರ ಆಧಾರ್ ಕಾರ್ಡ್  ಸಂಖ್ಯೆ, ಆನ್ಲೈನ್ ಸ್ವೀಕೃತಿ (Acknowledgement) ಪ್ರತಿಯೊಂದಿಗೆ ಮೇಲ್ಕಂಡ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಪ್ರಸಕ್ತ ಸಾಲಿನಲ್ಲಿ ಪ್ರವೇಶ ಪಡೆದ ಕಾಲೇಜಿನ ಪ್ರಾಚಾರ್ಯರು, ಪ್ರಾಂಶುಪಾಲರ ದೃಢೀಕರಣ ಮಾಡಿಸಿ ಕಛೇರಿಗೆ ಸಲ್ಲಿಸುವುದು. ಹೊಸದಾಗಿ ಪ್ರವೇಶ ಕೋರಿ ಬರುವ ವಿದ್ಯಾರ್ಥಿಗಳನ್ನು ಮೆರಿಟ್ ಹಾಗೂ ಕೌನ್ಸೆಲಿಂಗ್ ಮೂಲಕ ವಸತಿ ನಿಲಯಗಳಿಗೆ ಆಯ್ಕೆ ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಕಾಣಿಸಿದವರನ್ನು ಕಛೇರಿ ವೇಳೆಯಲ್ಲಿ ಹಾಗೂ ಮೊಬೈಲ್ ಸಂಖ್ಯೆ  9480843061 ನ ಮೂಲಕ ಸಂಪರ್ಕಿಸಬೇಕೆಂದು ಸಹಾಯಕ ನಿದರ್ೇಶಕರು ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಸಿ,ಎಸ್,ಗಡ್ಡದೇವರಮಠ ಪ್ರಕಟನೆಗೆ ತಿಳಿಸಿದ್ದಾರೆ

ಸುದ್ದಿ ಓದಿ