ಬಳ್ಳಾರಿ ನಗರ ಜೆಡಿಎಸ್ ಕಛೇರಿಗೆ ಬೇಟಿನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ

ಬಳ್ಳಾರಿ ನಗರ ಜೆಡಿಎಸ್ ಕಛೇರಿಗೆ ಬೇಟಿನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ
ಲೋಕದರ್ಶನ ವರದಿ
ಬಳ್ಳಾರಿ 16: ನಗರದ ಜಾತ್ಯಾತೀತ ಜನತಾದಳ ಪಕ್ಷದ ಕಛೇರಿಗೆ ಬೇಟಿನೀಡಿ ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ಅಲ್ಲಿಂದ ತೆರಳಿ ಮೈತ್ರಿಸಕರ್ಾರದ ಪ್ರಯುಕ್ತ ಮಂಗಳವಾರ ಜೆಡಿಎಸ್ ಕಛೇರಿಗೆ ತೆರಳಿದರು. ಕಛೇರಿಯಲ್ಲಿ ಹಲವು ಸಮಯ ಜೆಡಿಎಸ್ ಪಕ್ಷದ ಅಧ್ಯಕ್ಷ ಕಬ್ಬಿಣದ ಶಿವಪ್ಪ ಅವರ ಜೊತೆ ಸಮಾಲೋಚನೆ ನಡೆಸಿದರು. ಇವರ ಜೊತೆ ಬಳ್ಳಾರಿ ಲೋಕಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯಾಥರ್ಿಯಾದ ವಿಧಾನ ಪರಿಷತ್ ಸದಸ್ಯ ಬಿ.ಎಸ್.ಉಗ್ರಪ್ಪ, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯಕ್ ಹೊಸಪೇಟೆಯ ಕಾಂಗ್ರೆಸ್ ಮುಖಂಡ ದೀಪಕ್ಸಿಂಗ್ ಹಾಗೂ ಹಲವಾರು ಗಣ್ಯರು ಜೆಡಿಎಸ್ ಕಛೇರಿಗೆ ತೆರಳಿದರು. ಜೆಡಿಎಸ್ ಕಛೆರಿಯಲ್ಲಿ ಆದ್ದೂರಿಯಾಗಿ ಸ್ವಾಗತ ಮಾಡಿಕೊಂಡು ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಮನಸೆಳೆದು ಕಾಂಗ್ರೆಸ್ ಅಭ್ಯಾಥರ್ಿಗೆ ಮತ ನೀಡಲು ನಾವು ಜಿಲ್ಲೆಯಾಧ್ಯಂತ ಹೋಗಲಿದ್ದೇವೆ ಎಂದು ಆಶ್ವಾಸನೆ ನೀಡಿದರು. ಇದಕ್ಕೆ ಸಹಮತವಿತ್ತ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ ವಿಶ್ವಾಸವನ್ನು ವ್ಯೆಕ್ತ ಪಡಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಸಂಡೂರಿನ ಮುಖಂಡ ವಸಂತಕುಮಾರ, ಹಿರಿಯ ಮುಖಂಡ ಸೋಮಲಿಂಗನಗೌಡ, ಇನ್ನಿತರರು ಹಾಗೂ ಮಹಿಳಾ ಕಾರ್ಯಕತರ್ೆಯರು ಉಪಸ್ಥಿತರಿದ್ದರು. 

ಪೋಟೊ16ಬಿ.ಎಲ್.ಆರ್10 ಜೆಡಿಎಸ್ ಕಛೇರಿಗೆ ಬೇಟಿನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ, ಕಾಂಗ್ರೆಸ್ ಅಭ್ಯಾಥರ್ಿ ಬಿ.ಎಸ್.ಉಗ್ರಪ್ಪ ಮತ್ತಿತರರ ಚಿತ್ರ ಹಾಗೂ ಕಾರ್ಯಕರ್ತರೊಂದಿಗೆ ಮಾತನಾಡುತ್ತಿರುವ ಚಿತ್ರ.
 

ಸುದ್ದಿ ಓದಿ