ಬಳ್ಳಾರಿ: ಕಲ್ಯಾಣ ಕ್ರಾಂತಿ ಕಾಯಕ ಜೀವಿಯ ಶ್ರೇಯಸ್ಸಾಗಿದೆ: ಪ್ರಸನ್ನಗೌಡ

ಬಳ್ಳಾರಿ: ಕಲ್ಯಾಣ ಕ್ರಾಂತಿ ಕಾಯಕ ಜೀವಿಯ ಶ್ರೇಯಸ್ಸಾಗಿದೆ: ಪ್ರಸನ್ನಗೌಡ

ಬಳ್ಳಾರಿ 02: ಕೈಗಾರಿಕಾ ಕ್ರಾಂತಿ ಕಾಮರ್ಿಕ ಶೋಷಣೆಯಾದರೆ, ಕಲ್ಯಾಣ ಕ್ರಾಂತಿ ಕಾಯಕ ಜೀವಿಯ ಶ್ರೇಯಸ್ಸಾಗಿದೆ. 17-18ನೇ ಶತಮಾನದಲ್ಲಿ ಯುರೋಪ್ ರಾಷ್ಟ್ರದಲ್ಲಿ ಕೈಗಾರಿಕಾ ಕ್ರಾಂತಿ ತಲೆಯೆತ್ತಿದಾಗ ಕಾರ್ಮಿಕರ ಶೋಷಣೆಯಾಗಿ, ಬಂಡವಾಳಶಾಹಿಗಳ ಪ್ರಬಲ ಬೆಳವಣಿಗೆಗೆ ಕಾರಣವಾಯಿತು. 

12ನೇ ಶತಮಾನದ ಶರಣರ ಕಲ್ಯಾಣಕ್ರಾಂತಿಯು ಶ್ರಮ ಮತ್ತು ಶ್ರಮಜೀವಿಗಳ ಗೌರವ ತಂದು ಕೊಡುವುದರ ಜೊತೆಗೆ ಸಮಾಜದ ಶ್ರೀಮಂತಿಕೆಗೆ ಕಾರಣವಾಯಿತು ಎಂದು ತೋರಣಗಲ್ಲು ಜೆ.ಎಸ್.ಡಬ್ಲ್ಯೂ ಸ್ಟೀಲ್ಸ್ನ ನಿವೃತ್ತ ಹಿರಿಯ ವ್ಯವಸ್ಥಾಪಕರಾದ ಪ್ರಸನ್ನಗೌಡ ಪಾಟೀಲ್ರವರು ಅಭಿಪ್ರಾಯಪಟ್ಟರು. ಅವರು ಇಂದು ಸ್ಥಳೀಯ ಸಂಗಮ್ ಟಾಕೀಸ್ ಹತ್ತಿರದ ಸಿಟಿ ಪ್ರೆಸ್ ಕಾಂಪೋಂಡ್ನಲ್ಲಿರುವ ಶ್ರೀ ಗಣೇಶ್ ರೋಡ್ ಲೈನ್ಸ್ನಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕವು ಹಮ್ಮಿಕೊಂಡಿದ್ದ 229ನೇ ಮಹಾಮನೆ ಕಮಲಮ್ಮ ಡಾ.ಬಸವನಗೌಡ ದತ್ತಿ ಮತ್ತು ಡಾ.ಜೆ.ಎಂ.ವೀರಭದ್ರಪ್ಪ ಸರ್ವಮಂಗಳಮ್ಮ ದತ್ತಿ ನಿಮಿತ್ತ ಕಾಯಕ  ದಿನಾಚರಣೆ ದತ್ತಿ ಕಾರ್ಯಕ್ರಮದಲ್ಲಿ "ಶರಣರ ಕಾರ್ಮಿಕರ- ಕಾಯಕ ಪರಿಕಲ್ಪನೆ" ಎಂಬ ವಿಷಯ ಕುರಿತು ಮಾತನಾಡುತ್ತಾ, ವ್ಯಕ್ತಿ ಕೈಗೊಳ್ಳುವ ಕೆಲಸದಲ್ಲಿ ಮೇಲು ಕೀಳೆಂಬುದಿಲ್ಲ. ಪ್ರತಿ ಕಾಯಕವೂ ಶ್ರೇಷ್ಠವಾದುದೇ. ಕಾಯಕ ದೇವರ ಪೂಜೆಯಂತೆ ಎಂದು ಶ್ರಮವರ್ಗವನ್ನು ದೈವೀಕರಿಸಿದರು.  ಡಿಗ್ನಿಟಿ ಆಫ್ ಲೇಬರ್ ಎಂದರೆ, ಬಸವಣ್ಣನವರು ಡಿವಿನಿಟಿ ಆಫ್ ಲೇಬರ್ ಎಂಬಂತೆ ಕಾಯಕವೇ ಕೈಲಾಸವೆಂದು ಸಾರಿದರು ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ.ಡಿ.ಗಂಗಣ್ಣನವರು ಕಾಮರ್ಿಕನನ್ನು ಅಲಕ್ಷ್ಯ ಮಾಡಿ ಆಡಳಿತ ವರ್ಗ ಶ್ರೇಷ್ಠವಾದಾಗ ಕಾರಖಾನೆಗಳ ಅಧೋಗತಿ ಹೇಗಾಗುವುದು ಎಂಬುದನ್ನು ಹಗರಿಯ ಕ್ಯಾಲ್ಸಿಯಂ ಕಾಬರ್ೈಡ್ ಕಾರ್ಖಾನೆ, ಅಲ್ಲೀಪುರದ ಬಳಿ ಇದ್ದ ದಾರದ ಮಿಲ್ಲು, ಕಂಪ್ಲಿಯ ಸಕ್ಕರೆ ಕಾರ್ಖಾನೆಗಳು  ಹೇಳ ಹೆಸರಿಲ್ಲದಂತೆ ಆಗಿರುವುದೇ ಸಾಕ್ಷಿಯಾಗಿವೆ ಎಂದು ಹೇಳುತ್ತಾ ನಿಜವಾಗಿ ಕಾರ್ಮಿಕ ವರ್ಗವೇ ಮಾಲೀಕರ ಸಂಪತ್ತಿನ ಒಡೆಯರು ಎಂದು ನುಡಿದರು.ಅತಿಥಿಗಳಾಗಿ ರಂಗಕಮರ್ಿ, ರಂಗನಿದರ್ೇಶಕರಾದ ಆರ್.ವೀರನಗೌಡರು ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ಶ್ರಮಜೀವಿಗಳಿಗೆ ಕಾಯಕ ಸಮ್ಮಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿದ ಎಚ್.ಎಂ.ರಾಮೇಶ್ವರ, ಸವರ್ೇಶ್ವರ್ ಮತ್ತು ಡಿ.ಮಲ್ಲಿಕಾರ್ಜುನ  ಅವರು ಮಾತನಾಡುತ್ತಾ ತಾವು ಬಾಲ್ಯದಲ್ಲಿ ತಮ್ಮ ತಂದೆ ತಾಯಂದಿರು ಹೇಳಿಕೊಟ್ಟ ನೈತಿಕ ಆಚರಣೆಗಳು ನಮ್ಮ ಬದುಕಿನಲ್ಲಿ ಸಹಾಯಕವಾಗಿ ನಮ್ಮನ್ನು ಆದರ್ಶ ಕಾಮರ್ಿಕರೆಂದು ಗುರುತಿಸಲು ಕಾರಣವಾಗಿ ಇಂದು ಸನ್ಮಾನ ದೊರೆತಿರುವುದು ತಮ್ಮ ಹಿರಿಯರಿಗೆ ಸಲ್ಲಬೇಕೆಂದು ಹೇಳುತ್ತಾ ಪ್ರತಿಫಲಾಪೇಕ್ಷೆ ಇಲ್ಲದೆ ಕರ್ತವ್ಯವನ್ನು ಮಾಡಿದರೆ ಶ್ರೇಯಸ್ಸು ದೊರೆಯುವುದೆಂದು ತಮ್ಮ ಸಹಕಾರ್ಮಿಕರಿಗೆ  ಕಿವಿಮಾತು ಹೇಳಿದರು. 

ಸಂದರ್ಭದಲ್ಲಿ ಶ್ರೀಗಣೇಶ್ ರೋಡ್ಲೈನ್ಸ್ನ ಮಾತೃಸೇವಾ ಟ್ರಸ್ಟ್ವತಿಯಿಂದ ಸಮಾಜ ಸೇವೆಗಾಗಿ ಚನ್ನಬಸವನಗೌಡ ಆರ್, ಬಿ.ಆರ್.ಶ್ರೀನಿವಾಸ, ಕೆ.ನೀಲಕಂಠ, ಛಾಯಾಗ್ರಹಕ ಅಮರೇಶ್ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಪ್ರಾರ್ಥನೆಯನ್ನು ಶ್ರೀಶೈಲ ಸ್ವಾಮಿ ನೆರವೇರಿಸಿದರು. ಸ್ವಾಗತವನ್ನು ಕು.ಕಲಾವತಿ ಕೋರಿದರು. ಕಾರ್ಯಕ್ರಮದ ದತ್ತಿ ದಾನಿಗಳ ಪರಿಚಯ ಮಾಡಿ ಶರಣು ಸಮರ್ಪಣೆಯನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಬಿ.ಸಿದ್ದಲಿಂಗಪ್ಪ ಅವರು ನೆರವೇರಿಸಿದರು. ಸಭೆಯಲ್ಲಿ ಕುವೆಂಪು ನಗರದ ನಾಗರಿಕ ವೇದಿಕೆ ಅಧ್ಯಕ್ಷರಾದ ವಿ.ಬಿ.ಹಿರೇಮಠ್, ಉಪನ್ಯಾಸಕರಾದ ಡಾ.ಕೊಟ್ರೇಶ್, ಎಸ್.ಪಿ.ಹೊಂಬಳ್, ಗುಗ್ಗರಹಟ್ಟಿಯ ಪುರುಷೋತ್ತಮ ಹಾಗೂ ಕಾಮರ್ಿಕ ವರ್ಗದವರು ಹಾಜರಿದ್ದರು 

ಸುದ್ದಿ ಓದಿ