ಬಳ್ಳಾರಿ

ಬಳ್ಳಾರಿ: ಸಂತ್ರಸ್ತರಿಗೆ ರೂ.15.00 ಲಕ್ಷ ನೆರವು

ಬಳ್ಳಾರಿ: ಸಂತ್ರಸ್ತರಿಗೆ ರೂ.15.00 ಲಕ್ಷ ನೆರವು

ಲೋಕದರ್ಶನ ವರದಿ

ಬಳ್ಳಾರಿ 22: ಇತ್ತೀಚಿಗೆ ಕರ್ನಾಟಕದಲ್ಲಿ ಸಂಭವಿಸಿದ ಭಾರಿ ಮಳೆ ಹಾನಿಯಿಂದ ನಿರಾಶ್ರಿತಗೊಂಡ ಸಂತ್ರಸ್ತರ ನೆರವಿಗೆ ವೀರಶೈವ ವಿದ್ಯಾವರ್ಧಕ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ನೆರೆ ಸಂತ್ರಸ್ತರ ನೆರವಿಗಾಗಿ ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ. 15.00 ಲಕ್ಷಗಳ ಚೆಕ್ನ್ನು (ಹದಿನೈದು ಲಕ್ಷ ರೂಪಾಯಿಗಳು) ದೇಣಿಗೆಯಾಗಿ ಅಪರ್ಿಸಲಾಯಿತು.

     ಸಂಘದ ಅಧ್ಯಕ್ಷ ಉಡೇದ ಬಸವರಾಜ, ಕಾರ್ಯದಶರ್ಿ ಚೋರನೂರು ಟಿ.ಕೊಟ್ರಪ್ಪ, ಕೋಶಾಧಿಕಾರಿ ಕೋಳೂರು ಮಲ್ಲಿಕಾರ್ಜುನಗೌಡ ಹಾಗೂ ಕಾರ್ಯಕಾರಿ ಸಮಿತಿಯ ಹಿರಿಯ ಸದಸ್ಯ ಕಣ್ಣಿ ರಾಜಶೇಖರ, ಸಾಹುಕಾರ ಸತೀಶಬಾಬು, ಜೆ.ಎಸ್.ಬಸವರಾಜ್ ಹಾಗೂ ಹಚ್ಚೊಳ್ಳಿ ಶರಣನಗೌಡ ಮುಂತಾದವರು ಉಪಸ್ಥಿತರಿದ್ದರು.


ಸುದ್ದಿ ಓದಿ