ಬಳ್ಳಾರಿ: ದ್ವಿತಿಯ ಪಿ.ಯು ಫಲಿತಾಂಶ ವಾಣಿಜ್ಯ ವಿಭಾಗ ಜಿಲ್ಲೆಗೆ ಪ್ರಥಮಸ್ಥಾನ ಗಳಿಸಿದ ಚೈತನ್ಯ ವಿದ್ಯಾಸಂಸ್ಥೆ
ಬಳ್ಳಾರಿ 15: ನಗರದ ಪ್ರತೀಷ್ಟಿತ ವಿದ್ಯಾಸಂಸ್ಥೆಯಲ್ಲಿ ಒಂದಾದ ಶ್ರೀ ಚೈತನ್ಯ ಪದವಿ ಪೂರ್ವ ಕಾಲೇಜಿನಲ್ಲಿ 2018-19ನೇ ಸಾಲಿನ ದ್ವಿತಿಯ ಪಿ.ಯು.ಸಿ ಪರೀಕ್ಷೆ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳು ನಿರೀಕ್ಷೆಯಂತೆ ಉತ್ತಮ ಅಂಕಗಳನ್ನು ಪಡೆದುಕೊಂಡು ಶ್ರೀ ಚೈತನ್ಯ ವಿದ್ಯಾಸಂಸ್ಥೆಯ ಕೀರ್ತಿಯ ಪತಾಕಿ ಹಾರಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಕಾಲೇಜಿನ ವಿದ್ಯಾರ್ಥಿಯಾದ ಕುಮಾರಿ ಪಿ.ಅನುಪಲ್ಲವಿ, 600 ಅಂಕಗಳಿಗೆ 585 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮಸ್ಥಾನ ಪಡೆದವಿದ್ಯಾರ್ಥಿನಿಯಾಗಿದ್ದಾರೆ. ಒಟ್ಟು ಕಾಲೇಜಿಗೆ 163 ಡಿಸ್ಟಿಂಕ್ಷನ್ 589 ಪ್ರಥಮ ಮತ್ತು 118 ದ್ವಿತಿಯ ದರ್ಜೆಯನ್ನು ಹೊಂದಿದ್ದಾರೆ. ಕುಮಾರಿ ಬಿ.ಬಾರ್ಗವಿ 579, ಎಸ್.ವೈಷ್ಣವಿ 575, ಕೆ.ತರುಣ್ 574, ದೀಪಿಕಾ 570, ವಿಜ್ಞಾನ ವಿಭಾಗದಲ್ಲಿ ಕುಮಾರಿ ನಿಲಿಮಾಶ್ರೀ 569 ಅಂಕಗಳು, ಮಹೇಶ್ ಕುಮಾರ ಟಿ 568, ರೋಜಾ ಕೆ.ಎಸ್ 568, ಸೌಭಾಗ್ಯ 567, ಸಿ.ಎನ್.ಅಂಜುಮ್ 567, ಹೀಗೆ ಹಲವಾರು ವಿದ್ಯಾರ್ಥಿ ವಿದ್ಯಾಥಿನೀಯರು ಉತ್ತಮ ಪಲಿತಾಂಶವನ್ನು ಸಾದಿಸಿದ್ದು ಈ ಎಲ್ಲಾ ವಿದ್ಯಾರ್ಥಿಗಳಿಗೆ ಪಲಿತಾಂಶವನ್ನು ಸಾದಿಸಲು ಸ್ಪೂತರ್ಿ ನೀಡಿದ ಪೋಷಕರಿಗೆ, ಕಾಲೇಜಿನ ಎಲ್ಲಾ ಸಿಬ್ಬಂದಿವರ್ಗದವರಿಗೆ ಶ್ರೀ ಚೈತನ್ಯ ಕಾಲೇಜಿನ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದ್ದಾರೆ.