ಬಳ್ಳಾರಿ: ವಿದ್ಯಾರ್ಥಿನಿ ಮಧು ಸಾವು ಕ್ರಮಕ್ಕೆ ಆಗ್ರಹಿಸಿ ಬ್ರಹತ್ ಪ್ರತಿಭಟನೆ

ಬಳ್ಳಾರಿ: ವಿದ್ಯಾರ್ಥಿನಿ ಮಧು  ಸಾವು ಕ್ರಮಕ್ಕೆ ಆಗ್ರಹಿಸಿ ಬ್ರಹತ್  ಪ್ರತಿಭಟನೆ

ಬಳ್ಳಾರಿ 25: ರಾಯಚೂರಿನ ನವೋದಯ ಇಂಜನೀಯರಿಂಗ್ ಕಾಲೇಜಿನ ವಿದ್ಯಾರ್ಥಿನಿ  ಮಧು ಪತ್ತಾರ್ ಅವರ ಸಾವಿ ಪ್ರಕರಣದ ಬಗ್ಗೆ ರಾಜ್ಯ ಸರ್ಕಾರವು ತನಿಖೆ ನಡೆಸಬೇಕು.  ಸಾವಿಗೆ ಕಾರಣ ಆದವರನ್ನು ಬಂಧಿಸಿ ಕಠಿಣ ಶಿಕ್ಷಗೆ ಒಳಪಡಿಸಬೇಕೆಂದು ಆಗ್ರಹಿಸಿ ಬಳ್ಳಾರಿ ವಿಶ್ವಕರ್ಮ ವಿಕಾಸ ವೇದಿಕೆ, ಎ.ಬಿ.ವಿ.ಪಿ, ಎ.ಐ.ಡಿ.ಎಸ್.ಒ ಮತ್ತು ಹಲವಾರು ಕನ್ನಡಪರ ಸಂಘಟನೆಗಳು ಗುರುವಾರ ಕಾಳಮ್ಮ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಿಂದ ಜಿಲ್ಲಾಧಿಕಾರಿಗಳ ಕಛೇರಿಯವರಗೆ ನೂರಾರು ಜನ ವಿದ್ಯಾರ್ಥಿಗಳು ಮತ್ತು ಯುವಕರು ಭೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. 

ನಂತರ ಜಿಲ್ಲಾಧಿಕಾರಿಗಳ ಕಛೇರಿಗೆ ಆಗಮಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸಕಾರಕ್ಕೆ ಮನವಿ ಪತ್ರ ನೀಡಲಾಯಿತು. ಪ್ರತಿಭಟನಾ ಮೆರವಣಿಗೆಯಲ್ಲಿ ಜಸ್ಟೀಸ್ ಫಾರ್ ಮಧು, ಬೇಕೇ ಬೇಕು ನ್ಯಾಯ ಬಾಕು ಎನ್ನುವ ಘೋಷಣೆಯನ್ನು ಕೂಗಿದರು.  

ಈ ಪ್ರತಿಭಟನೆಯಲ್ಲಿ ವಿವಿಧ  ಸಂಘಗಳ ಸದಸ್ಯರುಗಳು, ವಿದ್ಯಾರ್ಥಿನಿಯರು, ಯುವಕರು ಬಾಗಿಯಾಗಿದ್ದರು.


ಸುದ್ದಿ ಓದಿ