ಬೆಳಗಾವಿ

ಸಪ್ಟಂಬರ್ 15 ರಂದು ಬಳೋಬಾಳ ಪಿಕೆಪಿಎಸ್ ಮಹಾಸಭೆ

ಸಪ್ಟಂಬರ್ 15 ರಂದು ಬಳೋಬಾಳ ಪಿಕೆಪಿಎಸ್ ಮಹಾಸಭೆ

ಲೋಕದರ್ಶನ ವರದಿ 

ಗೋಕಾಕ 01 : ತಾಲೂಕಿನ ಬಳೋಬಾಳ - ಬೀರನಗಡ್ಡಿ ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಮಹಾ ಸಭೆಯು 2026 ಸಪ್ಟಂಬರ್ 15 ರಂದು ಮುಂಜಾನೆ 11:30 ಗಂಟೆಗೆ ಬಳೋಬಾಳ ಗ್ರಾಮದ ಲಕ್ಷ್ಮೀದೇವಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ ಬೆಳವಿ ಅವರು ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂಘದ ಅಧ್ಯಕ್ಷರಾದ ಲಗಮವ್ವ  ಭರಮಣ್ಣವರ ಹಾಗೂ ಉಪಾಧ್ಯಕ್ಷರಾದ ಮಾರುತಿ ಹರಿಜನ ಇವರ ಮುಂದಾಳತ್ವದಲ್ಲಿ ವಾರ್ಷಿಕ ಸಭೆಯು ನಡೆಯಲಿದ್ದು. ಸಭೆಯಲ್ಲಿ ಹಿಂದಿನ ಸಾಮಾನ್ಯ ಸಭೆಯ ನಡಾವಳಿ ದೃಢೀಕರಿಸುವುದು, ವರ್ಷದ ವಾರ್ಷಿಕ ವರದಿಯನ್ನು ಪರಿಗಣನೆ ತೆಗೆದುಕೊಳ್ಳುವುದು,  ಮುಂದಿನ ವರ್ಷದ ಅಂದಾಜು ಪತ್ರಿಕೆಯ ಅನುಮೋದನೆ ಸೇರಿದಂತೆ  ಸಂಸ್ಥೆಯ ಬೆಳವಣಿಗೆ ಕುರಿತು ಸುಧೀರ್ಘವಾಗಿ ಚರ್ಚಿಸಲಾಗುತ್ತದೆ. ಈ ವಾರ್ಷಿಕ ಸಭೆಯಲ್ಲಿ ಅಧಿಕೃತ ವಿಷಯಗಳ ಹೊರತಾಗಿ ಬೇರೆ ವಿಷಯ ಚರ್ಚಿಸುವುದಿದ್ದಲ್ಲಿ ಸದಸ್ಯರು ವಾರ್ಷಿಕ ಸಭೆಯ ದಿನಾಂಕದ ಐದು ದಿವಸ ಮುಂಚಿತವಾಗಿ ಸಂಘದ ಮುಖ್ಯ ಕಾರ್ಯನಿರ್ವಕರ ಹತ್ತಿರ ಲಿಖಿತ ಪತ್ರ ಸಲ್ಲಿಸಬೇಕೆಂದು  ಅವರು ಮನವಿ ಮಾಡಿದ್ದಾರೆ. 


ಸುದ್ದಿ ಓದಿ