ಬಲಕುಂದಿ:ಸಂಗೀತ ಸೌರಭ ಕಾರ್ಯಕ್ರಮ
ಸಿರುಗುಪ್ಪ: ದೇಶದಲ್ಲಿ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಕಲೆಗಳಿಗೆ ಮಹತ್ವವಿದೆ ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಾಲೂಕ ಪಂಚಾಯತ್ ಮಾಜಿ ಸದಸ್ಯ ಕೋರಿ ಪಿಡ್ಡಯ್ಯ ಹೇಳಿದರು ತಾಲೂಕಿನ ಬಲಕುಂದಿ ಗ್ರಾಮದ ಬನ್ನಿ ಮಹಾಂಕಾಳಿ ದೇವಸ್ಥಾನದ ಆವರಣದಲ್ಲಿ ಸಿರುಗುಪ್ಪ ನೇತ್ರ ಕಲಾಸಂಘ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ವಿಶೇಷ ಘಟಕ ಯೋಜನೆ ಅಡಿ ಸಂಗೀತ ಸೌರಭ ಆಯೋಜಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ ಸಂಗೀತಕ್ಕೆ ರೋಗ ಕಡಿಮೆ ಮಾಡುವ ಶಕ್ತಿ ಹೊಂದಿದೆ ವೈಜ್ಞಾನಿಕವಾಗಿಯೂ ಸಾಬೀತಾಗಿದೆ ಬಲಕುಂದಿಯಲ್ಲಿ ನೆಲೆಸಿರುವ ಬನ್ನಿ ಮಹಾಂಕಾಳಿ ಕ್ಷೇತ್ರಕ್ಕೆ ಪಾಂಡವರು ಬಂದು ದೇವಸ್ಥಾನದ ಮುಂದೆ ಇರುವ ಬನ್ನಿ ಗಿಡದಲ್ಲಿ ತಮ್ಮ ಅಸ್ತ್ರಗಳನ್ನು ಅಡಗಿಸಿ ಇಟ್ಟಿದ್ದರು ಎನ್ನುವ ಇತಿಹಾಸ ಇದೆ ಇಂತಹ ದೇವಸ್ಥಾನದಲ್ಲಿ ಪ್ರತಿ ತಿಂಗಳು ಸಂಗೀತ ಕಾರ್ಯಕ್ರಮಗಳು ಜರುಗಬೇಕು ಎಂದು ಹೇಳಿದರು. ಸಂಗನ ಕಲ್ಲು ಉಷಾ ಜಾನಪದ ಸಂಗೀತ ದೊಡ್ಡ ಹುಸೇನಪ್ಪ ಸುಗಮ ಸಂಗೀತ ಕುಮಾರಿ ಕೆ ಪ್ರಜ್ಞ ವೀಣಾ ವಾದನ ದಳವಾಯಿ ಅಂಬಣ್ಣ ವಚನ ಗಾಯನ ಕುಮಾರಿ ಮನಸ್ವಿ ಮತ್ತು ತಂಡ ಕುಚಪುಡಿ ನೃತ್ಯ ಎಂ ಚನ್ನಬಸವಯ್ಯ ದಾಸವಾಣಿ ಎಂ ಹರ್ಷತ್ ಕುಮಾರ್ ತಬಲ ಸೋಲೋ ಕಾರ್ಯಕ್ರಮಗಳು ನಡೆದವು ನೇತ್ರಕಲಾ ಸಂಘದ ತಾಲೂಕು ಅಧ್ಯಕ್ಷ ವೀರೇಶ ದಳವಾಯಿ ಮಾತನಾಡಿದರು ಗ್ರಾಮ ಪಂಚಾಯತ್ ಸದಸ್ಯರಾದ ವಿಕೆ ರಾಜಶೇಖರಗೌಡ, ಬಲಕುಂದ್ಯಪ್ಪ ಟಿಆರ್ ಮಲ್ಲಯ್ಯ, ಗಂಗಮ್ಮ, ಕುಚುಪುಡಿ ಕಲಾವಿದ ಬಸವರಾಜ, ಆರ್ಚಕ ದೊಡ್ಡನಗೌಡ, ವಿವಿಧ ಗ್ರಾಮಸ್ಥರು ಭಾಗವಹಿಸಿದ್ದರು.