ರಾಷ್ಟ್ರೀಯ

ಬೂಟಾ ಸಿಂಗ್ ನಿಧನಕ್ಕೆ ರಾಷ್ಟ್ರಪತಿ - ಪ್ರಧಾನಿ ಕಂಬನಿ

ಬೂಟಾ ಸಿಂಗ್ ನಿಧನಕ್ಕೆ ರಾಷ್ಟ್ರಪತಿ -  ಪ್ರಧಾನಿ ಕಂಬನಿ

ನವದೆಹಲಿ, ಜನವರಿ 2:  ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ  ಬೂಟಾ ಸಿಂಗ್ ಅವರ ನಿಧನಕ್ಕೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಮಾಜಿ ಪ್ರಧಾನಿ ಇಂದಿರಾಗಾಂಧಿ, ರಾಜೀವ್ ಗಾಂಧಿ ಮತ್ತು ಪಿ ವಿ ನರಸಿಂಹ ರಾವ್ ಅವರ ಸಂಪುಟದಲ್ಲಿ ಹಲವು  ವಿವಿಧ ಖಾತೆಗಳನ್ನು ನಿರ್ವಹಿಸಿದ್ದ   ಹಿರಿಯ ಕಾಂಗ್ರೆಸ್ ಮುಖಂಡ  ಬೂಟಾ ಸಿಂಗ್ ಅವರು ಶನಿವಾರ ಬೆಳಿಗ್ಗೆ ಏಮ್ಸ್ ನಲ್ಲಿ ನಿಧನರಾಗಿದ್ದಾರೆ. ಆಡಳಿತಾತ್ಮಕ ಅನುಭವ ಹೊಂದಿದ್ದ ಮುಖಂಡನೊಬ್ಬನ್ನು  ದೇಶ ಕಳೆದುಕೊಂಡಿದೆ ಎಂದು ರಾಷ್ಟ್ರಪತಿ ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ. ಅವರು ತುಳಿತಕ್ಕೊಳಗಾದವರ ಪರವಾಗಿ ನಿಂತವರು  ಅವರ ಅಗಲಿಕೆ ನೋವಿನಲ್ಲಿ  ದೇಶಭಾಗಿಯಾಗಿದೆ ಎಂದು ಹೇಳಿದರು. ಪ್ರಧಾನಿ ಮೋದಿ ಟ್ವೀಟ್ ಮೂಲಕ  ಸಂತಾಪ ಸೂಚಿಸಿ, ಬೂಟಾ ಸಿಂಗ್ ಅವರನ್ನು ಅನುಭವಿ , ದಕ್ಷ ಆಡಳಿತಗಾರ,  ಬಡ ಮತ್ತು ದೀನ ದಲಿತರ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನ್ ನಾಯಕ  ಎಂದೂ ಸಂದೇಶದಲ್ಲಿ  ಬಣ್ಣಿಸಿದ್ದಾರೆ.  ಅವರು 1986-1989ರವರೆಗೆ ಕೇಂದ್ರ ಗೃಹ ಸಚಿವರಾಗಿ,  ಇದಕ್ಕೂ ಮೊದಲು 1984-1986ರವರೆಗೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿ, ಜೊತೆಗೆ ಕೆಲ ಕಾಲ ಬಿಹಾರ ರಾಜ್ಯಪಾಲರಾಗಿದ್ದರು,  ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.  



ಸುದ್ದಿ ಓದಿ