ರಾಷ್ಟ್ರೀಯ

ಕೇಂದ್ರ ಸರ್ಕಾರಿ ನೌಕರರಿಗೆ ಹಬ್ಬದ ಬೋನಸ್; ಸಂಪುಟ ಅನುಮೋದನೆ

ಕೇಂದ್ರ ಸರ್ಕಾರಿ ನೌಕರರಿಗೆ ಹಬ್ಬದ ಬೋನಸ್; ಸಂಪುಟ ಅನುಮೋದನೆ

ನವದೆಹಲಿ, ಅ 21 : ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ  ಬೋನಸ್ ನೀಡಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಬೋನಸ್ ನೀಡಲು ಸಾಧ್ಯವಾಗುವಂತೆ     3,737 ಕೋಟಿ ರೂ.ಗಳನ್ನು ತಕ್ಷಣ ಬಿಡುಗಡೆ ಮಾಡಲು ನಿರ್ಧರಿಸಿದೆ.  ಸಂಪುಟ ನಿರ್ಧಾರದಿಂದ    30 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರಿಗೆ ಪ್ರಯೋಜನವಾಗಲಿದೆ.  ಕೇಂದ್ರ ಸರ್ಕಾರಿ ನೌಕರರಿಗೆ ಬೋನಸ್ ನೀಡುವ ಮೂಲಕ ಹಬ್ಬದ ಋುತುವಿನಲ್ಲಿ    ಬೇಡಿಕೆ ಹೆಚ್ಚಲಿದೆ  ಎಂದು ಸರ್ಕಾರ  ಭಾವಿಸಿದೆ.

ದಸರಾ  ಹಬ್ಬದೊಳಗೆ   ಒಂದೇ ಕಂತಿನಲ್ಲಿ ನೌಕರರ ಖಾತೆಗಳಿಗೆ  ಬೋನಸ್ ಜಮಾ ಮಾಡಲಾಗುವುದು  ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಸಂಪುಟ ಸಭೆಯ ನಂತರ ಮಾಧ್ಯಮಗಳಿಗೆ ತಿಳಿಸಿದರು. 

ಸರ್ಕಾರದ ನಿರ್ಧಾರದಿಂದ  ರೈಲ್ವೆ, ಅಂಚೆ ಕಛೇರಿಗಳು, ಇ ಪಿ ಎಫ್‌ ಒ, ಇಎಸ್‌ಐಸಿ ಮತ್ತಿತರ ಸಾರ್ವಜನಿಕ ವಲಯದ ಸಂಸ್ಥೆಗಳ   17 ಲಕ್ಷ  ನಾನ್ ಗೆಜೆಟೆಡ್  ಸಿಬ್ಬಂದಿ ಹಾಗೂ  13 ಲಕ್ಷ ಸರ್ಕಾರಿ ನೌಕರರು ಉತ್ಪಾದಕತೆಗೆ ಸಂಬಂಧವಿಲ್ಲದ ಬೋನಸ್‌ಗಳನ್ನು ಪಡೆಯಲಿದ್ದಾರೆ.  ಮತ್ತೊಂದೆಡೆ, ದುರ್ಗಾ ಪೂಜೆಗೆ  ಮುನ್ನ   ಸಾಮರ್ಥ್ಯ ಆಧಾರಿತ ಬೋನಸ್ ಬಿಡುಗಡೆಮಾಡದಿದ್ದರೆ   ಬೃಹತ್    ಪ್ರತಿಭಟನೆ ನಡೆಸಲಾಗುವುದು ಎಂದು  ಎರಡು ಪ್ರಮುಖ ರೈಲ್ವೆ ಉದ್ಯೋಗ ಮತ್ತು ಕಾರ್ಮಿಕ ಸಂಘಗಳು ಎಚ್ಚರಿಕೆ ನೀಡಿದ್ದವು.


ಸುದ್ದಿ ಓದಿ