ಮಕ್ಕಳಲ್ಲಿ ದಾಸ ಸಾಹಿತ್ಯದ ಬಗ್ಗೆ ಜಾಗೃತಿ ಮೂಡಿಸಿ: ಡಾ.ಮಾನಕರಿ ಶ್ರೀನಿವಾಸಾಚಾರ್ಯ
ಬಳ್ಳಾರಿ 10: ಪ್ರಸ್ತುತ ಮಕ್ಕಳಲ್ಲಿ ದಾಸಸಾಹಿತ್ಯ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಪ್ರತಿಯೊಬ್ಬರು ಮುಂದಾಗುವ ಅಗತ್ಯವಿದೆ ಎಂದು ಕನ್ನಡ ಪ್ರಾಧ್ಯಾಪಕ ಡಾ.ಮಾನಕರಿ ಶ್ರೀನಿವಾಸಾಚಾರ್ಯ ತಿಳಿಸಿದರು. ನಗರದ ತೇರುಬೀದಿ ಶ್ರೀರಾಯರ ಮಠದ ಆವರಣದಲ್ಲಿ ಮಂತ್ರಾಲಯ ಶ್ರೀಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್ ಸಹಯೋಗದಲ್ಲಿ ತೇರುಬೀದಿ ಶ್ರೀಗುರುರಾಜ ಸೇವಾ ಮಂಡಳಿ ವತಿಯಿಂದ ಶ್ರೀವಿಜಯರಾಯರಿಗೆ ನಮೋ ನಮೋ ಶತಕಂಠ ಗಾಯನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಹರಿದಾಸರ ಪರಂಪರೆ ದೊಡ್ಡದಿದೆ. ಆ ಪೈಕಿ ಕೆಲವೇ ಕೆಲವು ಹರಿದಾಸರ ಹೆಸರುಗಳು ಮಾತ್ರ ಪ್ರಸ್ತುತ ಅರಿಯಲಾಗಿದೆ. ಆದರೆ ವಾಸ್ತವದಲ್ಲಿ ನೂರಾರು ಹರಿದಾಸರು ದಾಸಸಾಹಿತ್ಯಕ್ಕೆ ಹಾಗೂ ಕನ್ನಡ ಸಾಹಿತ್ಯ ಲೋಕಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಆ ಪೈಕಿ ಪ್ರಮುಖವಾಗಿ ಶ್ರೀಪುರಂದರದಾಸರು, ಶ್ರೀಕನಕದಾಸರು, ಶ್ರೀವಿಜಯದಾಸರು, ಶ್ರೀಗೋಪಾಲದಾಸರು, ಶ್ರೀಜಗನ್ನಾಥದಾಸರು ಸೇರಿದಂತೆ ಪ್ರಸ್ತುತ ಸಂದರ್ಭದಲ್ಲಿಯೂ ಹಲವು ಹರಿದಾಸ ಚಿಂತಕರು ಎಲೆಮರೆಕಾಯಿಯಂತೆ ದಾಸಸಾಹಿತ್ಯಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ಮಂತ್ರಾಲಯ ದಾಸಸಾಹಿತ್ಯ ಪ್ರಾಜೆಕ್ಟ್ ದಾಸಸಾಹಿತ್ಯ ಹಾಗೂ ಕನರ್ಾಟಕ ಸಂಗೀತಪೀತಾಮಹಾರಾದ ಶ್ರೀಪುರಂದರ ದಾಸರ ಆರಾಧನೆಯನ್ನು ಹಂಪಿಯ ಪುರಂದಪರ ಮಂಟಪದಲ್ಲಿ ಅರ್ಥಪೂರ್ಣವಾಗಿ ಮೂರು ದಿನಗಳ ಕಾಲ ಆಚರಿಸುವಂತಾಗಬೇಕು, ಇದಕ್ಕೆ ಪ್ರತಿಯೊಬ್ಬರು ಅಗತ್ಯ ಸಹಕಾರ ನೀಡಬೇಕು ಎಂದು ಮನವಿಮಾಡಿದರು.
ಮಂತ್ರಾಲಯ ಶ್ರೀಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್ ಜಿಲ್ಲಾ ಕೋ-ಆಡರ್ಿನೇಟರ್ ಅನಂತ ಪದ್ಮನಾಭ ರಾವ್ ಮಾತನಾಡಿ, ಮಂತ್ರಾಲಯ ಪೀಠಾಧೀಶರಾದ ಶ್ರೀಸುಬುಧೇಂದ್ರ ತೀರ್ಥ ಸ್ವಾಮಿಗಳು ದಾಸಸಾಹಿತ್ಯ ಬಗ್ಗೆ ಅಪಾರ ಕಳಕಳಿ, ವಿಶೇಷ ಕಾಳಜಿಹೊಂದಿದ್ದಾರೆ. ದಾಸಸಾಹಿತ್ಯ ಪುನಶ್ಚೇತನ, ಪುನರ್ಥೋನಕ್ಕೆ ಹಲವಾರು ಮಹತ್ವದ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಬರುವ ದಿನಗಳಲ್ಲಿ ಹಂಪಿಯ ಪುರಂದರ ಮಂಟಪದಲ್ಲಿಯೇ ಶ್ರೀಪುರಂದರ ದಾಸರ ಆರಾಧನೆ ಅರ್ಥಪೂರ್ಣ ಆಚರಿಸಲು ಪ್ರಾಜೆಕ್ಟ್ವತಿಯಿಂದ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು. ಶ್ರೀಗುರುರಾಜ ಸೇವಾ ಮಂಡಳಿ ಅಧ್ಯಕ್ಷ ಕರಣಂ ನಾಗರಾಜ ರಾವ್, ಪದಾಧಿಕಾರಿಗಳಾದ ರಾಘವೇಂದ್ರ ಮೋಹನ್, ಸತೀಶ್ ದೇಸಾಯಿ, ಪ್ರಮೋದ ಬಾದನಟ್ಟಿ, ಪ್ರಸನ್ನಬಾದನಟ್ಟಿ, ಶ್ರೀಮಠದ ವ್ಯವಸ್ಥಾಪಕ ಸಾಮವೇದ ಗುರುರಾಜಾಚಾರ್ಯ ಮುಂತಾದವರು ಇದ್ದರು, ಕಲಾವಿದೆ ಸಂಗೀತ ರಾಜಲಕ್ಷ್ಮೀ ಶತಕಂಠ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕಿ ಹಾಗೂ ಮಂಡಳಿ ಸದಸ್ಯೆ ವಸುಧಾ ಧಾರವಾರಕರ್ ನಿರ್ವಹಿಸಿದರು.