ಬಳ್ಳಾರಿ

ಕಲೆ, ನಾಟಕಗಳು ಮಾನವನ ಮಾನಸಿಕ ಒತ್ತಡವನ್ನ ನೀಗಿಸಬಲ್ಲವು

ಕಲೆ, ನಾಟಕಗಳು ಮಾನವನ ಮಾನಸಿಕ ಒತ್ತಡವನ್ನ ನೀಗಿಸಬಲ್ಲವು

ಬಳ್ಳಾರಿ : ನೊಂದ ಮನಸುಗಳಿಗೆ ಕೊಂಚ ಮಟ್ಟಿಗೆ ಸಮಾಧಾನ ನೀಡುವಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು  ಬಿಷಪ್ ಹೆನ್ರಿ ಡಿಸೋಜಾ ಧರ್ಮಧ್ಯಕ್ಷರು ಕ್ರೈಸ್ತ ಧರ್ಮ ಪ್ರಾಂತ್ಯ ಬಳ್ಳಾರಿ ಅವರು  ಅಭಿಪ್ರಾಯಪಟ್ಟರು.

ನಗರದ ಬಸವ ಭವನ ಆವರಣದಲ್ಲಿ ಮೂನ್ ವಾಕರ್ಸ್  ಸಾಂಸ್ಕೃತಿಕ ಸಂಘದ ವತಿಯಿಂದ ಇತ್ತೀಚೆಗೆ ನಡೆದ ಸಾಂಸ್ಕೃತಿಕ ನೃತ್ಯೋತ್ಸವ ಸಂಭ್ರಮ ಕಾರ್ಯಕ್ರಮವನ್ನ  ಉದ್ಘಾಟಿಸಿ ಅವರು ಮಾತನಾಡಿದರು,   ಕಲೆ, ನಾಟಕಗಳು ಮಾನವನ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ಉಲ್ಲಾಸ, ಆನಂದವನ್ನು ತುಂಬುತ್ತದೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಮಾಜಿಕವಾಗಿ ಒಗ್ಗಟ್ಟು ಪ್ರದರ್ಶಿಲು ಪೂರಕವಾಗಲಿದೆ ಎಂದರು.ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ನಾರಾ ಶರತ್ ರೆಡ್ಡಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮುಂಡರಗಿ ನಾಗರಾಜ್ ಹಾಗೂ ಮಹಾನಗರ ಪಾಲಿಕೆ ಸದಸ್ಯರಾದ ವಿ.ಕುಬೇರ , ಶ್ರೀನಿವಾಸುಲು ಮಿಂಚು ,ಹಾಗೂ ಹನುಮಂತ ಗುಡಿಗುಂಟಿ ಮತ್ತು ಸೀನಿಯರ್ ಕೋರಿಯೋಗ್ರಾಪರ್ ಸತೀಶ್, ಅಲುವೇಲು ಸುರೇಶ್ ಸೂರ್ಯ ಕಲಾ ಟ್ರಸ್ಟ್ ಅಧ್ಯಕ್ಷರು, ಸುಭಾಷ್ ಮತ್ತು  ನಿಜಲಿಂಗಸ್ವಾಮಿ ಬಳ್ಳಾರಿ ನೆರೆದಿದ್ದರು.ನಂತರ ದೊಡ್ಡ ಬಸವಗವಾಯಿಗಳು ಸಂಗೀತ ಕಲಾ ತಂಡ ಇವರಿಂದ ಪ್ರಾರ್ಥನೆ ಗೀತೆ ಮತ್ತು ಭಾವಗೀತೆ ನಡೆಸಿಕೊಟ್ಟರು ವೇದಿಕೆ ಕಾರ್ಯಕ್ರಮಗಳು ಭರತನಾಟ್ಯ ಹೇಮಕಲಾ ತಂಡದವರಿಂದ ಭರತನಾಟ್ಯ,ಅಜಿತ್ ಕಲಾ ತಂಡದಿಂದ ಯಕ್ಷಗಾನ, ವಿಜಯ ಕಲಾ ತಂಡದಿಂದ ಪ್ರತ್ಯಂಗಿರಾ ದೇವಿ ನರ್ತನ  ಜಯಣ್ಣ ಕಲಾ ತಂಡದಿಂದ ರಾಮಾಯಣ ನಾಟಕ ನೃತ್ಯ, ನೀರಜ್ ಕಲಾ ತಂಡದಿಂದ  ಕೋಲಾಟ, ಬಬ್ಲು ಕಲಾ ತಂಡದಿಂದ ದೇಶಭಕ್ತಿ ಗೀತೆ ನೃತ್ಯ,ಶ್ರೀನಿಧಿ ಕಲಾ ತಂಡದಿಂದ ರಸಮಂಜರಿ ಕಾರ್ಯಕ್ರಮ,ಕುಸುಮ ಕಲಾ ತಂಡದಿಂದ ಜಾನಪದ ನೃತ್ಯ, ಮಣಿಕಂಠ ಕಲಾ ತಂಡದಿಂದ ಸೀತಾಪ ಹರಣ ನಾಟಕ,ಪ್ರದರ್ಶನಗಳನ್ನು ನೆರವೇರಿಸಿದರು. ಈ ಕಾರ್ಯಕ್ರಮಕ್ಕೆ ಕಲಾವಿದರು,ಅಭಿಮಾನಿಗಳು, ಸಾರ್ವಜನಿಕರು,ಉಪಸ್ಥಿತರಿದ್ದರು 

ಸುದ್ದಿ ಓದಿ