ವಿದ್ಯಾರ್ಥಿ/ವಿದ್ಯಾರ್ಥಿನಿಯರ ವಸತಿ ನಿಲಯಗಳಿಗೆ ಅರ್ಜಿ ಆಹ್ವಾನ.
ಸವದತ್ತಿ : ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 04 ಮೆಟ್ರಿಕ ನಂತರದ ನಿಲಯಗಳಿಗೆ *ಮೆ,ನಂತರದ,ಬಾಲಕರ ನಿಲಯ ಸವದತ್ತಿ *ಮೆಟ್ರಿಕ ನಂತರದ ಬಾಲಕರ ನಿಲಯ ಇಂಚಲ * ಮೆಟ್ರಿಕ ನಂತರದ ಬಾಲಕಿಯರ ನಿಲಯ ಸವದತ್ತಿ * ಮೆಟ್ರಿಕ ನಂತರದ ಬಾಲಕಿಯರ ನಿಲಯ ಮುನವಳ್ಳಿ 2023-24ನೇ ಸಾಲಿಗೆ ಪ್ರವೇಶ ಕೋರಿ ಸವದತ್ತಿ ತಾಲೂಕಿನಲ್ಲಿರುವ ಮೆಟ್ರಿಕ ನಂತರದ ವಿವಿಧ ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 2ಬಿ, 3ಎ, 3ಬಿ ಹಾಗೂ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಂದ ಹೊಸದಾಗಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ. ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯಮಿತಿ ಪ್ರವರ್ಗ-1 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ರೂ.2.50 ಲಕ್ಷ ಹಾಗೂ ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿ- ರೂ.1.00 ವಿಕ್ಷ ಒಳಗಿರಬೇಕು. ವಿದ್ಯಾರ್ಥಿಗಳು ಆನ್ಲೈನ್ ಮೂಲಕದಿನಾಂಕ:15/07/2023 ರೊಳಗಾಗಿ https://shp.karnataka.sov.in ವೆಬ್ಸೈಟನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಸಂಬಂಧಿಸಿದ ದಾಖಲಾತಿಗಳನ್ನು ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳವರ ಕಛೇರಿ ಅಥವಾ ಸಂಬಂಧಿಸಿದ ನಿಲಯಗಳ ನಿಲಯ ಮೇಲ್ವಿಚಾರಕರಿಗೆ ತಲುಪಿಸುವುದು. ಹೆಚ್ಚಿನ ವಿವರಗಳಿಗೆ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳವರ ಕಛೇರಿ ಸವದತ್ತಿ ಸೌಗಂಧಿಪುರ ಜೀವ ವಿಮಾ ನಿಗಮ(ಎಲ್.ಐ.ಸಿ)ಆಫೀಸ್ ಎದುರು ಸಂಪರ್ಕಿಸಬಹುದಾಗಿದೆ ಎಂದು ಕಲ್ಯಾಣ ಅಧಿಕಾರಿಗಳಾದ ಆರ್. ಎಸ್. ಪಾಟೀಲರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ