ರಸ್ತೆ ಬಂದ್ ಹಿಂಪಡೆಯುವಂತೆ ಒತ್ತಾಯಿಸಿ ತಹಸೀಲ್ದಾರ್‌ಗೆ ಮನವಿ
ಲೋಕದರ್ಶನ ವರದಿ,
ಜಮಖಂಡಿ : 16: ತಾಲೂಕಿನ ತುಂಗಳ ಗ್ರಾಮದಲ್ಲಿ ಸಂಚಾರಕ್ಕೆ ಅಡೆತಡೆಗೊಳಿಸಿ ರಸ್ತೆ ಬಂದ್ ಮಾಡಿದ್ದನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ, ನೂರಾರು ಗ್ರಾಮಸ್ಥರು ತಹಶೀಲ್ದಾರ ಸದಾಶಿವ ಮಕ್ಕೋಜಿ ಅವರಿಗೆ ಮನವಿ ಸಲ್ಲಿಸಿದರು.
ತುಂಗಳ ಗ್ರಾಮದಿಂದ ಬಾಡಗಿ (ದರ್ಗಾ ಬಾಡಗಿ) ಹೋಗುವ ರಸ್ತೆಯನ್ನು ಕೆಲವರು ಬಂದ್ ಮಾಡಿದ್ದು, ಇದರಿಂದಾಗಿ ತುಂಗಳ ಗ್ರಾಮಸ್ಥರಿಗೆ ಹಾಯ್ದು ಹೋಗಲು ತುಂಬಾ ತೊಂದರೆಯಾಗಿರುತ್ತದೆ. ಈ ರಸ್ತೆಯನ್ನು ಬಂದ್ ಮಾಡಿದವರು ಇನ್ನೂ ತೆರವು ಮಾಡಿರುವುದಿಲ್ಲ. ಈ ರಸ್ತೆ ಹಾಳಾಗಿರುವುದಲ್ಲದೇ ಸಾರ್ವಜನಿಕರಿಗೆ ಹಾಯ್ದಾಡಲು ಯಾವುದೇ ಸಂಪರ್ಕ ಇಲ್ಲದಂತಾಗಿದೆ. ಕೂಡಲೇ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ರಸ್ತೆ ತೆರವಿಗೆ ಕ್ರಮಕೈಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ರಮೇಶ ನ್ಯಾಮಗೌಡ, ಪಂಚಾಕ್ಷರಿ ಮಠಪತಿ, ಒರುಶರಾಮ ಕುಂಬಾರ, ಶ್ರೀಕಾಂತ ಕನಾಳ, ಕೃಷ್ಣಾ ತಿಮ್ಮಾಪೂರ, ವಿಠ್ಠಲ ಹಟ್ಟಿ, ಹನುಮಂತ ತೇಲೆ, ಶಿವಪ್ಪ ಕರೋಶಿ, ವಿಠ್ಟಲ ದಳವಾಯಿ,ಶಿವಪ್ಪ ತಳವಾರ, ಶಿವಾನಂದ ಮಗದುಮ, ಈರಪ್ಪ ತುಂಗಳ, ರಾಮಪ್ಪ ಬಂಡಿಗಣಿ,ರವೀಂರ ಹೊಸುರ,ಭೀಮರಾಯ ಪೂಜಾರಿ, ಹೊನ್ನಪ್ಪ ಕರಿಗಾರ, ಬಸಪ್ಪ ಹುನ್ನೂರ, ಲಕ್ಷ್ಮಣ ಗುರವ, ರಾಘವೇಂದ್ರ ಕುಂಬಾರ ಸೇರಿದಂತೆ ಅನೇಕ ಮಹಿಳೆಯರು ಸಹ ಇದ್ದರು,