ಚಿಕ್ಕೋಡಿ

ಅನ್ನದಾನೇಶ್ವರ ಶ್ರೀಗಳ ಕಾರ್ಯ ಪ್ರಶಂಸನೀಯ: ಶ್ರೀಶೈಲ್‌

ಅನ್ನದಾನೇಶ್ವರ ಶ್ರೀಗಳ ಕಾರ್ಯ ಪ್ರಶಂಸನೀಯ: ಶ್ರೀಶೈಲ್‌

ಅನ್ನದಾನೇಶ್ವರ ಶ್ರೀಗಳ ಕಾರ್ಯ ಪ್ರಶಂಸನೀಯ: ಶ್ರೀಶೈಲ್‌

ಮಾಂಜರಿ 30: ಭಕ್ತಾದಿಗಳಿಗೆ ಪಂಚ ಪಕ್ವಾಣದ ಭೋಜನದ ಜೊತೆಗೆ ಜ್ಞಾನದಾಸೋಹ ನೀಡುತ್ತಿರುವ ಬಂಡಿಗಣಿಯ ಚಕ್ರವರ್ತಿ ಅನ್ನದಾನೇಶ್ವರ ಶ್ರೀಗಳ ಕಾರ್ಯ ಪ್ರಶಂಸನೀಯ ಎಂದು ಶ್ರೀಶೈಲ್ ಜಗದ್ಗುರು ಡಾ. ಚನ್ನ ಸಿದ್ದರಾಮಯ್ಯ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿಯವರು ಹೇಳಿದರು. ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಬಂಡಿಗಣಿಯ ಚಕ್ರವರ್ತಿ ಅನ್ನದಾನೇಶ್ವರ ಶ್ರೀಗಳಿಂದ ಮೂರು ದಿನಗಳ ಕಾಲ ನಡೆದ ಮಹಾದಾಸೋಹಕ್ಕೆೆ ನೀಡಿ ಅವರು ಮಾತನಾಡಿದರು. ಪ್ರತಿವರ್ಷದಂತೆ ಈ ವರ್ಷ ಕೂಡ ಬಂಡಿಗಣಿ ಮಠದಿಂದ ಮಹಾದಾಸೋಹ ನಡೆಯುತ್ತಿದೆ. ಬಂಡಿಗಣಿ ಮಠದ ದಾಸೋಹ ಕೇವಲ ಸಾಮಾನ್ಯ ದಾಸೋಹ ವಾಗದೆ ಮಹಾದಾಸೋಹವಾಗಿದೆ.  ಹುಗ್ಗಿ, ಹೋಳಿಗೆ, ಹಾಲು, ತುಪ್ಪ, ಮಾಲದಿ, ಸಾಂಡಿಗೆ, ಜಿಲೇಬಿ, ಭಜಿ ಬಿಳಿ ಅನ್ನ, ಮಸಾಲೆ ಅನ್ನ, ಸಾಂಬಾರು, ಬದನೆಕಾಯಿ ಪಲ್ಯ ಸೇರಿದಂತೆ ಇನ್ನು ವಿವಿಧ ಪ್ರಕಾರದ ಪಂಚಪಕ್ವಾನ್ನದ ಭೋಜನವನ್ನು ಭಕ್ತರಿಗೆ ಒಣ ಬಡಿಸುತ್ತಿರುವ ಬಂಡಿಗಣಿ ಮಠದ ಕಾರ್ಯ ನಿಜಕ್ಕೂ ಪ್ರಶಂಸನೀಯ. ಜೊತೆಗೆ ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮ ನಡೆಯುತ್ತದೆ. ದೇಶದ ವಿವಿಧ ಪುಣ್ಯಕ್ಷೇತ್ರಗಳಲ್ಲಿ ಬಂಡಿಗಣಿ ಮಠದ ದಾಸೋಹವನ್ನು ಮೆಚ್ಚಿ ಪ್ರಸಕ್ತ ವರ್ಷ ಕರ್ನಾಟಕ ಸರ್ಕಾರವು ಚಕ್ರವರ್ತಿ ಅನ್ನದಾನೇಶ್ವರ ಶ್ರೀಗಳಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿರುವುದು ಅತ್ಯಂತ ಖುಷಿಯನ್ನು ತಂದಿದೆ.  ಅನ್ನ ದಾನೇಶ್ವರ ಶ್ರೀಗಳ ಕಾರ್ಯ ಇವತ್ತು ಕರ್ನಾಟಕ ರಾಜ್ಯಾದ್ಯಂತ ಪಸರಿಸುವುದು ಮಾದರಿ ಕಾರ್ಯ ಎಂದರು. ಸದಾ ಯಾವತ್ತು ಅನ್ನ ದಾನೇಶ್ವರ ಶ್ರೀಗಳ ಮೇಲೆ ಹಾಗೂ ಅವರ ಭಕ್ತರ ಮೇಲೆ ವೀರಭದ್ರೇಶ್ವರ ದೇವರ ಆಶೀರ್ವಾದ ಸದಾ ಇರುತ್ತದೆ ಎಂದರು. ಬಂಡಿಗಣಿ ಮಠದ ಚಕ್ರವರ್ತಿ ಅನ್ನದಾನೇಶ್ವರ ಶ್ರೀಗಳು ಮಾತನಾಡಿ ಶ್ರೀಶೈಲ್ ಜಗದ್ಗುರುಗಳು ಯಡೂರಿಗೆ ಧರ್ಮಾಧಿಕಾರಿಗಳಾಗಿ ಆಗಮಿಸಿದ ಬಳಿಕ ಯಡೂರು ಕ್ಷೇತ್ರವು ಕ್ಷಣಕ್ಕೂ ಅಭಿವೃದ್ದಿಯನ್ನು ಹೊಂದುತ್ತಿದೆ. ಬಂಡಿಗಣಿ ಮಠಕ್ಕೆ ಬಂದಂತಹ ಕಷ್ಟದಂತೆ ಯಡೂರ ಮಠಕ್ಕೆ ಕಷ್ಟಗಳು ಬಂದಿದ್ದವು,ಆದರೆ ಶ್ರೀಶೈಲ್ ಜಗದ್ಗುರುಗಳು ಬಂದ ಬಳಿಕ ಈ ಕ್ಷೇತ್ರವು ಬಹಳಷ್ಟು ಉದ್ಧಾರವಾಗಿದೆ. ಶ್ರೀಶೈಲ್ ಜಗದ್ಗುರುಗಳ ಆಶೀರ್ವಾದದಿಂದ ಬಂಡಿಗಣಿ ಮಠದ ದಾಸೋಹದ ದಿಕ್ಕು ಬದಲಾಯಿಸಿ ಇವತ್ತು ದೊಡ್ಡ ಪ್ರಮಾಣದಲ್ಲಿ ದಾಸೋಹ ನಡೆಯುತ್ತಿದೆ ಎಂದರು. 

ಯಡೂರ ಕ್ಷೇತ್ರದ ಉತ್ತರಾಧಿಕಾರಿ ಶ್ರೀರೇಣುಕ ದೇವರು, ಅಂಬಿಕಾನಗರದ ಶ್ರೀಗಳು, ಸಿಪಿಐ ವಿಶ್ವನಾಥ ಚೌಗಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ