ಅಂಕಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಅಂತಾರಾಜ್ಯ ಬೈಕ್ ಕಳ್ಳರ ಬಂಧನ
ಮಾಂಜರಿ 08: ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಅಂಕಲಿ ಪೊಲೀಸ್ ಠಾಣೆಯ ಪಿಎಸ್ಐ ಕಾಡಪ್ಪ ಜಕ್ಕಣ್ಣವರ್ ಇಂದು ಮುಂಜಾನೆ ಅಂಕಲಿ ಗ್ರಾಮದ ರಾಯಬಾಗ ಅಂಕಲಿ ರಸ್ತೆ ಹತ್ತಿರ ಇರುವ ಲಕ್ಷ್ಮಿ ಮಂದಿರ ಹತ್ತಿರ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರ ಯುವಕರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆನಡೆಸಿದಾಗ ಸದರಿ ಯುವಕರು ಅಂತರ್ ರಾಜ್ಯ ಕಳ್ಳರೆಂದು ದೃಢಪಟ್ಟಿದೆ.
ಯುವಕರು ಚಿಕ್ಕೋಡಿ ತಾಲೂಕಿನ ಗಡಿ ಭಾಗದ ಇನ್ನಿತರ ಗ್ರಾಮಗಳಲ್ಲಿ ಸುಮಾರು 5 ಲಕ್ಷ 75,000 ಬೆಲೆಬಾಳುವ 11 ಹೀರೋ ಹೋಂಡಾ ಸ್ಪ್ಲೆಂಡರ್ ಮತ್ತು ಇನ್ನಿತರ ಎರಡು ಕಂಪನಿಯ ಮೋಟರ್ ಸೈಕಲ್ಗಳನ್ನು ಕಳ್ಳತನ ಮಾಡಿದ್ದು ಪತ್ತೆಯಾಗಿದೆ. ಯುವಕರ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಚಿಕ್ಕೋಡಿ ಸಿಪಿಐ ವಿಶ್ವನಾಥ್ ಚೌಗುಲಾ ತಿಳಿಸಿದರು.
ಅಂಕಲಿ ಪೊಲೀಸ್ ಠಾಣೆ ಪಿಎಸ್ಐ ಜಕ್ಕಪ್ಪ ಕಾಡಣ್ಣವರ್ ಇವರು ತಮ್ಮ ಸಿಬ್ಬಂದಿ ಜೊತೆಗೆ ಇಂದು ಮುಂಜಾನೆ ರಾಯಬಾಗ್ ನ ಸಲಾಪುರ ಹತ್ತಿರ ಇರುವ ಲಕ್ಷ್ಮಿ ಮಂದಿರದಲ್ಲಿ ಗಸ್ತ ಹಾಕುವಾಗ ಅನುಮಾನ ಪದ ಇಬ್ಬರ ಯುವಕರು ಬೈಕಿ ಮೇಲೆ ಹೊರಟಾಗ ಅವರನ್ನು ತಡೆದು ಹೆಚ್ಚಿನ ತನಿಖೆ ಮಾಡುವಾಗ ಅವರು ಅಂತರರಾಜು ಕಳ್ಳರನ್ನು ಪತ್ತೆಯಾಗಿದ್ದರಿಂದ ಇಂಚಲಕರಜಿ ಪಟ್ಟಣ ಹತ್ತಿರ ಇರುವ ಬಜಾರ್ ಪೇಟ್ ಖೋತವಾಡಿ ರೇವಾಸಿಯಾದ ನಾಗೇಶ್ ಬಾಜಿರಾವ್ ಕಾಂಬಳೆ ವಯಸ್ಸು 28 ಮಹೇಶ್ ಬನ್ಸಿಲಾಲ್ ಪಟೇಲ್ ವಯಸ್ಸು 23 ಮತ್ತು ವಿಕಾಸ್ ಮನೋಹರ್ ಬೋಸ್ಲೆ ವಯಸ್ಸು 23 ಇವರನ್ನು ಬಂಧನ ಮಾಡಿ ಗಡಿ ಭಾಗದ ಗ್ರಾಮಗಳಲ್ಲಿ ಕಳ್ಳತನ ಮಾಡಿರುವ 5 ಲಕ್ಷ 75,000 ಬೆಲೆಬಾಳುವ 11 ಮೋಟರ್ ಸೈಕಲ್ಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಅಂಕಲಿ ಪೊಲೀಸ್ ಠಾಣೆ ಸಿಬ್ಬಂದಿ ಸಾಥ್ ನೀಡಿದ್ದರು