ಬಳ್ಳಾರಿ

ಅನಿಲ್ ಎಚ್.ಲಾಡ್ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

ಅನಿಲ್ ಎಚ್.ಲಾಡ್ ಜೆಡಿಎಸ್ ಅಭ್ಯರ್ಥಿಯಾಗಿ  ನಾಮಪತ್ರ ಸಲ್ಲಿಕೆ

ಲೋಕದರ್ಶನ ವರದಿ

ಬಳ್ಳಾರಿ  21: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು, ಬೇಸರಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವೆ ಎಂದು ಘೋಷಿಸಿದ್ದರು. ಕೊನೆ ಗಳಿಗೆಯಲ್ಲಿ ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿ.ಎಂ.ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಜೆಡಿಎಸ್ ಟಿಕೆಟ್ ಗಿಟ್ಟಿಸಿಕೊಂಡು ಬೆಂಬಲಿಗರೊಂದಿಗೆ ನಗರದ ಮಹಾನಗರ ಪಾಲಿಕೆ ಕಚೇರಿಯಲ್ಲಿ ಗುರುವಾರ ಚುನಾವಣೆ ಅಧಿಕಾರಿ ರುದ್ರೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಜೆಡಿಎಸ್ ಎಸ್ಟಿ ಮೋರ್ಚಾ  ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಮೀನಳ್ಳಿ ತಾಯಣ್ಣ, ಜಿಲ್ಲಾಧ್ಯಕ್ಷ ಸೋಮನಗೌಡ, ಹರ್ಷದ್, ಮಲ್ಲಿಕಾರ್ಜುನ, ಮಹಾನಂದಿ ಕೊಟ್ಟಂ, ಲಕ್ಷ್ಮಣ ಬಿ, ಕೋಮಲ್ ಹಿರಿಯ ಉಪಾಧ್ಯಕ್ಷ, ಗೌಷಿಯಾ ಬೇಗಂ ಜಿಲ್ಲಾಧ್ಯಕ್ಷರು ಕಿರಣಕುಮಾರ್ ಜೆಡಿಎಸ್ ಯುವ ಮುಖಂಡರು, ಮುಕ್ಕಣ್ಣ ಮುಂಡ್ರಿಗಿ, ಸಿದ್ದೇಶ್ ಇತರರು ಹಾಜರಿದ್ದರು 

ಸುದ್ದಿ ಓದಿ