ಕಾಣೆಯಾಗಿದ್ದ ಆನಂದ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಸಿರುಗುಪ್ಪ 20: ಮಾಟಸುಗುರು ಗ್ರಾಮದ ರೈತನಾಗಿದ್ದ ಆನಂದ್ 35 ವರ್ಷದ ಹರಿಜನ ವೆಂಕಟೇಶರ ಮಗ ಕಳೆದ ಹತ್ತುದಿನಗಳ ಹಿಂದೆ ಕಾಣೆಯಾಗಿದ್ದನು ಈ ಸಂಭಂಧವಾಗಿ ಈತನ ಕುಟುಂಬಸ್ಥರು ಸಿರಿಗೇರಿ ಠಾಣೆಗೆ ತೆರಳಿ ವ್ಯಕ್ತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸಿದ್ದರು ಅಂದಿನಿಂದ ಇದುವರೆಗೂ ಅನೇಕ ಕಡೆಗಳಲ್ಲಿ ಹುಡುಕಲಾಗಿದ್ದರೂ ಈತನ ಪತ್ತೆಯಾಗಿರಲಿಲ್ಲ ಆದರೆ ಸೋಮವಾರ ಸಂಜೆ ತಾಲ್ಲೂಕಿನ ಉತ್ತನೂರು ಗ್ರಾಮದ ಹೊರವಲಯದ ಹೊಲದಲ್ಲಿ ಆನಂದ ನೇಣಿಗೆ ಶರಣಾಗಿರುವ ವಿಷಯ ಕೆಲವರಿಂದ ತಿಳಿದು ಬಂದಿದೆ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಸಿರುಗುಪ್ಪ ಕ್ಷೇತ್ರದ ಶಾಸಕರ ಪುತ್ರ ಹಾಗೂ ತಾಲೂಕು ಬಿಜೆಪಿ ಯುವ ಘಟಕದ ಅಧ್ಯಕ್ಷ ಎಂಎಸ್ ಸಿದ್ದಪ್ಪ ನಾಯಕ ಮತ್ತು ತಹಶೀಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ ಭೇಟಿ ನೀಡಿದ್ದಾರೆ ನಂತರ ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸಿ, ಆನಂದ್ ನೇಣಿಗೆ ಶರಣಾಗಿರುವ ವಿಷಯವನ್ನು ಸಿರಿಗೇರಿ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಸೂಕ್ತ ತನಿಖೆ ನಡೆಸಿ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ".