ವಿದ್ಯಾಭ್ಯಾಸದ ಜತೆಗೆ ಕ್ರೀಡಾ ಮನೋಭಾವ ಹೆಚ್ಚಿಸಿಕೊಳ್ಳಬೇಕು- ಮಲ್ಲಿಕಾರ್ಜುನ್
ವಿದ್ಯಾಭ್ಯಾಸದ ಜತೆಗೆ ಕ್ರೀಡಾ ಮನೋಭಾವ ಹೆಚ್ಚಿಸಿಕೊಳ್ಳಬೇಕು- ಮಲ್ಲಿಕಾರ್ಜುನ್
ಬ್ಯಾಡಗಿ 05: ಶ್ರೇಷ್ಠ ಸಾಧಕರು ನಿರಂತರ ಸಾಧನೆಯಿಂದ ಯಶಸ್ವಿಯಾಗುತ್ತಾರೆ. ವಿದ್ಯಾರ್ಥಿಗಳು ಕೂಡ ಕಲಿಕೆ, ಕ್ರೀಡೆ ಮತ್ತಿತರ ಚಟುವಟಿಕೆಗಳಲ್ಲಿ ನಿರಂತರ ಸಾಧನೆ ಮಾಡಬೇಕು; ಆಗ ಮಾತ್ರ ಶ್ರೇಷ್ಟ ವ್ಯಕ್ತಿಗಳಾಗಲು ಸಾದ್ಯ ಎಂದು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ್ ಕೆ ಎಂ ಹೇಳಿದರು.
ಜಿಲ್ಲಾ ಪಂಚಾಯತ್ ಹಾವೇರಿ ತಾಲೂಕು ಪಂಚಾಯತ್ ಬ್ಯಾಡಗಿ ಕಾಲ ಶಿಕ್ಷಣ ಇಲಾಖೆ ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಗಳ ಕಾರ್ಯಾಲಯ ಬ್ಯಾಡಗಿ ತಾಲೂಕು ಮಟ್ಟದ 14ರಿಂದ 17 ವರ್ಷದ ವಯೊಮಾನದ 2025 26 ನೇ ಸಾಲಿನ ಬಾಲಕ ಬಾಲಕಿಯರ ಇಲಾಖೆ ಕ್ರೀಡಾಕೂಟಕ್ಕೆ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದವರು. ದೈಹಿಕ ಆರೋಗ್ಯ ಮಾನಸಿಕ ಆರೋಗ್ಯಕ್ಕೆ ಪೂರಕವಾಗಿರುತ್ತದೆ ಆರೋಗ್ಯವಾದ ಶರೀರದಲ್ಲಿ ಆರೋಗ್ಯಕರವಾದ ಮನಸ್ಸಿರುತ್ತದೆ ಕ್ರೀಡೆಗಳು ವಿದ್ಯಾಭ್ಯಾಸದ ಒಂದು ಅಂಗವಾಗಿದೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಆರೋಗ್ಯ ಚೆನ್ನಾಗಿರುತ್ತದೆ ದೈಹಿಕ ಆರೋಗ್ಯ ಚೆನ್ನಾಗಿರುವವರಿಗೂ ಮಾನಸಿಕ ಏಕಾಗ್ರತೆ ಹಾಗೂ ಆರೋಗ್ಯ ಲಭಿಸುತ್ತದೆ ಕ್ರೀಡಾಪಟುಗಳು ಸೋಲು ಗೆಲುವಿಗಿಂತ ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಬೇಕು ಕ್ರೀಡೆಗಳಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕೆಂದು ಹೇಳಿದರು.
ಶಾಲಾ ಹಂತದಲ್ಲಿ ವಿದ್ಯಾಭ್ಯಾಸದ ಜತೆಗೆ ಕ್ರೀಡಾ ಮನೋಭಾವ ಬೆಳೆಸಿಕೊಂಡರೆ ಸಾಮಾನ್ಯ ಜ್ಞಾನ ಹೆಚ್ಚುತ್ತದೆ. ವಿದ್ಯಾರ್ಥಿಗಳು ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು ಇದರಿಂದ ಮಕ್ಕಳಲ್ಲಿ ಮಾನಸಿಕ ವಾಗಿ ಸದೃಢವಾಗಿ ಬೆಳೆಯಲು ಸಾಧ್ಯ ಎಂದು ಒಲಂಪಿಕ್ ದೀಪವನ್ನು ಬೆಳಗಿಸುವ ಮೂಲಕ ಪುರಸಭೆಯ ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಎರೆಸೀಮಿ ಹೇಳಿದರು. ಕಾರ್ಯಕ್ರಮದಲ್ಲಿ ಸುಭಾಷ್ ಮಾಳಗಿ, ಪುರಸಭೆ ಮುಖ್ಯ ಅಧಿಕಾರಿ ವಿನಯ್ ಕುಮಾರ್ ಹೊಳೆಪ್ಪ ಗೋಳ. ಪುರಸಭೆ ಸದಸ್ಯರಾದ ದುರ್ಗೇಶ್ ಗೋಣೆಮ್ಮನವರ. ಅಕ್ಷರ ದಾಸೋಹ ಅಧಿಕಾರಿ ಮಲ್ಲೇಶಪ್ಪ ಹುಲ್ಯಾಳ. ಮುಖ್ಯ ಗುರುಗಳಾದ ಸುಭಾಷ್ ಎಲಿ. ಯಮನಕ್ಕನವರ್ . ಎಚ್ ಪಿ ದಾಸರ. ಹಾಗೂ ತಾಲೂಕಿನ ದೈಹಿಕ ಶಿಕ್ಷಕರು ಶಿಕ್ಷಕಿಯರು ಹಾಗೂ ಅನೇಕರು ಉಪಸ್ಥಿತರಿದ್ದರು.