ಎಲ್ಲಾ ಮತದಾರರು ಚುನಾವಣಾ ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ : ಹರಿಜನ
ಎಲ್ಲಾ ಮತದಾರರು ಚುನಾವಣಾ ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ : ಹರಿಜನ
ಶಿಗ್ಗಾವಿ 03 : ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಎಲ್ಲಾ ಮತದಾರರು ಚುನಾವಣಾ ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ನಿಲಯ ಪಾಲಕ ರಮೇಶ ಹರಿಜನ ಕರೆ ನೀಡಿದರು.
ಪಟ್ಟಣದ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ನಿಲಯಪಾಲಕರ ನೇತೃತ್ವದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಕಡ್ಡಾಯವಾಗಿ ಮತದಾನ ಮಾಡುವ ಬಗ್ಗೆ ಅರಿವನ್ನು ಮೂಡಿಸಲಾಯಿತು. ಅಲ್ಲದೇ ತಾಲೂಕಿನಲ್ಲಿ ಕರ್ನಾಟಕ ವಿಧಾನಸಭಾ ಉಪಚುನಾವಣೆಗೆ ನವಂಬರ್-13 ರಂದು ಮತದಾನ ನಡೆಯಲಿದ್ದು, ದೂರದ ಊರಿನಲ್ಲಿ ವಾಸವಾಗಿರುವ ತಮ್ಮ ಪೋಷಕರಿಗೆ ನಿಲಯಾರ್ಥಿಗಳು ಮನವಿ ಸಂದೇಶ ಹೊತ್ತ ಅಂಚೆ ಪತ್ರಗಳನ್ನು ರವಾನೆ ಮಾಡಿದರು.
ನಿಲಯದ ಸಿಬ್ಬಂದಿಗಳಾದ ರೇಖಾ ಮಾಡ್ಲಿ, ಕಾವ್ಯಾ ಸುರಣಗಿ,ನಿಂಬವ್ವ ಸಂಗೂರ್, ಪುಟ್ಟವ್ವ ಗೊರವರ ಹಾಜರಿದ್ದರು.