‘ಸೆಲ್ಫಿ’ಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಅಕ್ಷಯ್ ಕುಮಾರ್, ಇಮ್ರಾನ್ ಹಶ್ಮಿ
ಮುಂಬೈ: ಜನೆವರಿ 12 ಬಾಲಿವುಡ್ ಸ್ಟಾರ್ಗಳಾದ ಅಕ್ಷಯ್ ಕುಮಾರ್ ಮತ್ತು ಇಮ್ರಾನ್ ಹಶ್ಮಿ ‘ಸೆಲ್ಫಿ’ಗೆ ರೆಡಿಯಾಗಿದ್ದಾರೆ. ಹೌದು ಇವರಿಬ್ಬರು ಸೆಲ್ಫಿ ಸಿನಿಮಾ ಮೂಲಕ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಈ ಜೋಡಿ ಒಟ್ಟಿಗೆ ಸೆಲ್ಫಿ ತೆಗೆದ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವ ಮೂಲಕ ಸೆಲ್ಫಿ ಸಿನಿಮಾದ ಮೇಲೆ ಪ್ರೇಕ್ಷಕರಿಗೆ ಕುತೂಹಲ ಹುಟ್ಟುವಮತೆ ಮಾಡಿದ್ದಾರೆ. ಸೆಲ್ಫಿ ಸಿನಿಮಾವನ್ನು ರಾಜ್ ಮೆಹ್ತಾ ನಿರ್ದೇಶಿಸುತ್ತಿದ್ದಾರೆ.
ಅಕ್ಷಯ್ ಕುಮಾರ್ ಮತ್ತು ಇಮ್ರಾನ್ ಹಶ್ಮಿ ನೃತ್ಯದ ವಿಡಿಯೋ ಅಪ್ಲೋಡ್ ಮಾಡಿರುವ ನಿರ್ಮಾಪಕ ಕರಣ್ ಜೋಹರ್ “ಇಬ್ಬರು ಸ್ಮಾಶಿಂಗ್ ನಟರಾದ ಅಕ್ಷಯ್ ಕುಮಾರ್ ಮತ್ತು ಇಮ್ರಾನ್ ಹಶ್ಮಿ ಮತ್ತು ರಾಜ್ ಮೆಹ್ತಾ ನಿರ್ದೇಶನದ #ಸೆಲ್ಫಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೂಟಿಂಗ್ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ಅಕ್ಷಯ್ ಕುಮಾರ್ ಅವರು ಕೂಡ ಹೊಸ ಚಿತ್ರ ಸೆಲ್ಫಿಯ ಟೀಸರ್ ಅನ್ನು ಸಹ ಹಂಚಿಕೊಂಡು #ಸೆಲ್ಫಿ ಸಿನಿಮಾವು ಮನರಂಜನೆ, ನಗು ಮತ್ತು ಭಾವನೆಗಳ ಕಡೆಗೆ ನಿಮ್ಮನ್ನು ಕರೆದೊಯ್ಯುವ ಪ್ರಯಾಣ. ಶೂಟಿಂಗ್ ಶೀಘ್ರದಲ್ಲೇ ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ.
ಇಮ್ರಾನ್ ಹಶ್ಮಿಯೊಂದಿಗಿನ ಸೆಲ್ಫಿ ಫೋಟೋ ಹಂಚಿಕೊಂಡು ನಾನು ಪರ್ಫೆಕ್ಟ್ ಸೆಲ್ಫಿ ಪಾಟ್ರ್ನರ್ ಅನ್ನು ಪಡೆದಿದ್ದೇನೆಯೇ ಎಂದು ಕೇಳಿದ್ದರು.