ರಾಣೆಬೆನ್ನೂರ

ಅಭಿಜಾತೆ ರಂಗ ಕಲಾವಿದೆ ನಾಗರತ್ನಮ್ಮ ಚಿಕ್ಕಮಠ ಇನ್ನಿಲ್ಲ

ಅಭಿಜಾತೆ ರಂಗ ಕಲಾವಿದೆ ನಾಗರತ್ನಮ್ಮ ಚಿಕ್ಕಮಠ ಇನ್ನಿಲ್ಲ

ಅಭಿಜಾತೆ ರಂಗ ಕಲಾವಿದೆ ನಾಗರತ್ನಮ್ಮ ಚಿಕ್ಕಮಠ ಇನ್ನಿಲ್ಲ

ರಾಣೇಬೆನ್ನೂರು 28:  ನಾಡು ಕಂಡ ಅಪ್ರತಿಮ ಅಭಿಜಾತೆ ರಂಗ ಕಲಾವಿದೆ, ಮಂಜುನಾಥ ನಾಟ್ಯ  ಸಂಘದ, ಸ್ಥಾಪಕರು ಮತ್ತು ಕಲಾವಿದೆ ನಾಗರತ್ನ ನಿಜಗುಣಿ ಚಿಕ್ಕಮಠ ( 68) ಅವರು,ಶನಿವಾರ ರಾತ್ರಿ ತಿರ್ವ ಹೃದಯಾಘಾತದಿಂದ ನಿಧನ ಹೊಂದಿದರು, ಅವರ ನಿಧನ ದಿಂದಾಗಿ, ವೃತ್ತಿ ರಂಗಭೂಮಿಯ ಓರ್ವ ಹಿರಿಯ ಅಪ್ರತಿಮ ಕಲಾವಿದೆಯನ್ನು ಕಳೆದುಕೊಂಡಂತಾಗಿದೆ. ನಾಗರತ್ನಮ್ಮ ತಮ್ಮ ನಾಲ್ವರು ಕಲಾವಿದ ಪುತ್ರರು, ಮೊಮ್ಮಕ್ಕಳು ಮರಿ ಮೊಮ್ಮಕ್ಕಳು ಮತ್ತು ಅಪಾರ ಬಂಧುಗಳ ಹಾಗೂ ನಾಡಿನ ಅನೇಕ ಸಹೋದ್ಯೋಗಿ ಕಲಾವಿದರನ್ನು ಅಗಲಿದ್ದಾರೆ.         

  ತಮ್ಮ ಮಾಲಿಕತ್ವದಲ್ಲಿದ್ದ  ಮಂಜುನಾಥ ನಾಟ್ಯ  ಸಂಘದ ಮೂಲಕ, ನಾಲ್ಕುವರೆ ದಶಕಗಳ ಕಾಲ, ಪೌರಾಣಿಕ ,ಸಾಮಾಜಿಕ, ಐತಿಹಾಸಿಕ ನಾಟಕಗಳ ಪ್ರದರ್ಶನದ ಮೂಲಕ, ಪ್ರಬುದ್ಧ ರಂಗಭೂಮಿ ಕಲಾವಿದೆಯಾಗಿ ಗುರುತಿಸಿಕೊಂಡಿದ್ದರು.  ತಮ್ಮ ಮಂಜುನಾಥ  ನಾಟ್ಯ ಸಂಘದ, ಕಂಪನಿಯ ಮೂಲಕ ರಾಜದಾದ್ಯಂತ ಸಂಚರಿಸಿ, ಹತ್ತಾರು ಸಾವಿರ ಪ್ರದರ್ಶನ  ನೀಡುವುದರ ಮೂಲಕ ವೃತ್ತಿ   ರಂಗಭೂಮಿಯ  ಜೀವಂತಿಕೆಗೆ ಸಾಕ್ಷಿಯಾಗಿದ್ದರು.     

     ನಾಟಕ ರಂಗ, ಚಲನಚಿತ್ರ ರಂಗದ ಅಂದಿನ ಮೇರು ನಟಿಯರಾದ, ಉಮಾಶ್ರೀ, ಮಾಲತಿ ಸುಧೀರ್, ಉದಯಕುಮಾರ್ ನರಸಿಂಹರಾಜು,ವಜ್ರಮುನಿ, ದತ್ತಣ್ಣ, ದೊಡ್ಡಣ್ಣ, ಸೇರಿದಂತೆ ಮೊದಲಾದ ದಿಗ್ಗಜ, ನಟ,ನಟಿಯರನ್ನು ತಮ್ಮ ಕಂಪನಿಗೆ  ಆಹ್ವಾನಿಸಿ ಪ್ರಸಿದ್ಧಿ ಪಡೆದಿದ್ದರು. ಅಂದು ಅತ್ಯಂತ ಪ್ರಸಿದ್ಧಿ ಮತ್ತು ಉಚ್ರಾಯ  ಜನಪ್ರಿಯತೆಯಲ್ಲಿದ್ದ, ಮಂಜುನಾಥ ನಾಟ್ಯ ಸಂಘವೂ, ಆಹ್ವಾನಿಸಿದ ಯಾರೇ, ಎಷ್ಟೇ ದೊಡ್ಡ ಕಲಾವಿದರಿರಲಿ, ಮರು ಮಾತನಾಡದೆ, ಬಂದು ಪಾತ್ರ ನಿರ್ವಹಿಸಿ, ನಾಟಕ ಕಂಪನಿಯ ಗೌರವ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗುತ್ತಿದ್ದರು. ನಾಗರತ್ನಮ್ಮನವರ ತವರು ಮನೆಯವರೊ ಸಹ ಸಂಪೂರ್ಣ ಕಲಾವಿದರ ಕುಟುಂಬ. ಅದೇ ರೀತಿ ತಮ್ಮ ಪತಿ ನಿಜಗುಣಿ ಚಿಕ್ಕಮಠ, ಅವರ ಮನೆತನವು ಸಹ, ವೃತ್ತಿ ರಂಗಭೂಮಿಯ ಕಲಾವಿದರಾಗಿದ್ದರು.       

    ನಾಗರತ್ನ ಮತ್ತು ನಿಜಗುಣಿ ಚಿಕ್ಕಮಠ ಅವರ ಜೀವಿತದ ಕೊನೆಯವರೆಗೂ, ರಂಗಭೂಮಿ ಮರೆಯಾಗುತ್ತಿರುವ ಇಂತಹ ಸಂದರ್ಭದಲ್ಲಿಯೂ ಸಹ, ತಮ್ಮ ಕಂಪನಿಯ  ನಾಟಕಗಳನ್ನು ಪ್ರದರ್ಶಿಸುವ ಮೂಲಕ, ಕುಟುಂಬದ 10 ಜನರು,ಸೇರಿ 11 ಜನ ವೃತ್ತಿ ಕಲಾವಿದರ, ಜೀವನ ಬದುಕಿಗೆ ಆಸರೆಯಾಗಿದ್ದರು. ಅವರ ನಿಧನದಿಂದಾಗಿ ವೃತ್ತಿ ರಂಗಭೂಮಿಯು ಪ್ರಬುದ್ಧ ಕಲಾವಿದೆಯನ್ನು ಕಳೆದುಕೊಂಡು ಬಡವಾದಂತತಾಗಿದೆ. ಸಂತಾಪ : ನಾಗರತ್ನಮ್ಮ ಚಿಕ್ಕಮಠ ಅವರ ನಿಧನವು, ತುಂಬಲಾರದ ನಷ್ಟವಾಗಿದೆ. ಎಂದು ಶಾಸಕ ಪ್ರಕಾಶ್ ಕೋಳಿವಾಡ, ರವೀಂದ್ರ ಗೌಡ ಪಾಟೀಲ್, ರುದ್ರ​‍್ಪ ದಾನಪ್ಪನವರ್, ಕೆ.ಸಿ.ನಾಗರಜ್ಜಿ, ಡಾ. ಆರ್‌.ಎಂ.ಕುಬೇರ​‍್ಪ, ಬಸವರಾಜ ಪಾಟೀಲ್, ಕೆ.ಎಸ್‌. ನಾಗರಾಜ್, ಗುಡ್ಡಪ್ಪ ಹಿಂದಿನಮನಿ, ಗುಡ್ಡರಾಜ ಹಲಗೇರಿ, ಹಾಗೂ ಅನೇಕ ಗಣ್ಯರು, ಸಾಂಸ್ಕೃತಿಕ ಸಂಘಟನೆಯ ಮುಖಂಡರು ತಮ್ಮ ತೀರ್ವ ಸಂತಾಪ ಸೂಚಿಸಿದ್ದಾರೆ. 


ಸುದ್ದಿ ಓದಿ