ಅಂಕಸಾಪುರದ ಯುವಕ ಕಾಣೆ
ರಾಣೆಬೆನ್ನೂರು 20: ತಾಲೂಕಿನ ಅಂಕಸಾಪುರ ಗ್ರಾಮದ ಯುವಕನೂರ್ವನು ಕಾಣೆಯಾಗಿರುವ ಕುರಿತಂತೆ ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನ. 20ರಂದು ದೂರು ದಾಖಲಾಗಿದೆ. ಅಂಕಸಾಪುರ ಗ್ರಾಮದ ಅವಿವಾಹಿತ ಯುವಕ ಮಲ್ಲಪ್ಪ ಹನುಮಂತಪ್ಪ ನಡುವಿನಮನಿ ಎಂಬಾತನೇ ಕಾಣೆಯಾದ ವ್ಯಕ್ತಿ. ನ.8ರಂದು ಬೆಳಿಗ್ಗೆ ಮನೆಯಿಂದ ಹೊರಹೋದವನು ಇದುವರೆಗೂ ಪತ್ತೆ ಆಗಿರುವುದಿಲ್ಲ ಕೂಡಲೇ ಇವನನ್ನು ಹುಡುಕಿಕೊಡಲು ತಂದೆ ಹನುಮಂತಪ್ಪ ನಾಗಪ್ಪ ನಡುವಿನಮನಿ ಅವರು ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈತನು ಯಾರಿಗಾದರೂ ಕಂಡಲ್ಲಿ, ಪತ್ತೆಯದಲ್ಲಿ ಗ್ರಾಮೀಣ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ (08373-266434-9480804552) ಪಿಎಸ್ಐ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ