ವಿದ್ಯಾರ್ಥಿಗಳಿಗೆ ಗುರಿ ಸಾಧಿಸುವ ಮಾರ್ಗ ತೋರಿಸುವನೇ ನಿಜವಾದ ಶಿಕ್ಷಕ
ಲೋಕದರ್ಶನ ವರದಿ
ಶಿಗ್ಗಾವಿ : ಶಿಕ್ಷಕ ಮತ್ತು ವಿದ್ಯಾರ್ಥಿಗಳ ಸಂಬಂದ ಅವಿನಾವುಬಾವ ಸಂಬಂದವಾಗಿದ್ದು, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ, ಜೀವನಮೌಲ್ಯಗಳನ್ನು, ಗುರಿ ಸಾಧಿಸುವ ಮಾರ್ಗವನ್ನು ತೋರಿಸುವನೇ ನಿಜವಾದ ಶಿಕ್ಷಕನಾಗಿದ್ದಾನೆ ಎಂದು ದಿ.ಮಾರ್ಡನ್ ಹೈಸ್ಕೂಲ್ ನಿವೃತ್ತ ಮುಖ್ಯ ಶಿಕ್ಷಕ ಎ.ಕೆ.ಆದವಾನಿಮಠ ಹೇಳಿದರು.
ಬಂಕಾಪೂರ ಪಟ್ಟಣದ ರೇಣುಕಾ ಪ್ಯಾಲೇಸಿನಲ್ಲಿ ನಡೆದ ದಿ.ಮಾರ್ಡನ್ ಹೈಸ್ಕೂಲಿನ 2001-02ನೇ ಸಾಲಿನ ಎಸ್ಎಸ್ಎಲ್ಸಿ ಹಳೆ ವಿದ್ಯಾರ್ಥಿಗಳಿಂದ ನಡೆದ ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನುದ್ದೇಸಿಸಿ ಮಾತನಾಡಿದ ಅವರು, ಗುರುವಿನ ಮಾರ್ಗದರ್ಶನದಲ್ಲಿ ನಡೆಯುವ ವಿದ್ಯಾರ್ಥಿ ಸಮಾಜದ ಆಸ್ತಿಯಾಗಿ ಹೋರ ಹೋಮ್ಮಲು ಸಾಧ್ಯವಿದೆ. ಹಳೆ ವಿದ್ಯಾರ್ಥಿ ಗಳು ಈಗ ವಿವಿಧ ಉನ್ನತ ಹುದ್ದೆಯಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು, ನಿಮ್ಮ, ನಿಮ್ಮ ಇಲಾಖೆಗಳಲ್ಲಿ ಉತ್ತಮ ಸೇವೆ ಮಾಡುವ ಮೂಲಕ ಒಳ್ಳೆಯ ನಾಗರಿಕರಾಗಿ ಬಾಳುವಂತೆ ಹಳೆಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಹಳೆಯ ವಿದ್ಯಾರ್ಥಿ ವಿರೇಶ ರುದ್ರಾಕ್ಷಿ ಮಾತನಾಡಿ, ನಮ್ಮನ್ನು ಹೆತ್ತ ತಂದೆ, ತಾಯಿ ಲಾಲನೆ ಪಾಲನೆ ಮಾಡಿದರೆ, ಶಿಕ್ಷಕ ಬಂಡೆಯಂತಿರುವ ವಿದ್ಯಾರ್ಥಿಗಳ ಮನಸ್ಸನ್ನು ಮೂರ್ತಿಯನ್ನಾಗಿಸಿ, ಸಮಾಜಕ್ಕೆ ಉತ್ತಮ ಪ್ರಜೆಗಳನ್ನಾಗಿ ಕೋಡುಗೆಯಾಗಿ ನೀಡಿದ ಶಿಕ್ಷಕರ ಋಣವನ್ನು ತೀರಿಸಲು ಸಾದ್ಯವಿಲ್ಲವಾದರೂ, ಅವರನ್ನು ಸ್ಮರಿಸುವುದು ವಿದ್ಯಾರ್ಥಿಗಳ ಆದ್ಯ ಕರ್ತವ್ಯವಾಗಿದೆ. ಆ ಹಿನ್ನಲೆಯಲ್ಲಿ ಹಳೆಯ ವಿದ್ಯಾರ್ಥಿಗಳೆಲ್ಲರೂ ಸೇರಿ ಗುರುವನ್ನು ಸ್ಮರಿಸುವ ಈ ದಿನ ನಮಗೆ ಎಂದೇಂದಿಗೂ ಮರೆಯದ ಸುದಿನವಾಗಿದೆ ಎಂದು ತಮ್ಮ ವಿದ್ಯಾರ್ಥಿ ಜೀವನದ ಶಾಲಾದಿನಗಳನ್ನು ಮೇಲಕು ಹಾಕಿದರು.
ನಿವೃತ್ತ ಶಿಕ್ಷಕರಾದ ಬಿ.ಇ.ಕೊಡ್ಲಿ, ಮುಕ್ಕಣ್ಣವರ, ಎ.ಕೆ.ಆದವಾನಿಮಠ, ಅನಿಲಕುಮಾರ ದೇಸಾಯಿ, ಐ.ಡಿ.ಗೋಜಾಳ, ಬಸವರಾಜ ಸವೂರ, ಎಸ್.ಜಿ. ಈರಣ್ಣ, ವೀರಣ್ಣ ಅಣ್ಣಿಗೇರಿ, ಎಸ್.ವೈ.ದಾಸರ, ದೇಸಾಯಿ, ಅಣ್ಣಿಗೇರಿ, ಶ್ರೀಕಾಂತ ಕೊಂಚಿಗೇರಿ ಸೇರಿದಂತೆ ಪ್ರಶಕ್ತ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ಸವಿನೆನಪಿನ ಕಾಣಿಕೆ ಸಮರ್ಪಿಸಿ ಸನ್ಮಾನಿಸಿ ಗೌರವಿಸಲಾಯಿತು.
ಹಳೆ ವಿದ್ಯಾರ್ಥಿಗಳಾದ ಎನ್.ಕೆ.ತಳ್ಳಳ್ಳಿ, ಸುವರ್ಣ ಮಾಳಗಿಮನಿ, ಶಂಭು ವಟವಟಿ, ಜಗದೀಶ ಕೌಜಗೇರಿ, ರುದ್ರೇಶ ಪವಾಡಿ, ವಿರೇಂದ್ರ ಚೌವಡಿ,ರುದ್ರೇಶ ಪವಾರ, ಸಿದ್ದು ಕುರಗೋಡಿ,ಮಂಜು ಸವೂರ, ವಿರೇಶ ಚೌಡಿ, ಗೋಪಾಲ ದೇಶಪಾಂಡೆ ಮಂಗಳಾ ಕೋರಿ ಸೇರಿದಂತೆ ಇತರರು ಇದ್ದರು