ಶಿಗ್ಗಾವ್

ತಮಿಳುನಾಡಿಗೆ ನೀರು ಹರಿಸಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಮನವಿ

ತಮಿಳುನಾಡಿಗೆ ನೀರು ಹರಿಸಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಮನವಿ

ಲೋಕದರ್ಶನ ವರದಿ

ಶಿಗ್ಗಾವಿ 22:  ರಾಜ್ಯದಲ್ಲಿ ತೀರ್ವ ನೀರಿನ ಅಭಾವ ಉಂಟಾಗಿದ್ದು ಕಾವೇರಿ ನದಿಯ ನೀರನ್ನು ಕೆ.ಆರ್.ಎಸ್. ಡ್ಯಾಮಿನಿಂದ ತಮಿಳುನಾಡಿಗೆ ನೀರು ಹರಿಸಿರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಹಾಗೂ ಇನ್ನು ಮುಂದೆ ಮೇಕೆಧಾಟು, ಕೃಷ್ಣಾ ನದಿಯ ನೀರನ್ನು ತಮಿಳುನಾಡು ಸೇರಿದಂತೆಅನ್ಯ ರಾಜ್ಯಗಳಿಗೆ ಹರಿಸದಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಶಿಗ್ಗಾವಿ ತಾಲೂಕಾ ಸಮಿತಿಯ ವತಿಯಿಂದ ತಹಶೀಲ್ದಾರ ಅವರಿಗೆ ಮನವಿ ಅರ್ಪಿಸಿದರು

ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಶಿಗ್ಗಾವಿ ತಾಲೂಕ ಸಮಿತಿಯ ವತಿಯಿಂದ ಮನವಿ ಅರ್ಪಿಸಿ ಜಿಲ್ಲಾ ಅಧ್ಯಕ್ಷ ರಾಮು ತಳವಾರ ಮಾತನಾಡಿ ರಾಜ್ಯದಲ್ಲಿ ಮುಂಗಾರು ಮಳೆಯ ಅಬಾವ ತೀರ್ವತರಹದಲ್ಲಿ ಬಾಧಿಸುತ್ತಿದ್ದು, ರಾಜ್ಯದ ಪ್ರಮುಖ ಜಲಾಶಯಗಳಾದ ಕಾವೇರಿ, ಮೇಕೆದಾಟು, ಕೃಷ್ಣಾ ನದಿಗಳು ಸೇರಿದಂತೆ ರಾಜ್ಯದಿಂದ ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಿಗೆ ನೀರನ್ನು ಹರಿಸುವ ಪರಿಸ್ಥಿಯಲ್ಲಿ ಕರ್ನಾಟಕದಲ್ಲಿ ಇರುವುದಿಲ್ಲ. ರಾಜ್ಯದಲ್ಲಿ ಮುಂಗಾರು ಮಳೆಯ ಪರಿಸ್ಥಿತಿಯು ಡೋಲಾಯಮಾನ ಸ್ಥಿತಿಯಲ್ಲಿ ಇದೆಎಂದರು

ತಾಲೂಕಾ ಘಟಕದ ಅಧ್ಯಕ್ಷ ಗಂಗಾದರಯ್ಯ ಕಲ್ಮಠ ಮಾತನಾಡಿ ತಮಿಳುನಾಡಿಗೆ ನೀರು ಹರಿಸುವರಾಜ್ಯ ಸರ್ಕಾರದ ಕ್ರಮಖಂಡನೀಯ. ಇಲ್ಲಿನ ಜನ ಹಾಗೂ ಜಾನವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯ ಜೊತೆಗೆ ಕಾವೇರಿ, ಮೇಕೆದಾಟು, ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಬೆಳೆದ ಕಬ್ಬು, ತೋಟಗಾರಿಕಾ ಬೆಳೆಗಳು ಭತ್ತ ಸೇರಿದಂತೆ ಅನೇಕ ಪಸಲುಗಳಿಗೆ ನೀರಿನ ಕೊರತೆ ಉಂಟಾಗಿದೆ. ಕಾರಣ ರಾಜ್ಯ ಸರಕಾರರೈತರ ಹಿತವನ್ನು ಬಲಿ ಕೊಡದೇ ಯಾವುದೇ ಕಾರಣಕ್ಕೂ ಅನ್ಯ ರಾಜ್ಯಗಳಿಗೆ ನೀರನ್ನು ಹಾಯಿಸಬಾರದೆಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ತಾಲೂಕ ಸಮಿತಿ ಒತ್ತಾಯಿಸುತ್ತದೆ.

     ಬೆಳಗಾವಿ ವಿಭಾಗೀಯ ಸಂಚಾಲಕ ಸುರೇಶ ವನಹಳ್ಳಿ, ಜಿಲ್ಲಾ ಯುವಘಟಕದ ಅಧ್ಯಕ್ಷ ಭರಮಪ್ಪ ದೊಡ್ಡಮನಿ, ತಾಲೂಕಾಗೌರವಾಧ್ಯಕ್ಷ ಬಸವರಾಜ ಗುರನಳ್ಳಿ, ಜಿಲ್ಲಾ ಸಂಚಾಲಕ ಮಾಲತೇಶ ಪ ಕಾಳಿ, ತಾಲೂಕ ಯುವಘಟಕದ ಅಧ್ಯಕ್ಷ ಚಂದ್ರು ಮುಂಚಿನಕೊಪ್ಪ, ತಿಮ್ಮಾಪುರ ಗ್ರಾಮ ಘಟಕದ ಅಧ್ಯಕ್ಷ ಯಲ್ಲಪ್ಪ ಲಕ್ಷ್ಮೀಕೊಪ್ಪ, ಮಂಜುನಾಥ ಮೇಲಿನಮನಿ, ಶರಣಪ್ಪ ಹಿಂಡಿ, ತಿಪ್ಪಣ್ಣ ದಳವಾಯಿ, ನಾಗರಾಜ ಹಿರೇಮಠ, ಮಾಂತೇಶ ಕಮ್ಮಾರ, ಸಣ್ಣಪ್ಪಕೌಲಗೇರಿ, ವೀರಭದ್ರಗೌಡ ಪೋಲಿಸಗೌಡ್ರ, ಶೇಖಪ್ಪ ಬೆಂಡಿಗೇರಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು 

ಸುದ್ದಿ ಓದಿ