ಅಭಿವೃದ್ಧಿ ಪ್ರಗತಿ ಕಾಣದ ರಾಷ್ಟ್ರೀಯ ಹೆದ್ದಾರಿ
ಸಿರುಗುಪ್ಪ: ತಾಲೂಕು ಇಬ್ರಾಹಿಂಪುರ್ ದಿಂದ ತೆಕ್ಕಲಕೋಟೆಗೆ 150-ಂ ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ಸಂಸದರು ಶಾಸಕರು ರಸ್ತೆ ಕಾಮಗಾರಿ ಆರಂಭದ ಪೂಜೆ ನೆರವೇರಿಸಿದರು.
ನಗರದ ಹಜರತ್ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಸರ್ಕಲ್ ದಿಂದ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರಾಷ್ಟ್ರ ಪಿತಾಮಹಾತ್ಮ ಗಾಂಧಿ ಮಹರ್ಷಿ ವಾಲ್ಮೀಕಿ ಕನಕದಾಸ ಬಸವೇಶ್ವರ ಸರ್ಕಲ್ ಮುಖ್ಯ ರಸ್ತೆ ಹದೆಗೆಟ್ಟು ತೆಗ್ಗು ಮಿಟ್ಟೆ ಗುಂಡಿಗಳಿಂದ ರಸ್ತೆ ಹಾಳಾಗಿ ಅಭಿವೃದ್ಧಿ ಪ್ರಗತಿ ಕಾಣದೆ ಭಾರಿ ವಾಹನಗಳು ಓಡಾಡುವುದರಿಂದ ಶಾಲಾ ಮಕ್ಕಳಿಗೆ ನಾಗರಿಕರಿಗೆ ವಾಹನ ಸವಾರರಿಗೆ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ ರಸ್ತೆಗಳಲ್ಲಿ ನೀರು ನಿಂತು ಗಬ್ಬು ವಾಸನೆ ಹೊಲಸಾಗಿ ಸೊಳ್ಳೆಗಳ ಉದ್ಭವ ಸ್ವಚ್ಛತೆ ಇಲ್ಲದೆ ಹದಗೆಟ್ಟ ರಸ್ತೆ ತೆಗ್ಗು ಮಿಟ್ಟೆ ಗುಂಡಿಗಳಿಂದ ಕುಣಿಗಳಾಗಿ ಸಂಭವಿಸುವ ಅಪಘಾತದಿಂದ ಗಾಯ ಸಾವು ನೋವು ಅಪಾಯಕ್ಕೆ ಕಾರಣವಾಗುವುದು ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿರುತ್ತಾರೆ ಎಂದು ಸಾಮಾಜಿಕ ಕಾರ್ಯಕರ್ತ ಜನಾಭಿಪ್ರಾಯ ಮುಖಂಡ ಅಬ್ದುಲ್ ನಬಿ ಅವರು ತಿಳಿಸಿದರು ದು ಸ್ಥಿತಿಯಲ್ಲಿರುವ ರಸ್ತೆ ಅಪಾಯ ತಪ್ಪಿಸಲು ತಾತ್ಕಾಲಿಕ ತಗ್ಗು ಮಿಟ್ಟೆ ಕುಣಿ ಗುಂಡಿ ಸುಗಮವಾಗಿ ಜನರು ಓಡಾಡಲು ನಾಗರಿಕರಿಗೆ ರಸ್ತೆ ನಿಮರ್ಾಣ ವಿಫಲವಾಗಬಾರದು ಸರ್ಕಾರ ಈ ಬಗ್ಗೆ ಗಮನ ಹರಿಸಿ ರಸ್ತೆ ದುರಸ್ತಿ ತೊರಿತ ಕ್ರಮ ಕೈಗೊಂಡು ಸಂಚಾರಕ್ಕೆ ಸುಗಮವಾಗಿ ರಸ್ತೆ ನಿಮರ್ಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಜನಾಭಿಪ್ರಾಯ ಮುಖಂಡ ಅಬ್ದುಲ್ ನಬಿ ಅವರು ಸಾರ್ವಜನಿಕರ ಪರವಾಗಿ ವಿನಂತಿಸಿ ಮನವಿ ಮಾಡಿಕೊಂಡಿದ್ದಾರೆ